Sunday, June 4, 2023
HomeEntertainmentಸಾಲು ಸಾಲು ವಿವಾದಗಳಿದ್ರೂ, ಕಾಂಟ್ರವರ್ಸಿ ಮಾಡಿಕೊಂಡ್ರು ದರ್ಶನ್ ಗೆ ಇರುವ ಫ್ಯಾನ್ ಫಾಲೋವರ್ಸ್ ಮಾತ್ರ ಕಡಿಮೆಯಾಗುವುದಿಲ್ಲ...

ಸಾಲು ಸಾಲು ವಿವಾದಗಳಿದ್ರೂ, ಕಾಂಟ್ರವರ್ಸಿ ಮಾಡಿಕೊಂಡ್ರು ದರ್ಶನ್ ಗೆ ಇರುವ ಫ್ಯಾನ್ ಫಾಲೋವರ್ಸ್ ಮಾತ್ರ ಕಡಿಮೆಯಾಗುವುದಿಲ್ಲ ಯಾಕೆ ಗೊತ್ತ.?

ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟರ ಸಾಲಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ದರ್ಶನ್ ತಂದೆ ಮೇರು ನಟರಾಗಿದ್ದರು ಕೂಡ ದರ್ಶನ್ಗೆ ಸಿನಿಮಾದಲ್ಲಿ ಅವಕಾಶ ನೀಡುವುದಕ್ಕೆ ಹಿಂದೆ ಮುಂದು ನೋಡುತ್ತಾರೆ. ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ ದರ್ಶನ್ ಇಂದು ಬಾಕ್ಸ್ ಆಫೀಸ್ ಸುಲ್ತಾನ ಎಂಬ ಬಿರುದನ್ನು ಗಳಿಸಿಕೊಂಡಿದ್ದರೆ.

ಈ ಮಟ್ಟಕ್ಕೆ ಬೆಳೆಯುವುದಕ್ಕೆ ದರ್ಶನ್ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ಅವರಿಗೆ ಮಾತ್ರ ತಿಳಿದಿದೆ ಇನ್ನು ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ಯಾವುದೇ ಕಂಟ್ರವರ್ಸಿ ಹಾಗೂ ಯಾವುದೇ ವಿವಾದಗಳಿಗೆ ಸಿಲುಕದ ನಟ ದರ್ಶನ್ ಇತ್ತೀಚಿನ ದಿನದಲ್ಲಿ ಚಿಕ್ಕ ಪುಟ್ಟ ವಿಚಾರಕ್ಕೂ ಕೂಡ ಹೆಚ್ಚು ಕಾಂಟ್ರವರ್ಸಿ ಯಾಗುತ್ತಾರೆ. ದರ್ಶನ್ ಜೀವನದಲ್ಲಿ ಇಷ್ಟೆಲ್ಲಾ ಕಾಂಟ್ರವರ್ಸಿ ವಿವಾದಗಳಿದ್ದರೂ ಕೂಡ ಅವರಿಗೆ ಇರುವಂತಹ ಫ್ಯಾನ್ ಫಾಲೋ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಹೌದು ದಿನದಿಂದ ದಿನಕ್ಕೆ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡೆ ಹೋಗುತ್ತಿದ್ದರೆ ಇದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಮೊದಲಿಗೆ ಡೋಂಟ್ ಕೇರ್ ಆಟಿಟ್ಯೂಡ್ ದರ್ಶನ್ ಅವರು ಯಾರಿಗೂ ಕೂಡ ಕೇರ್ ಮಾಡುವುದಿಲ್ಲ ತವಾಯಿತು ತಮ್ಮ ಕೆಲಸವಾಯಿತು ಎಂದಷ್ಟೇ ಇರುತ್ತಾರೆ. ಸ್ನೇಹ ಅಂತ ಬಂದರೆ ಅವರಿಗೆ ಪ್ರಾಣ ಕೊಡುವುದಕ್ಕೂ ಕೂಡ ಸಿದ್ಧ ಇರುತ್ತಾರೆ ಆದರೆ ಒಂದು ಬಾರಿ ನಂಬಿಕೆ ದ್ರೋಹವಾದರೆ ಅವರಿಂದ ಕಂಪ್ಲೀಟ್ ದೂರ ಉಳಿಯುತ್ತಾರೆ.

ಇದು ಇವರ ಮೊದಲನೇ ಅಂಶ ಇನ್ನು ಎರಡನೇದಾಗಿ ದರ್ಶನ್ ಅವರ ಫಿಟ್ನೆಸ್ ಅಂತಾನೆ ಹೇಳಬಹುದು ಆರು ಅಡಿ ಮೂರು ಇಂಚು ಎತ್ತರ ಇರುವ ದರ್ಶನ್ ಎಲ್ಲಾ ಪಾತ್ರಕ್ಕೂ ಕೂಡ ಸೂಟ್ ಆಗುತ್ತಾರೆ. ಫೈಟಿಂಗ್ ಇರಲಿ ಅಥವಾ ಡೈಲಾಗ್ ಡೆಲವರಿ ಇರಬಹುದು ಎಲ್ಲದರಲ್ಲೂ ಕೂಡ ನಿಸ್ಸಿಮರು ಈ ಅಜಾನುಬಾಹು ದೇಹಕ್ಕೆ ಮಾರು ಹೋಗದವರೇ ಇಲ್ಲ ಈ ಕಾರಣಕ್ಕಾಗಿಯೇ ದರ್ಶನ್ ಅವರ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗುತ್ತದೆ.

