ರವಿಚಂದ್ರನ್ ಹಾಗೂ ಹಂಸಲೇಖ ಅವರ ಸ್ನೇಹ ಎಂತಹದ್ದು ಅಂತ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಏಕೆಂದರೆ ಇಬ್ಬರೂ ಕೂಡ ಒಂದೇ ಕಾಲಘಟ್ಟದಲ್ಲಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದವರು. ಪ್ರೇಮಲೋಕ ಎಂಬ ಸಿನಿಮಾದಿಂದ ರವಿಚಂದ್ರನ್ ಅವರು ನಾಯಕ ನಟರಾಗಿ ಹೊರಹೊಮ್ಮಿದರೆ ಅದೇ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿ ಹಂಸಲೇಖಾ ಅವರು ಕೂಡ ಹೊರಹೊಮ್ಮುತ್ತಾರೆ. ಹಂಸಲೇಖ ಅವರಿಗೆ ಖ್ಯಾತ ಸಂಗೀತ ನಿರ್ದೇಶಕ ಆಗಬೇಕು ಎಂಬ ಆಸೆ ಕನಸು ಇರುತ್ತದೆ ಅದಕ್ಕೆ ಸಕಲ ತಯಾರಿಯನ್ನು ಕೂಡ ಮಾಡಿಕೊಂಡಿರುತ್ತಾರೆ. ಆದರೆ ಹಂಸಲೇಖ ಅವರಿಗೆ ಯಾರೂ ಕೂಡ ಅವಕಾಶವನ್ನು ನೀಡುವುದಿಲ್ಲ ಆ ಸಮಯದಲ್ಲಿ ರವಿಚಂದ್ರನ್ ಅವರ ಕಣ್ಣಿಗೆ ಬಿದ್ದ ವ್ಯಕ್ತಿ ಹಂಸಲೇಖ ರವಿಚಂದ್ರನವರು ತಮ್ಮ ಸಿನಿಮಾಗೆ ಹಂಸಲೇಖ ಅವರನ್ನು ಹಾಕಿಕೊಳ್ಳಬೇಕು ಇವರಿಂದ ಸಂಗೀತ ನಿರ್ದೇಶನವನ್ನು ಮಾಡಿಸಿಕೊಳ್ಳಬೇಕು ಅಂತ ಅಂದುಕೊಳ್ಳುತ್ತಾರೆ.
ಇವರು ಕೂಡ ಒಂದೇ ಕಾಲಘಟ್ಟದವರಾಗಿದ್ದರಿಂದ ಯಶಸ್ಸು ಎಂಬುದನ್ನು ಇವರು ಕೂಡ ಬಯಸುತ್ತಾರೆ ಅಷ್ಟೇ ಅಲ್ಲದೆ ಪ್ರಾರಂಭದ ದಿನದಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಇಬ್ಬರೂ ಕೂಡ ಕಠಿಣ ಪರಿಶ್ರಮವನ್ನು ವಹಿಸಿ ಪ್ರೇಮಲೋಕ ಎಂಬ ಒಂದು ಮ್ಯೂಸಿಕ್ ಸಿನಿಮಾವನ್ನು ತಯಾರಿ ಮಾಡುತ್ತಾರೆ. ಈ ಸಿನಿಮಾದಲ್ಲಿ ಬರೋಬ್ಬರಿ 11 ಹಾಡುಗಳು ಇರುವುದು ನಿಮಗೆಲ್ಲರಿಗೂ ತಿಳಿದೇ ಇದೆ ಈ ಸಿನಿಮಾ ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಪ್ರೇಮಲೋಕ ಸಿನಿಮಾದಿಂದ ಆರಂಭವಾದ ಇವರ ಜರ್ನಿ ಸುಮಾರು ದಶಕಗಳವರೆಗೂ ಕೂಡ ಮುಂದುವರೆಯುತ್ತದೆ. ರವಿಚಂದ್ರನ್ ಸಿನಿಮಾ ಅಂದರೆ ಅಲ್ಲಿ ಹಂಸಲೇಖ ಅವರು ಹಾಡು ಇದ್ದೇ ಇರುತ್ತದೆ ಇಬ್ಬರು ಕೂಡ ಬಹಳ ಆತ್ಮೀಯ ಸ್ನೇಹಿತರಾಗಿ ಹೊರಹೊಮ್ಮುತ್ತಾರೆ. ಹಂಸಲೇಖ ಇಲ್ಲದೆ ರವಿಚಂದ್ರನ್ ರವಿಚಂದ್ರನ್ ಇಲ್ಲದೆ ಹಂಸಲೇಖ ಸಿನಿಮಾವನ್ನು ಮಾಡುತ್ತಲೇ ಇರಲಿಲ್ಲ ಅಷ್ಟೊಂದು ಅವಿನಾಭವನ ಸಂಬಂಧವನ್ನು ಒಳಗೊಂಡಿದ್ದರು.
