ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ರಶ್ಮಿಕಾ ಮಂದಣ್ಣ ಅವರು ತುಂಬಾ ಕಡಿಮೆ ಸಮಯದಲ್ಲಿಯೇ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಇವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ ಹೆಸರನ್ನು ಮಾಡಿದ್ದಾರೆ. ಹಲವಾರು ಸ್ಟಾರ್ ನಟರುಗಳ ಜೊತೆ ನಟಿಸಿರುವಂತಹ ರಶ್ಮಿಕ ಮಂದಣ್ಣ ಅವರು ಯಾರಿಗೂ ಕಮ್ಮಿ ಏನು ಇಲ್ಲ ಎನ್ನುವಂತೆ ನಟನೆ ಮಾಡಿಕೊಂಡು ಸಾಕಷ್ಟು ರೀತಿಯಾದಂತಹ ಚರ್ಚೆಗಳಿಗೂ ಸಹ ಕಾರಣವಾಗಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ ನಮ್ಮ ಕನ್ನಡದ ಹುಡುಗಿ ಬೇರೆ ಭಾಷೆಗಳಲ್ಲಿ ನಟಿಸಿದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ಎಂದರೆ ನಮಗೆಲ್ಲರಿಗೂ ಸಹ ಖುಷಿಯ ವಿಚಾರವೆ.
ಆದರೆ ರಶ್ಮಿಕಾ ಮಂದಣ್ಣ ಅವರು ತಮ್ಮ ಮಾತುಗಳ ಮೂಲಕ ಸಾಕಷ್ಟು ಚರ್ಚೆ ಆಗುತ್ತಲೇ ಇದ್ದಾರೆ. ಇವರ ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುವಂತೆ ಪ್ರೇಕ್ಷಕರು ಇವರು ಎಲ್ಲಿಯಾದರೂ ಎಡವಿದರೆ ಅದನ್ನು ಟ್ರೋಲ್ ಮಾಡಿ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ತಮ್ಮ ನಟನೆಯ ಮೂಲಕ ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುತ್ತಿರುವ ರಶ್ಮಿಕಾ ಮಂದಣ್ಣ ಅವರು ಕೂತರು, ನಿಂತರು ಸಹ ಅವರದೇ ಸುದ್ದಿ. ಹಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವಂತಹ ರಶ್ಮಿಕಾ ಮಂದಣ್ಣ ಅವರು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟರುಗಳ ಜೊತೆ ನಟಿಸಿ ಫ್ಯಾನ್ಸ್ ಫಾಲೋಯಿಂಗ್ ಜಾಸ್ತಿ ಮಾಡಿಕೊಂಡಿದ್ದಾರೆ.
ಇವರ ಯಶಸ್ಸಿಗೆ ಅವರ ಮೊದಲ ಸಿನಿಮಾವೇ ಕಾರಣ ಎಂದು ಹೇಳಬಹುದು ಹೌದು ರಶ್ಮಿಕಾ ಮಂದಣ್ಣ ಅವರು ನಟಿಸಿದಂತಹ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಈ ಸಿನಿಮಾದಲ್ಲಿ ಸಾನ್ವಿ ಪಾತ್ರದ ಮೂಲಕ ನಟಿ ರಶ್ಮಿಕಾ ಅವರು ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಂಡು ಆ ಪಾತ್ರಕ್ಕೆ ಇವರಿಗೆ ಉತ್ತಮವಾದಂತಹ ಒಂದು ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಇದೀಗ ರಶ್ಮಿಕ ಅವರು ಹಲವಾರು ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ ಇತ್ತೀಚಿಗೆ ಹಲವಾರು ಪ್ರಾಡಕ್ಟ್ ಗಳಿಗೆ ಬ್ರಾಂಡ್ ಅಂಬಾಸಿಟರ್ ಆಗಿ ಕೂಡ ಇವರು ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯದಲ್ಲಿ ಯಾವ ಇಂಡಸ್ಟ್ರಿಯನ್ನು ನೋಡಿದರೂ ಸಹ ರಶ್ಮಿಕಾ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ.
ಪುಷ್ಪ ಸಿನಿಮಾದ ನಂತರ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರು ಸುದ್ದಿಯಾಗಿದ್ದಾರೆ ಹಾಗೆ ಅಭಿಮಾನಿಗಳು ಸಹ ಹೆಚ್ಚಾಗಿ ಇವರಿಗೆ ಹುಟ್ಟಿಕೊಳ್ಳುತ್ತಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾನಾ ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿ ಇರುತ್ತಾರೆ 777 ಚಾರ್ಲಿ ಸಿನಿಮಾ ರಿಲೀಸ್ ಆದ ನಂತರ ನಾಯಿ ಕಾರಣಕ್ಕೆ ಅವರು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಮುದ್ದಿನ ನಾಯಿಯನ್ನು ಮುದ್ದಿಸುವಂತಹ ರಶ್ಮಿಕಾ ಅವರ ಫೋಟೋ ಸಕ್ಕತ್ ವೈರಲ್ ಆಗಿತ್ತು ಚಾರ್ಲಿ ಸಿನಿಮಾವನ್ನು ಕದ್ದುಮುಚ್ಚಿ ನೋಡಿರುವ ರಶ್ಮಿಕ ನಾಯಿ ಜೊತೆ ಭಾವನಾತ್ಮಕವಾಗಿ ಕ್ಷಣಗಳನ್ನು ಕರೆಯುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ಅವರು ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವುದರಿಂದ ಸಖತ್ ಬ್ಯುಸಿಯಾಗಿದ್ದಾರೆ ಮನೆಗೆ ಹೋಗುವುದು ಅಪರೂಪ ಎನ್ನುವಂತಾಗಿದೆ ಪ್ರೀತಿಯ ನಾಯಿಯನ್ನು ಬಿಟ್ಟು ಅವರಿಂದ ಇರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ತಮ್ಮೊಂದಿಗೆ ನಾಯಿಗೂ ಕೂಡ ಫ್ಲೈಟ್ ಟಿಕೆಟ್ ಮಾಡಿಸುವಂತೆ ನಿರ್ಮಾಪಕರಿಗೆ ಹೇಳುತ್ತಿದ್ದಾರೆ ಎಂದು ಮಾತು ಕೇಳಿಬರುತ್ತಿದೆ ಹಲವು ಮಾಧ್ಯಮಗಳು ಈ ಕುರಿತು ಸುದ್ದಿಯನ್ನು ಸಹ ಮಾಡಿದ್ದಾರೆ. ಈ ವಿಷಯದ ಕುರಿತಂತೆ ಸ್ವತ ರಶ್ಮಿಕಾ ಮಂದಣ್ಣ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಈ ವಿಷಯ ನನಗೆ ಫನ್ನಿ ಅನಿಸುತ್ತದೆ ಈ ದಿನವನ್ನು ಉಲ್ಲಾಸ ಗೊಳಿಸಿದೆ ಸುದ್ದಿ ಕೇಳಿ ನನಗೆ ನಗು ಬಂತು, ನನ್ನ ನಾಯಿ ನನ್ನೊಂದಿಗೆ ಬರಲು ಇಚ್ಛೆ ಪಡುವುದಿಲ್ಲ ಅದು ಹೈದರಾಬಾದ್ ಮನೆಯಲ್ಲೇ ಇರಲು ಇಷ್ಟಪಡುತ್ತದೆ. ಉಳಿದಂತೆ ಏನನ್ನು ಹೇಳಲಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.