ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಟನೆಯನ್ನು ಪ್ರಾರಂಭ ಮಾಡಿದ್ದು ಕನ್ನಡ ಚಿತ್ರರಂಗದ ಮೂಲಕ ಹೌದು ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರು ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ಸ್ಯಾಂಡ್ ವುಡ್ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ನಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಅವರದೇ ಹವಾ ಹೆಚ್ಚಾಗಿದೆ. ತಮ್ಮ ಚೆಲುವಿನ ಮೂಲಕ ಅಷ್ಟೇ ಅಲ್ಲದೆ ತಮ್ಮ ನಟನೆಯ ಮೂಲಕವೂ ಸಹ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವಂತಹ ರಶ್ಮಿಕ ಮಂದಣ್ಣ ಅವರು ಹಲವಾರು ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರು ಗಳ ಜೊತೆ ನಟನೆಯನ್ನು ಮಾಡುತ್ತಿದ್ದಾರೆ, ಇದು ಅವರ ಜೀವನದಲ್ಲಿ ಉತ್ತುಂಗದ ಕಾಲ ಎಂದೇ ಹೇಳಬಹುದು.
ತುಂಬಾ ಚಿಕ್ಕ ವಯಸ್ಸಿನಲ್ಲಿ ಅತೀ ದೊಡ್ಡ ಸಾಧನೆಯನ್ನು ಮಾಡಲು ಹೊರಟಿದ್ದಾರೆ ಈಗ ಇವರ ಕೈಯಲ್ಲಿ ಸಾಕಷ್ಟು ಚಿತ್ರಗಳು ಇದ್ದು ಆ ಸಿನಿಮಾಗಳನ್ನು ಶೂಟಿಂಗ್ ಸಹ ನಡೆಯುತ್ತಾ ಇದೆ. ಸಿನಿಮಾ ರಂಗದಲ್ಲಿ ರಶ್ಮಿಕಾ ಅವರ ಬೇಡಿಕೆ ಹೆಚ್ಚಾಗಿದ್ದು ಅವರ ಸಂಭಾವನೆ ಕೂಡ ಹೇರಳವಾಗಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಹರಿದಾಡುತ್ತಿವೆ ಅದೇನೆಂದರೆ ರಶ್ಮಿಕಾ ಅವರು ನಟನೆಯನ್ನು ಬಿಟ್ಟು ಬ್ಯುಸಿನೆಸ್ ಕಡೆಗೆ ಒಲವನ್ನು ತೋರಿಸಿದ್ದಾರೆ ಎಂದು ಹಲವಾರು ಮೂಲಗಳು ಹೇಳುತ್ತಿವೆ. ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ರಶ್ಮಿಕಾ ಮಂದಣ್ಣ ಅವರು ವೈಯಕ್ತಿಕ ಜೀವನದಲ್ಲಿ ಹಲವಾರು ರೀತಿಯಾದಂತಹ ಚರ್ಚೆಗಳಿಗೆ ಆಗಾಗ ಗುರಿಯಾಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಲೇ ಇರುತ್ತದೆ.
ಕೆಲವು ದಿನಗಳ ಹಿಂದೆ ವಿಜಯ್ ದೇವಕೊಂಡ ಮತ್ತು ರಶ್ಮಿಕಾ ತುಂಬಾ ಹತ್ತಿರವಾಗಿದ್ದರು ಸಾಕಷ್ಟು ಕಡೆ ಹೊರಗೆ ಜೊತೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು ಇವರ ಮಧ್ಯೆ ಪ್ರೀತಿ ಇದೆ ಎಂಬ ವಿಚಾರ ಇತ್ತು ಇದೀಗ ಇಬ್ಬರ ಮಧ್ಯೆ ಎನೋ ಆಗಿದೆ ಹಾಗಾಗಿ ಅವರು ಜೊತೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಹೇಳುತ್ತಿದ್ದಾರೆ ಈ ಒಂದು ವಿಚಾರವು ಸಹ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಸಿನಿಮಾ ರಿಲೀಸ್ ಆದ ಸಮಯದಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಅವರನ್ನು ಸಾಕಷ್ಟು ಜನರು ಕಾಲೆಳೆದಿದ್ದಾರೆ ರಶ್ಮಿಕಾ ಅವರು ತಮ್ಮ ನಾಯಿಯನ್ನು ಮುದ್ದು ಮಾಡುವಂತಹ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋವನ್ನು ನೋಡಿದಂತಹ ಅಭಿಮಾನಿಗಳು ಚಾರ್ಲಿ ಸಿನಿಮಾವನ್ನು ನೋಡಿ ಈ ರೀತಿಯಾದಂತಹ ವರ್ತನೆ ಇದೆ ಎಂದು ಹೇಳುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ವನ್ನು ಹೊರತುಪಡಿಸಿ ಈಗ ಒಂದು ಬ್ಯುಸಿನೆಸ್ ನ ಕಡೆ ಹೊಲವನ್ನು ತೋರಿದ್ದಾರೆ “ಪ್ಲಮ್” ಎನ್ನುವಂತಹ ಕಂಪನಿಯಲ್ಲಿ ನಟಿ ರಶ್ಮಿಕ ಮಂದಣ್ಣ ಅವರು ಹೂಡಿಕೆ ಮಾಡಿದ್ದಾರೆ, ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ತಲುಪಿಸುವಂತಹ ಒಂದು ಕಂಪನಿ ಇದಾಗಿದ್ದು ಇದರಲ್ಲಿ ರಶ್ಮಿಕಾ ಮಂದಣ್ಣ ಅವರು ಹೂಡಿಕೆ ಮಾಡಿದ್ದಾರೆ ಎಂದು ಸಾಕಷ್ಟು ವಿಚಾರಗಳು ಕೇಳಿ ಬರುತ್ತಿದೆ. ಈ ವಿಚಾರವನ್ನು ಕುರಿತು ರಶ್ಮಿಕಾ ಮಂದಣ್ಣ ಅವರಾಗಲಿ ಅಥವಾ ಕಂಪನಿಯವರಾಗಲಿ ಯಾವುದೇ ರೀತಿಯ ವಿಚಾರವನ್ನು ಹೇಳಿಲ್ಲ. ಈ ಒಂದು “ಪ್ಲಮ್” ಕಂಪನಿಯಲ್ಲಿ ಹೂಡಿಕೆ ಮಾಡಿದ್ದು ಅಷ್ಟೇ ಅಲ್ಲದೇ ತಾವೇ ಬ್ಯ್ರಾಂಡ್ ಅಂಬಾಸಿಟರ್ ಕೂಡ ಆಗಿದ್ದಾರೆ. ಸಿನಿಮಾ ಬಿಟ್ಟು ಈ ಕಂಪನಿಯನ್ನು ತೆರೆಯುತ್ತಿರುವಂತಹ ರಶ್ಮಿಕಾ ಮಂದ್ದಣ್ಣ ಅವರು ಮುಂದೆ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದೂ ಗೊತ್ತಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