ಆದರೆ ಕೆಲವು ವರ್ಷಗಳಿಂದ ಹಂಸಲೇಖ ಮತ್ತು ರವಿಚಂದ್ರನ್ ಇಬ್ಬರೂ ಕೂಡ ಬೇರೆಯಾಗಿದ್ದಾರೆ ಇವರಿಬ್ಬರ ನಡುವೆ ವೈ ಮನಸು ಇದೆ ಸರಿಯಾಗಿ ಮಾತನಾಡುವುದಿಲ್ಲ ಎಂಬ ವದಂತಿಗಳು ಕೇಳಿ ಬರುತ್ತಿತ್ತು. ಇದಕ್ಕೆ ಸ್ಪಷ್ಟನೇ ನೀಡಿದಂತಹ ರವಿಚಂದ್ರನ್ ಯಾರಿಗೂ ತಿಳಿಯದ ಒಂದು ರೋಚಕ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ. ಹೌದು ಕೆಲವು ಕಾರಣಾಂತರಗಳಿಂದ ಚಿಕ್ಕಪುಟ್ಟ ವಿಚಾರಗಳಿಗೂ ಹಂಸಲೇಖ ಮತ್ತು ರವಿಚಂದ್ರನ್ ಅವರ ನಡುವೆ ಮನಸ್ತಾಪ ಇತ್ತಂತೆ. ಇವೆಲ್ಲವೂ ಕೂಡ ಬೆಳೆದು ದೊಡ್ಡದಾಗಿ ಕೆಲವು ವರ್ಷಗಳ ಕಾಲ ಅವರಿಬ್ಬರೂ ಭೇಟಿಯೇ ಆಗಿಲ್ಲ ಹಾಗೂ ಒಟ್ಟಾಗಿ ಸಿನಿಮಾ ಕೂಡ ಮಾಡಿಲ್ಲ. ಇದೇ ಸಮಯದಲ್ಲಿ ರವಿಚಂದ್ರನ್ ಅಭಿನಯದ ಮಲ್ಲ, ಯಾರೇ ನೀನು ಚೆಲುವೆ, ಕನಸುಗಾರ ಇನ್ನಿತರ ಸಿನಿಮಾಗಳು ತೆರೆ ಕಾಣುತ್ತದೆ.
ರವಿಚಂದ್ರನ್ ಅವರು ಈ ಸಮಯದಲ್ಲಿ ತುಂಬಾನೇ ಆರ್ಥಿಕ ಮುಗ್ಗಟ್ಟನು ಎದುರಿಸಬೇಕಾಗುತ್ತದೆ ಆದರೂ ಕೂಡ ರಾಕ್ ಲೈನ್ ವೆಂಕಟೇಶ್ ಅವರ ಪ್ರೊಡಕ್ಷನ್ ನಲ್ಲಿ ಮೂಡಿಬಂದಂತಹ ಯಾರೇ ನೀನು ಚೆಲುವೆ ಎಂಬ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅಡ್ವಾನ್ಸ್ ಪಡೆದಿರುತ್ತಾರೆ. ಈ ಸಮಯದಲ್ಲಿ ಹಂಸಲೇಖ ಅವರ ಬಳಿಯಿಂದ ಮ್ಯೂಸಿಕ್ ಮಾಡಿಸಿ ಕೊಳ್ಳೋಣ ಅಂತ ರವಿಚಂದ್ರನ್ ಅವರು ಸಲಹೆ ನೀಡುತ್ತಾರೆ. ಆದರೆ ರಾಕ್ಲೈನ್ ವೆಂಕಟೇಶ್ ಅವರು ಮಾತ್ರ ಅವರಿಂದ ಬೇಡ ಮನೋಹರ್ ಅವರಿಂದ ಸಂಗೀತ ಸಂಯೋಜನೆ ಮಾಡಿಸಿ ಕೊಳ್ಳೋಣ ಅಂತ ಹೇಳುತ್ತಾರೆ. ರವಿಚಂದ್ರನ್ ಅವರು ಹಂಸಲೇಖ ಅವರಿಂದಲೇ ಮಾಡಿಸಿ ಕೊಳ್ಳೋಣ ಎಂದು ಹೇಳಿದಾಗ ಈ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಬಿಡೋಣ ಬಿಡಿ ನಾನು ಅವರ ಬಳಿ ಮಾತನಾಡುವುದಿಲ್ಲ ಅಂತ ಹೇಳುತ್ತಾರೆ. ಆ ಸಮಯದಲ್ಲಿ ರವಿಚಂದ್ರನ್ ಅವರ ಖುದ್ದಾಗಿ ಹೋಗಿ ಹಂಸಲೇಖ ಅವರನ್ನು ಭೇಟಿ ಮಾಡಿ ಹಾಡುಗಳನ್ನು ಸಂಯೋಜನೆ ಮಾಡಿಸಿಕೊಳ್ಳುತ್ತಾರೆ.
