Friday, June 9, 2023
HomeEntertainmentಎಂಗೇಜ್ಮೆಂಟ್ ಆದ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ನಟಿ ಹರಿಪ್ರಿಯ ಈ ಕ್ಯೂಟ್ ವಿಡಿಯೋ...

ಎಂಗೇಜ್ಮೆಂಟ್ ಆದ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ನಟಿ ಹರಿಪ್ರಿಯ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಮಸ್ತ್ ಆಗಿದೆ.

Haripriya Dance

ನಟಿ ಹರಿಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೀರ್ ದೋಸೆ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ ನಟಿ ಕನ್ನಡದಲ್ಲಿ ಈವರೆಗೂ ಸುಮಾರು ಮೂವತ್ತಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಸದ್ಯಕ್ಕೆ ನಟಿ ಹರಿಪ್ರಿಯ ಅವರು ಸುದ್ದಿ ಆಗಿರುವುದು ವಸಿಷ್ಟ ಸಿಂಹ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವುದರ ಮೂಲಕ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಂಚಿನ ಕಂಠವನ್ನು ಹೊಂದಿರುವ ನಟ ವಸಿಷ್ಠ ಸಿಂಹ ಅದ್ಭುತವಾದಂತಹ ಧ್ವನಿ ಇಂದಲೇ ಎಲ್ಲರ ಗಮನವನ್ನು ಸೆಳೆದಿದ್ದರೆ. ಈ ಜೋಡಿಗಳು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು ಆದರೆ ತಾವು ಪ್ರೀತಿಸುತ್ತಿರುವ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಕಳೆದ ವಾರವಷ್ಟೇ ದುಬೈ ಪ್ರವಾಸಕ್ಕೆ ಹೋಗಿ ಬಂದ ನಂತರ ಇವರಿಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಸಣ್ಣದಾಗಿ ರಿವಿಲ್ ಆಗಿತ್ತು.

ಏಕೆಂದರೆ ನಟಿ ಹರಿಪ್ರಿಯ ಮತ್ತು ನಟ ವಸಿಷ್ಠ ಸಿಂಹ ಇಬ್ಬರೂ ಕೂಡ ದುಬೈನ ಏರ್ಪೋರ್ಟ್ ನಲ್ಲಿ ಕೈ ಕೈ ಹಿಡಿದು ತಿರುಗಾಡುತ್ತಿದ್ದರು ಇವೆಲ್ಲವನ್ನು ನೋಡಿದಂತಹ ಅಭಿಮಾನಿಗಳು ಇಬ್ಬರು ಕೂಡ ಪ್ರೀತಿಸುತ್ತಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು. ಆದರೆ ಇದಕ್ಕೆ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ಹರಿಪ್ರಿಯ ಮತ್ತು ವಸಿಷ್ಠ ಸಿಂಹ ನೀಡಲಿಲ್ಲ ಈ ವಿಚಾರ ತಣ್ಣಗಾಗುತ್ತಿದ್ದ ಹಾಗೆಯೇ ಮತ್ತೊಂದು ವಿಚಾರ ರಿವೀಲ್ ಆಯ್ತು.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಇಬ್ಬರು ಕೂಡ ಮನೆಯಲ್ಲಿಯೇ ಸರಳವಾಗಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂತ. ಇನ್ನು ನಟಿ ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರವನ್ನು ಸ್ವತಃ ಅವರೇ ಸಣ್ಣದೊಂದು ಕ್ಲೂ ಕೊಡುವ ಮೂಲಕ ರಿಯಲ್ ಮಾಡಿದರು. ಹೌದು ಕಳೆದ 15 ದಿನದ ಹಿಂದೆಯಷ್ಟೇ ಹರಿಪ್ರಿಯ ಅವರು ಮೂಗು ಚುಚ್ಚಿಸಿಕೊಳ್ಳುವಂತಹ ಶಾಸ್ತ್ರವನ್ನು ಮಾಡಿಸಿಕೊಂಡಿದ್ದರು.

