
ನಮ್ಮಲ್ಲಿ ಹಿರಿಯರಾಗುತ್ತಿದ್ದಂತೆ ಅನುಭವ ಹೆಚ್ಚು, ಅವರು ಬದುಕನ್ನು ಹೆಚ್ಚು ನೋಡಿರುತ್ತಾರೆ, ಜನರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರ ವ್ಯಕ್ತಿತ್ವವನ್ನು ಗುರುತಿಸುತ್ತಾರೆ ಎಂದು ಹೇಳಿ ಹಿರಿಯರು ಯಾರೇ ಆದರೂ ಅವರ ಮಾತುಗಳಿಗೆ ಬೆಲೆ ಕೊಡುತ್ತೇವೆ. ಇನ್ನು ಅವರು ಪತ್ರಕರ್ತರು, ಸಾಹಿತಿಗಳು, ಬರಹಗಾರರು ಆದರಂತೂ ಅವರು ಬರೆದ ಬರಹಗಳನ್ನು ಅಕ್ಷರಶಃ ಸತ್ಯದಂತೆ ನಾವು ಕಾಣುತ್ತೇವೆ.
ಹೀಗೆ ತಮ್ಮದೇ ಆದ ವಿಭಿನ್ನ ಬರಹದ ಮೂಲಕ ಇದ್ದದ್ದನ್ನು ಇದ್ದ ಹಾಗೆ ಹೇಳಿ ಸತ್ಯಾಂಶ ಹೊರಹಾಕಿ ಬರೆಯುವ ಮೂಲಕ ಫೇಮಸ್ ಆದವರು ರವಿ ಬೆಳಗೆರೆ ಅವರು. ಇಂದು ಓ ಮಲ್ಲಿಗೆ ,ಹಾಯ್ ಬೆಂಗಳೂರು ಈ ಹೆಸರುಗಳನ್ನು ಕೇಳಿದ ತಕ್ಷಣವೇ ನೆನಪಾಗುವುದು ರವಿ ಬೆಳಗೆರೆ ಎನ್ನುವ ದಿಟ್ಟ ಬರಹಗಾರ. ಚೂರಿಗಿಂತ ಆಳವಾಗಿ ತನ್ನ ಲೇಖನಿಯಿಂದಲೇ ಇರಿದು ವ್ಯಕ್ತಿತ್ವವನ್ನು ಹೊರತಂದು ಸಮಾಜಕ್ಕೆ ಮುಖವಾಡ ಕಳಚಿಟ್ಟು ತೋರಿಸುತ್ತಿದ್ದವರು ರವಿ ಬೆಳಗೆರೆ.
ಇವರು ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ರಂಗದವರು ಹಾಗೆ ಯಾವ ಸೆಲೆಬ್ರಿಟಿಗಳನ್ನು ಕೂಡ ಬಿಟ್ಟಿಲ್ಲ. ಎಲ್ಲರ ಬಗ್ಗೆಯೂ ಕೂಡ ಮಾಹಿತಿ ಹೊಂದಿದ್ದ ಇವರು ಅವಕಾಶ ಸಿಕ್ಕಾಗಲಿಲ್ಲ ಎಲ್ಲರ ಬಗ್ಗೆ ಕೂಡ ಮಾತನಾಡಿ ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಫಿಲ್ಟರ್ ಇಲ್ಲದೆ ಕಕ್ಕಿ ಬಿಡುತ್ತಿದ್ದರು ಇಂದು ರವಿ ಬೆಳಗೆರೆ ಅವರು ಇಲ್ಲವಾಗಿ ಎರಡು ವರ್ಷ ಕಳೆದಿವೆ.
ಆದರೆ ಅವರ ಕೊನೆಯ ದಿನಗಳ ಸಂದರ್ಶನಗಳಲ್ಲಿ ಅಂದರೆ ಎರಡು ವರ್ಷದ ಹಿಂದಿನ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಅವರು ಏನು ಹೇಳಿದ್ದರು ಎನ್ನುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದ್ದು ದಚ್ಚು ಅಭಿಮಾನಿಗಳೆಲ್ಲ ಬಹಳ ಕಾತುರದಿಂದ ರವಿ ಬೆಳಗೆರೆ ಏನು ಹೇಳಿದ್ದರು ಎನ್ನುವುದನ್ನು ಕೇಳುತ್ತಿದ್ದಾನೆ. ಹಿಂದೊಮ್ಮೆ ದುನಿಯಾ ವಿಜಯ್ ಅವರ ಸಿನಿಮಾ ಒಂದರ ವಿವಾದ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಕುಳಿತಿದ್ದ ಅಣಜಿ ನಾಗರಾಜ್, ರವಿ ಬೆಳಗೆರೆ ಮತ್ತು ದುನಿಯಾ ವಿಜಯ್ ಅವರ ನಡುವೆ ಮಾತಿಗೆ ಮಾತು ಬೆಳೆದಿತ್ತು.
ಆ ವಾಗ್ವಾದಕ್ಕೆ ದರ್ಶನ್ ಅವರ ಹೆಸರನ್ನು ಎಳೆ ತಂದ ತಕ್ಷಣ ದುನಿಯಾ ವಿಜಯ್ ದರ್ಶನ್ ಅವರಿಗೆ ಕರೆ ಮಾಡಿ ರವಿ ಬೆಳಗೆರೆ ಮೀಡಿಯಂ ಮುಂದೆ ಕೂತು ನೀನು ನಿನ್ನ ಹೆಂಡತಿಗೆ ಹೊಡೆದ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಹೇಳಿದಾಗ ದರ್ಶನ್ ಕೂಡ ಒಂದು ನಿಮಿಷ ಹಿಂದೆ ಮುಂದೆ ನೋಡದೆ ಅದಕ್ಕೆ ಸರಿಯಾಗಿ ಖಡಕ್ ಉತ್ತರ ಕೊಟ್ಟಿದ್ದರು.
ರವಿ ಬೆಳಗೆರೆ ಅವರು ಮೊದಲಿಂದ ದುನಿಯ ವಿಜಯ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ದರ್ಶನ್ ಅವರು ಹೆಂಡತಿಗೆ ಹೊಡೆದ ಸಮಯದಿಂದ ದರ್ಶನ್ ಕಡೆಗೂ ಅದೇ ಬಗೆಯ ಅಭಿಪ್ರಾಯವಿತ್ತು. ಆದರೆ ಕೊನೆಯಲ್ಲಿ ಅವರು ಹಾಡಿರುವ ಮಾತುಗಳು ಮಾತ್ರ ದರ್ಶನ್ ಅವರ ಪರವಾಗಿ ಇವೆ.
ಸಂದರ್ಶಕರು ಒಬ್ಬರು ಯಾವಾಗಲೂ ಯಾಕೆ ನೀವು ದರ್ಶನ್ ಅವರ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೀರಾ ಎಂದು ಪ್ರಶ್ನೆ ಕೇಳಿದಾಗ ದರ್ಶನ್ ಒಬ್ಬ ಹ್ಯಾಂಡ್ಸಮ್ ಬಾಯ್, ಚೆನ್ನಾಗಿ ಬೆಳೆಯುತ್ತಿರುವ ಹುಡುಗ. ಅವನಿಗೆ ಏಕಗ್ರತೆ ಸ್ವಲ್ಪ ಕಡಿಮೆ ಇದೆ, ಇನ್ನು ಸ್ವಲ್ಪ ಕಠಿಣ ಪರಿಶ್ರಮ ಪಟ್ಟರೆ ನಂಬರ್ ಒನ್ ಸ್ಥಾನದಲ್ಲಿ ಕಡೆಯವರೆಗೂ ಅವನೇ ಉಳಿದುಕೊಳ್ಳುತ್ತಾನೆ ಎಂದು ದರ್ಶನ್ ಬಗ್ಗೆ ಹೊಗಳಿದ್ದಾರೆ. ರವಿ ಬೆಳಗೆರೆ ಅವರ ಬಾಯಿಂದ ಈ ಮಾತು ಬಂದಿರುವುದು ಆಶ್ಚರ್ಯ ಆದರೂ ದರ್ಶನ್ ಅವರ ಬಗ್ಗೆ ಅವರು ಹೇಳಿರುವ ಈ ಮಾತುಗಳಂತೂ ಸುಳ್ಳಲ್ಲ.
ಈಗಾಗಲೇ ದರ್ಶನ್ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಮಾಧ್ಯಮಗಳೇ ಅವರನ್ನು ಹೊರಗಿಟ್ಟರು ಅಭಿಮಾನಿಗಳೆಲ್ಲ ಸೇರಿ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ ಅಷ್ಟರ ಮಟ್ಟಿಗೆನ ಪ್ರೀತಿಯನ್ನು ಕನ್ನಡದಲ್ಲಿ ಗಳಿಸಿರುವ ಇವರ ಕ್ರಾಂತಿ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗುತ್ತಿದ್ದು ಕ್ರಾಂತಿ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ.