ರೇಷನ್ ಕಾರ್ಡ್ (Ration card) ಕೂಡ ಒಂದು ಪ್ರಮುಖವಾದ ಗುರುತಿನ ಚೀಟಿ. ಆಹಾರ ಇಲಾಖೆಯಿಂದ ನೀಡಲಾಗುವ ಈ ಪಡಿತರ ಚೀಟಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ BPL ಮತ್ತು AAY ರೇಷನ್ ಕಾರ್ಡ್ ಫಲಾನುಭವಿಗಳು ಸರ್ಕಾರ ರೂಪಿಸುವ ಅನೇಕ ಯೋಜನೆಗಳ ಫಲಾನುಭವಿಗಳಾಗುತ್ತಾರೆ.
ಅದಲ್ಲದೆ ರೇಷನ್ ಕಾರ್ಡ್ ಅನ್ನು ಅನೇಕ ಸಮಯಗಳಲ್ಲಿ ಪೂರಕ ದಾಖಲೆಯಾಗಿ (important Document) ಕೇಳಲಾಗುತ್ತದೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು (Guarantee Scheme) ಘೋಷಣೆಯಾಗಿದೆ. ಇವುಗಳಲ್ಲಿ ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ (Gruhalakshmi) ಯೋಜನೆಗಳಿಗೆ ಫಲಾನುಭವಿಗಳಾಗಲು ಕಡ್ಡಾಯವಾಗಿ ರೇಷನ್ ಕಾರ್ಡ್ ಇರಲೇಬೇಕು.
FDA, SDA ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 58,250/- ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಮತ್ತು ರೇಷನ್ ಕಾರ್ಡಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಆ ಕುಟುಂಬದ ಹಿರಿಯ ಮಹಿಳೆಯ ಹೆಸರು (head of the family women ) ಇರಬೇಕು. ಆಗಿದ್ದಲ್ಲಿ ಮಾತ್ರ ಅವರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ. ಆದರೆ ಅನೇಕರಿಗೆ ರೇಷನ್ ಕಾರ್ಡ್ ನ ಮಾಹಿತಿಯಲ್ಲಿ ಸಮಸ್ಯೆ ಆಗಿರುವುದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.
ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಪಡೆಯಲು ಆಗುತ್ತಿಲ್ಲ. ಜನಸಾಮಾನ್ಯರು ಈ ಸಮಸ್ಯೆಯನ್ನು ತಿದ್ದುಪಡಿಸಿಕೊಳ್ಳಲು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದನ್ನು ಗಮನಿಸಿ ಆಹಾರ ಇಲಾಖೆ (food department) 4 ದಿನಗಳವರೆಗೆ ಆನ್ಲೈನ್ ನಲ್ಲಿ ಇವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು (ration card correction) ಅವಕಾಶ ನೀಡಿತ್ತು. ಆ ದಿನಾಂಕವು 21.08.2023 ಸೋಮವಾರದಂದು ಮುಕ್ತಾಯವಾಗಿತ್ತು.
ಆದರೆ ಸರ್ವರ್ ಸಮಸ್ಯೆ (Server problem) ಕಾರಣದಿಂದಾಗಿಯೇ ಹೆಚ್ಚು ಸಮಸ್ಯೆಯಾಗಿ ಇನ್ನು ಅನೇಕರ ರೇಷನ್ ಕಾರ್ಡ್ ಗಳು ತಿದ್ದುಪಡಿಯಾಗಿಲ್ಲ ಎನ್ನುವುದು ತಿಳಿದು ಬಂದಿದೆ. ಇದನ್ನು ಮನಗಂಡು ಮತ್ತಷ್ಟು ಕಾಲವಕಾಶ ನೀಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಆ ಪ್ರಕಾರ ಇಂದು ಅಂದರೆ 23.08.2023ರಂದು ಮಧ್ಯಾಹ್ನ 12:00 ರಿಂದ ಸಂಜೆ 04:00 ಗಂಟೆವರೆಗೆ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ.
ಈ ಸಮಯದಲ್ಲಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನಕ್ಕೆ ಹೆಸರು ಬದಲಾಯಿಸಬೇಕಾದವರು, ಹೆಸರಿನಲ್ಲಿ ತಿದ್ದುಪಡಿ ಮಾಡಿಸಬೇಕಾದವರು, ಹಳೇ ಸದಸ್ಯರ ಹೆಸರನ್ನು ತೆಗೆದುಹಾಕಿಸಬೇಕಾದವರು, ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸಬೇಕಾದವರು ಅಥವಾ ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಬೇಕಾದವರು ಈ ರೀತಿ ಇನ್ನೂ ಯಾವುದೇ ಸಮಸ್ಯೆ ಇದ್ದವರು ಕೂಡ ಪೂರಕ ದಾಖಲೆಗಳನ್ನು ಕೊಟ್ಟು ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.
ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಥವಾ ಯಾವುದೇ CSC ಸೆಂಟರ್ ಗಳಲ್ಲಿ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲೂ ಕೂಡ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಈ ಒಂದು ಕಾಲಾವಕಾಶವನ್ನು ಉಪಯೋಗಿಸಿಕೊಂಡು ನಿಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೆ ಹಂಚಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿದ ಕಾರಣ ಕುಟುಂಬದ ಯಜಮಾನಿಯು ತಮ್ಮ ದಾಖಲೆಗಳಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ತಿದ್ದುಪಡಿ ಮಾಡಿಸಿಕೊಂಡ ನಂತರ ಕೂಡ ಅರ್ಜಿ ಸಲ್ಲಿಸಬಹುದು.
ನಿಮ್ಮ ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಕೆ ಮಾಡ್ತೀರಾ.? ಹಾಗಿದ್ರೆ, ಮಿಸ್ ಮಾಡದೇ ಈ ಸುದ್ದಿ ಓದಿ.!
ಅದರ ಮುಂದೆ ತಿಂಗಳಿನಿಂದ ಅವರು ಕೂಡ ಈ ಯೋಜನೆಗಳ ಫಲಾನುಭವಿಗಳಾಗುತ್ತಾರೆ. ಹಾಗೂ ಅನ್ನಭಾಗ್ಯ ಯೋಜನೆಯ ಪ್ರಯೋಜನವೂ ಕೂಡ ದಾಖಲೆ ಸರಿಪಡಿಸಿಕೊಂಡ ಮುಂದಿನ ತಿಂಗಳಿನಿಂದ ಸಿಗುತ್ತದೆ. ಹೀಗಾಗಿ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಸಂಬಂಧಪಟ್ಟ ಇಲಾಖೆಯ ಸಚಿವರು ತಿಳಿಸಿದ್ದಾರೆ.