ಇದನ್ನು ನೋಡಿ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದರು ಏಕೆಂದರೆ ಇದು ಸಿನಿಮಾಗಾಗಿ ಮಾಡಿದಂತಹ ವಿಡಿಯೋ ಏನಲ್ಲ ಬದಲಾಗಿ ಹರಿಪ್ರಿಯಾ ಅವರೇ ಸ್ವತಃ ಮೂಗು ಚುಚ್ಚಿಸಿಕೊಳ್ಳುತ್ತಿದ್ದರು. ಇದು ನಿಜವಾದ ವಿಡಿಯೋವಾಗಿದೆ ಇನ್ನೂ ಹರಿಪ್ರಿಯಾ ಪಕ್ಕದಲ್ಲಿ ಇರುವವರು ನಿಂತುಕೊಂಡು ಹರಿಪ್ರಿಯಾ ಅವರನ್ನು ಸಂತೈಸುವಂತಹ ವಿಡಿಯೋ ವೈರಲ್ ಆಗಿತ್ತು.

ಆದರೆ ಈ ವಿಡಿಯೋದಲ್ಲಿ ಇರುವಂತಹ ವ್ಯಕ್ತಿ ಯಾರು ಎಂಬುದು ಮಾತ್ರ ತಿಳಿದಿರಲಿಲ್ಲ ಆದರೆ ಕಳೆದ ವಾರ ದುಬೈಗೆ ಹೋಗಿ ಬಂದ ನಂತರ ಹಾಗೂ ನಿಶ್ಚಿತಾರ್ಥವಾಗಿರುವಂತಹ ಫೋಟೋಸ್ಗಳನ್ನು ನೋಡಿದಂತಹ ಅಭಿಮಾನಿಗಳು ಮೂಗು ಚುಚ್ಚಿಸುವಂತಹ ಕಾರ್ಯವನ್ನು ಕೂಡ ವಸಿಷ್ಠ ಸಿಂಹ ಅವರೇ ಮಾಡಿಸಿದ್ದಾರೆ ಎಂದು ತಿಳಿದರು. ಅದೇನೇ ಆಗಲೀ ಸದ್ಯ ಕಂತು ವಸಿಷ್ಟ ಸಿಂಹ ಅಭಿಮಾನಿಗಳು ಮತ್ತು ಹರಿಪ್ರಿಯ ಅಭಿಮಾನಿಗಳು ಈ ಜೋಡಿ ಒಂದಾಗುತ್ತಿರುವಂತಹ ವಿಚಾರವನ್ನು ಕೇಳಿ ಹರುಷವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಹರಿಪ್ರಿಯಾ ಅವರು ಕೂಡ ತಮ್ಮ ನೆಚ್ಚಿನ ಹುಡುಗನನ್ನು ಕೈ ಹಿಡಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟಿ ಹರಿಪ್ರಿಯಾ ಅವರು ಕೂಡ ತಮ್ಮ ಮನೆಯಲ್ಲಿಯೇ ರೆಡ್ ಕಲರ್ ಸಾರಿ ಒಂದನ್ನು ಧರಿಸಿ ತಮ್ಮ ನೆಚ್ಚಿನ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋ ದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ನಿಶ್ಚಿತಾರ್ಥ ಆದ ಬೆನ್ನಲ್ಲೇ ಹೊಸ ಡಾನ್ಸ್ ವಿಡಿಯೋವನ್ನು ರಿವೀಲ್ ಮಾಡಿದ್ದಾರೆ.

ವಸಿಷ್ಠ ಸಿಂಹ ಅವರನ್ನು ವರಿಸಿದ ಕಾರಣವೇ ನಟಿ ಹರಿಪ್ರಿಯ ಅವರು ಇಷ್ಟು ಖುಷಿಯಾಗಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ.