.
ದರ್ಶನ್ ಹಾಗೂ ರಕ್ಷಿತಾ ಅವರು ನಮ್ಮ ಸ್ಯಾಂಡಲ್ ವುಡ್ನ ಯಶಸ್ವಿ ಜೋಡಿ. ಇವರಿಬ್ಬರ ಕಾಂಬಿನೇಷನ್ ನ ಎಲ್ಲ ಸಿನಿಮಾಗಳು ಕೂಡ ಸೂಪರ್ ಹಿಟ್ ಮೂವಿಗಳಾಗಿವೆ. ಈಗಲೂ ಕೂಡ ಕರ್ನಾಟಕದ ಬಹುತೇಕ ಮಂದಿ ನಿಮ್ಮ ಫೇವರೆಟ್ ಸೆಲೆಬ್ರಿಟಿ ಜೋಡಿ ಯಾವುದು ಎಂದು ಕೇಳಿದರೆ ದರ್ಶನ್ ಹಾಗೂ ರಕ್ಷಿತಾ ಎಂದೇ ಹೇಳುತ್ತಾರೆ. ದರ್ಶನ್ ಮತ್ತು ರಕ್ಷಿತಾ ಅವರ ಕೆಮಿಸ್ಟ್ರಿ ಅನ್ನು ತೆರೆ ಮೇಲೆ ನೋಡುವುದೇ ಒಂದು ಚೆಂದ.
ಇವರಿಬ್ಬರ ನಡುವೆ ಇಂತಹ ಕೆಮಿಸ್ಟ್ರಿ ಮೂಡಿ ಬರಲು ಕಾರಣ ಅವರಿಬ್ಬರ ನಡುವೆ ಇರುವ ಸ್ನೇಹ ಸಂಬಂಧ. ದರ್ಶನ್ ಅವರು ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆ ರಕ್ಷಿತಾರ ಉತ್ತಮ ಸ್ನೇಹಿತರಾಗಿದ್ದರು. ದರ್ಶನ್ ಅವರು ರಕ್ಷಿತಾ ಅವರ ತಂದೆ ಗೌರಿಶಂಕರ ಅವರ ಬಳಿ ಅಸಿಸ್ಟೆಂಟ್ ಕ್ಯಾಮರಮನ್ ಆಗಿ ಕೆಲಸ ಮಾಡುತ್ತಿದ್ದರು.
ಒಂದರ್ಥದಲ್ಲಿ ದರ್ಶನ್ ಅವರಿಗೆ ಕೆಲಸ ಹೇಳಿಕೊಟ್ಟಿದ್ದೆ ಗೌರಿಶಂಕರ್ ಅವರು ಎನ್ನಬಹುದು. ಹೀಗಾಗಿ ಸಹಜವಾಗಿ ಅವರ ಕುಟುಂಬಕ್ಕೆ ದರ್ಶನ್ ಅವರು ಆತ್ಮೀಯರು. ಬಳಿಕ ಅವರು ಚಂದನವನದ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ಒಂದು ರೋಚಕ ಮತ್ತು ರಕ್ಷಿತಾ ಅವರು ಜೊತೆ ಜೋಡಿ ಆಗಿ ಸಿನಿಮಾ ಮಾಡಲು ಶುರು ಮಾಡಿದ ಮೇಲೆ ಇನ್ನು ಎತ್ತರದ ಮಟ್ಟಕ್ಕೆ ಇಬ್ಬರು ಬೆಳೆದರು
ಕಲಾಸಿಪಾಳ್ಯ, ಸುಂಟರಗಾಳಿ, ಮಂಡ್ಯ ಮತ್ತು ಅಯ್ಯ ಈ ಸಿನಿಮಾಗಳಲ್ಲಿ ಇವರಿಬ್ಬರೂ ಜೋಡಿ ಆಗಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ರಕ್ಷಿತಾ ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ನಿರ್ದೇಶಕ ಪ್ರೇಮ್ ಅವರನ್ನು ಕೈಹಿಡಿದ ರಕ್ಷಿತಾ ಅವರು ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಲಿಲ್ಲ.
ಅಕಸ್ಮಾತ್ ಇಂದು ಅವರು ದರ್ಶನ್ ಜೊತೆ ಸಿನಿಮಾ ಮಾಡಿದರೆ ಅದು ಕೂಡ ಸೂಪರ್ ಹಿಟ್ ಹಾಗೆ ಆಗುತ್ತದೆ ಎಂದೆ ಎಲ್ಲರೂ ಮಾತನಾಡುವುದು. ಈಗ ಆಕ್ಟಿಂಗ್ ಇಂದ ದೂರ ಇದ್ದರೂ ಕೂಡ ನಿರ್ಮಾಪಕಿ ಆಗಿ ಸಕ್ರಿಯರಾಗಿದ್ದಾರೆ. ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಭಾಗಿಯಾಗುತ್ತಿದ್ದಾರೆ. ಆ ವೇದಿಕೆಗಳಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲಾ ದರ್ಶನ್ ಅವರ ಜೊತೆ ಎಷ್ಟು ಉತ್ತಮ ಬಾಂಧವ್ಯ ಇತ್ತು ಅವರಿಬ್ಬರ ಸ್ನೇಹ ಎಷ್ಟು ಗಟ್ಟಿ ಎನ್ನುವುದನ್ನು ರಕ್ಷಿತಾ ಅವರು ಹೇಳಿಕೊಳ್ಳುತ್ತಾರೆ.
ಇನ್ನು ದರ್ಶನ್ ಅವರು ಸಹ ತಮ್ಮ ಕುಟುಂಬದವರಂತೆ ರಕ್ಷಿತ ಅವರನ್ನು ಟ್ರೀಟ್ ಮಾಡುತ್ತಾರೆ, ಆತ್ಮ ಸ್ನೇಹಿತೆಯಂತೆ ಅವರನ್ನು ಕಾಣುತ್ತಾರೆ. ಈ ನಡುವೆ ಕಳೆದ ವರ್ಷ ಪ್ರೇಮ್ ಹಾಗೂ ದರ್ಶನ್ ಅವರ ನಡುವೆ ಮನಸ್ತಾಪ ಬಂದ ಸಮಯದಲ್ಲೂ ಕೂಡ ರಕ್ಷಿತಾ ಅವರು ನಾನು ಪ್ರೇಮ್ ಅವರನ್ನು ಬೆಂಬಲಿಸುತ್ತೇನೆ ಹಾಗೆಂದ ಮಾತ್ರಕ್ಕೆ ದರ್ಶನ್ ಅವರ ವಿರುದ್ಧ ಇದ್ದೇನೆ ಎನ್ನುವ ಅರ್ಥ ಅಲ್ಲ ಎಂದು ಹೇಳಿ ಇಬ್ಬರನ್ನೂ ಬಿಟ್ಟುಕೊಡದ ಪರಿಸ್ಥಿತಿಯಲ್ಲಿ ಇರುವುದನ್ನು ವಿವರಿಸಿದ್ದರು.
ನಂತರ ಕೆಲವೇ ದಿನಗಳಲ್ಲಿ ಸ್ನೇಹಿತರಿಬ್ಬರೂ ತಮ್ಮ ನಡುವೆ ಮೂಡಿಬಂದಿದ್ದ ಮನಸ್ತಾಪವನ್ನು ಬಗೆಹರಿಸಿಕೊಂಡು ಮತ್ತೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ಇದೀಗ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈ ಪಾರ್ಟಿಗೆ ರಕ್ಷಿತಾ ಅವರನ್ನು ಸಹ ದರ್ಶನ್ ಆಹ್ವಾನಿಸಿದ್ದಾರೆ. ದರ್ಶನ್ ಮತ್ತು ರಕ್ಷಿತಾ ಸೆಲ್ಫಿ ಕ್ಲಿಪ್ಪಿಸಿಕೊಂಡಿರುವುದು ಹಾಗೂ ಕೆಲವು ಫೋಟೋಗಳಲ್ಲಿ ರಕ್ಷಿತಾ ತಮ್ಮ ರಾಣ ಮತ್ತು ದರ್ಶನ್ ಅವರು ಇರುವುದು ಮತ್ತಿತರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವರ ಸ್ನೇಹ ಹೀಗೆ ಚಿರಕಾಲ ಇರಲಿ ಎಂದು ಅಭಿಮಾನಿಗಳಾದ ನಾವೆಲ್ಲರೂ ಹರಸೋಣ.