ಇದು ಎರಡನೇ ಅಂಶ ಮೂರನೆಯದಾಗಿ ಸ್ನೇಹಕ್ಕೆ ತಲೆಬಾಗುವ ಗುಣ ದರ್ಶನ್ ಅವರಿಗೆ ಹೊಸಬರನ್ನು ಚಿತ್ರರಂಗಕ್ಕೆ ಕರೆತರಬೇಕು ಅವರಿಗೆ ಅವಕಾಶವನ್ನು ನೀಡಬೇಕು ಎಂಬ ಆಸೆ ಕನಸು ಇದೆ. ಈ ಕಾರಣಕ್ಕಾಗಿ ತಮ್ಮ ಬ್ಯಾನರ್ ನಲ್ಲಿ ಹೊಸ ಹೊಸ ಕಲಾವಿದರಿಗೆ ಹೆಚ್ಚು ಚಾನ್ಸ್ ಅನ್ನು ನೀಡುತ್ತಾರೆ. ನಿಜ ಹೇಳಬೇಕೆಂದರೆ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ರಚಿತಾ ರಾಮ್ ಹೀಗೆ ಸಾಲು ಸಾಲು ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ ಕೊಟ್ಟು ಅವರಿಗೆ ಬದುಕನ್ನು ಕೊಟ್ಟಿ ಕೊಟ್ಟಿದ್ದಾರೆ.

ನಾಲ್ಕನೆಯದಾಗಿ ಕಷ್ಟ ಅಂದವರ ಕೈ ಹಿಡಿಯುವುದು ಹೌದು ನಟ ಆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಬಾಗಿಲಿಗೆ ಯಾರೇ ಹೋದರು ಕೂಡ ಅವರು ಬರಿಗೈನಲ್ಲಿ ಬಂದ ಇತಿಹಾಸವೇ ಇಲ್ಲ. ಪ್ರತಿನಿತ್ಯವೂ ಕೂಡ ನೂರಾರು ಜನ ದರ್ಶನ್ ಅವರ ಮನೆ ಬಾಗಿಲಿಗೆ ಸಹಾಯವನ್ನು ಕೋರಿ ಹೋಗುತ್ತಾರೆ. ಇವರ ಮನೆಗೆ ಹೋದಂತಹ ಎಲ್ಲರಿಗೂ ಕೂಡ ದರ್ಶನ್ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ ಈ ಒಂದು ಸಹನ ಗುಣದಿಂದಲೇ ದರ್ಶನ್ ಅವರಿಗೆ ಹೆಚ್ಚು ಫ್ಯಾನ್ಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

ಐದನೆಯದಾಗಿ ಮತ್ತು ಕೊನೆಯದಾಗಿ ದರ್ಶನ್ ಅವರನ್ನು ಕಲಿಯುಗದ ಕರ್ಣ ಅಂಬರೀಶ್ ಅವರಿಗೆ ಹೋಲಿಕೆ ಮಾಡುತ್ತಾರೆ ಏಕೆಂದರೆ ಅಂಬರೀಶ್ ಅವರ ವ್ಯಕ್ತಿತ್ವವನ್ನು ದರ್ಶನ್ ಅವರು ಕೂಡ ಮೈಗೂಡಿಸಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಬರೀಶ್ ಅವರ ಮಾತು ಒರಟಾಗಿರುತ್ತದೆ ಆದರೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇರುವುದಿಲ್ಲ ಯಾವುದೇ ವಿಚಾರ ಇದ್ದರೂ ಕೂಡ ಮುಖಕ್ಕೆ ಹೊಡೆದ ಹಾಗೆ ನೇರವಾಗಿ ಹೇಳಿ ಬಿಡುತ್ತಾರೆ ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಯಾರೇ ಸಹಾಯ ಕೇಳಿದರು ಕೂಡ ಅಂಬರೀಶ್ ಮಾಡುತ್ತಿದ್ದರು.

ಇದೇ ಗುಣವನ್ನು ದರ್ಶನ್ ಕೂಡ ಮೈಗೂಡಿಸಿಕೊಂಡಿದ್ದಾರೆ ಹಾಗಾಗಿ ಅಂಬರೀಶ್ ಅಭಿಮಾನಿಗಳು ಕೂಡ ಇದೀಗ ದರ್ಶನ್ ಅವರಿಗೆ ಸಪೋರ್ಟ್ ಮಾಡುತ್ತಾರೆ. ಈ ಎಲ್ಲಾ ಕಾರಣಗಳಿಂದಲೇ ದರ್ಶನ್ ಅವರು ಯಾವುದೇ ವಿವಾದಕ್ಕೆ ಸಿಲುಕಿಕೊಂಡರು ಏನೇ ಕಾಂಟ್ರವರ್ಸಿ ಮಾಡಿಕೊಂಡಿರುವ ಕೂಡ ತಮ್ಮ ಅಭಿಮಾನಿಗಳು ಅವರ ಕೈ ಬಿಡುವುದಿಲ್ಲ. ಇನ್ನು ಜನವರಿ 26ನೇ ತಾರೀಕು ದರ್ಶನ್ ಅಭಿನಯದ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಬಿಡುಗಡೆಯಾಗಲಿದ್ದು ಈ ಸಿನಿಮಾದ ಪ್ರಚಾರ ಕಾರ್ಯಕ್ರಮವನ್ನು ಅಭಿಮಾನಿಗಳೇ ಮಾಡುತ್ತಿರುವುದು ನಿಜಕ್ಕೂ ವಿಶೇಷ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.