Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಸ್ಟೇಜ್ ಮೇಲೆ ಹಾಟ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ರಶ್ಮಿಕಾ...

ಸ್ಟೇಜ್ ಮೇಲೆ ಹಾಟ್ ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ರಶ್ಮಿಕಾ ಮಂದಣ್ಣ, ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಬಹುಬೇಡಿಕೆಯ ನಟಿ ಮೊದಲೆಲ್ಲ ತೆಲುಗಿನಲ್ಲಿ ಮಾತ್ರ ಫೇಮಸ್ ಆಗಿದ್ದರು ಆದರೆ ಇತ್ತೀಚಿನ ದಿನದಲ್ಲಿ ತೆಲುಗು ಬಿಟ್ಟು ಬಾಲಿವುಡ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಎರಡು ಸಿನಿಮಾ ಮಾಡಿದ್ದು ಈ ಸಿನಿಮಾ ಇನ್ನೇನು ಬಿಡುಗಡೆಯಾಗಬೇಕಿದೆ‌. ಇದರ ಜೊತೆಗೆ ಜಾಹೀರಾತಿನಲ್ಲಿಯೂ ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ ಹೌದು ಮೇಕ್ ಡೊನಾಲ್ಡ್ ಜಾಹೀರಾತಿನಲ್ಲಿ ಮೊದಲು ಕಾಣಿಸಿಕೊಳ್ಳುತ್ತಿದ್ದಂತಹ ರಶ್ಮಿಕ ಮದ್ದಣ್ಣ ಅವರು ಇದ್ದಕ್ಕಿದ್ದ ಹಾಗೆ ಇದೀಗ ಒಳ ಉಡುಪು ಜಾಹೀರಾತಿನಲ್ಲಿ ನಟನೆ ಮಾಡುವುದರ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ವೃತ್ತಿ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಹೋಗುತ್ತಿರುವಂತಹ ರಶ್ಮಿಕಾ ಮಂದಣ್ಣ ಅವರು ಟ್ರೋಲ್ ಗಳಿಗೆ ಆಗಿರಬಹುದು ಅಥವಾ ಟೀಕೆಗಳಿಗೆ ಆಗಿರಬಹುದು ಅಥವಾ ಕಾಂಟ್ರವರ್ಸಿಗಳಿಗೆ ಆಗಿರಬಹುದು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ.

ತಮ್ಮ ಖುಷಿ ಸಂತೋಷವನ್ನು ಮಾತ್ರ ಅವರು ನೋಡುತ್ತಾರೆ ಇನ್ನು ರಶ್ಮಿಕ ಮಂದಣ್ಣ ಅವರು ಈಗಾಗಲೇ ಪುಷ್ಪಾ ಸಿನಿಮಾದಲ್ಲಿ ನಟಿಸಿ ಫೇಮಸ್ ಆದ ನಂತರ ತಮಿಳುನಾಡು ದಳಪತಿ ವಿಜಯ್ ಅವರ ಜೊತೆಗೆ ವಾರಸುಡು ಎಂಬ ಸಿನಿಮಾದಲ್ಲಿ ನಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಸಿನಿಮಾದ ನಂತರ ಪುಷ್ಪ 2 ಸಿನಿಮಾ ಚಿತ್ರೀಕರಣ ಆರಂಭವಾಗಿದ್ದು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರಂತೆ. ಒಟ್ಟಾರೆಯಾಗಿ ಹೇಳುವುದಾದರೆ ಸಾಲು ಸಾಲು ಸಿನಿಮಾದ ಬೇಡಿಕೆಯನ್ನು ಗೆಟ್ಟಿಸಿಕೊಂಡಿದ್ದಾರೆ ಇವೆಲ್ಲದರ ಬೆನ್ನಲ್ಲೇ ಇದೀಗ ರಶ್ಮಿಕಾ ಮದ್ದಣ್ಣ ಅವರು ಸ್ಟೇಜ್ ಮೇಲೆ ಮಾಡಿದಂತಹ ಪರ್ಫಾರ್ಮೆನ್ಸ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು ರಶ್ಮಿಕಾ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅಲ್ಲಿ ಅವರ ಕೈನಲ್ಲಿ ಒಂದು ನೃತ್ಯವನ್ನು ಮಾಡಿಸಲಾಗುತ್ತದೆ ಇದಕ್ಕೆ ಮುಖ್ಯ ಕಾರಣ ಪುಷ್ಪ ಸಿನಿಮಾದಲ್ಲಿ ಇರುವಂತಹ ವಿಶೇಷವಾದಂತಹ ಸಾಮಿ ಸಾಮಿ ಎಂಬ ಹಾಡು ಬಹಳ ಮನಮೋಹಕವಾಗಿ ಮೂಡಿ ಬಂದಿತು ಈ ಹಾಡಿನಲ್ಲಿ ರಶ್ಮಿಕ ಮಂದಣ್ಣ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದರೂ ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಮತ್ತು ಫ್ಯಾನ್ ಫಾಲೋವರ್ಸ್ ಈ ಹಾಡಿಗೆ ನೃತ್ಯ ಮಾಡುವಂತೆ ಬೇಡಿಕೆ ಇಡುತ್ತಾರೆ. ರಶ್ಮಿಕಾ ಮಂದಣ್ಣ ಅವರ ಈ ಒಂದು ಸ್ವಾಮಿ ಸ್ವಾಮಿ ಎನ್ನುವ ಹಾಡು ಎಷ್ಟರ ಮಟ್ಟಿಗೆ ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದು ಅಂದರೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲರೂ ಕೂಡ ಈ ಹಾಡಿಗೆ ಹೆಜ್ಜೆಯನ್ನು ಹಾಕಿ ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಅಪ್ಲೋಡ್ ಮಾಡಿದ್ದರು.

ಇನ್ನು ರಶ್ಮಿಕಾ ಮಂದಣ್ಣ ಯಾವುದೇ ಕಾರ್ಯಕ್ರಮಕ್ಕೆ ಹೋದರು ಅವರ ಬಳಿ ಹಾಡಿಗೆ ನೃತ್ಯ ಮಾಡಿಸಲಾಗುತ್ತೆ. ಇತ್ತೀಚೆಗೆ ಸಾಮಿ ಸಾಮಿ ಹಾಡಿಗೆ ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಬಣ್ಣದ ಪಿಂಕ್ ಕಲರ್ ಸಾರಿ ಉಟ್ಟು ನೃತ್ಯ ಮಾಡಿದ್ರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ನೃತ್ಯದ ಮೂಲಕ ರಶ್ಮಿಕ ಮಂದಣ್ಣ ಮತ್ತೆ ಪಡ್ಡೆ ಹುಡುಗರ ನಿದ್ದೆಗಡಿಸಿದ್ದಾರೆ ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಫಾಲೋವರ್ ಗಳಿಗಂತೂ ಕಮ್ಮಿ ಇಲ್ಲ. ಇಂದಿಗೂ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ ಅವರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತ ಜನ ಕಾಯುತ್ತಿರುತ್ತಾರೆ. ನೀವು ಕೂಡ ರಶ್ಮಿಕಾ ಮಂದಣ್ಣ ಅವರ ಈ ಹಾಟ್ ವಿಡಿಯೋ ನೋಡಿ ಎಷ್ಟು ಚಂದ ಡಾನ್ಸ್ ಮಾಡುತ್ತಾರಂತ ಈ ವಿಡಿಯೋ ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.