ಈ ಸಮಯದಲ್ಲಿ ಯಾರೆ ನೀನು ಚೆಲುವೆ ಎಂಬ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಹಿಟ್ ಆಗುತ್ತದೆ ಅಷ್ಟೇ ಅಲ್ಲದೆ ಒಳ್ಳೆಯ ಕಲೆಕ್ಷನ್ ಅನ್ನು ಕೂಡ ಮಾಡುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ರವಿಚಂದ್ರನ್ ನವರು ಹೊರಬರುವ ಚಿತ್ರತಂಡದವರು ಈ ಒಂದು ಸಿನಿಮಾದ ಸಕ್ಸಸ್ ಪಾರ್ಟಿಯನ್ನು ಏರ್ಪಡಿಸಬೇಕು ಎಂದು ಅಂದುಕೊಳ್ಳುತ್ತಾರೆ. ಇದರ ಜೊತೆಗೆ ಒಂದು ಇನ್ವಿಟೇಶನ್ ಸಿದ್ಧಪಡಿಸಬೇಕು ಅಂತ ಹೇಳಿದಾಗ ರಾಕ್ ಲೈನ್ ವೆಂಕಟೇಶ್ ಅವರಿಗೆ ಇದರ ಬಗ್ಗೆ ಹೆಚ್ಚಾಗಿ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ರವಿಚಂದ್ರನ್ ಅವರನ್ನು ಖುದ್ದಾಗಿ ಭೇಟಿ ನೀಡಿ ನೀವೇ ಈ ಒಂದು ಇನ್ವಿಟೇಶನ್ ಡಿಸೈನ್ ಮಾಡಿಸಿ ಅಂತ ಹೇಳುತ್ತಾರೆ. ಆ ಸಮಯದಲ್ಲಿ ಇನ್ವಿಟೇಶನ್ ಬಗ್ಗೆ ಎಲ್ಲವನ್ನು ಕೂಡ ಹಾಕಿಕೊಡುತ್ತಾರೆ ಆದರೆ ಇನ್ವಿಟೇಶನ್ ಮಾಡುವಂತಹ ವ್ಯಕ್ತಿ ಹಂಸಲೇಖ ಅವರ ಹೆಸರನ್ನು ಬರೆಯುವುದನ್ನು ಮರೆತಿರುತ್ತಾರೆ. ಈ ಇನ್ವಿಟೇಶನ್ ನೋಡಿದಂತಹ ಹಂಸಲೇಖ ಅವರಿಗೆ ಬೇಸರವಾಗುತ್ತದೆ ಅಲ್ಲಿಂದ ಇವರಿಬ್ಬರ ನಡುವೆ ಇರಿಸಿ ಮುರಿಸು ಪ್ರಾರಂಭವಾಗುತ್ತದೆ.
ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದಂತಹ ರವಿಚಂದ್ರನ್ ಹಾಗೂ ಹಂಸಲೇಖಾ ಅವರು ಕಾಲ ಕಳೆದಂತೆ ಇಬ್ಬರು ಕೂಡ ದೂರ ಆಗುವುದಕ್ಕೆ ಪ್ರಾರಂಭವಾಗುತ್ತಾರೆ ಇಂತಹ ಚಿಕ್ಕಪುಟ್ಟ ವಿಚಾರಗಳಿಗೂ ಕೂಡ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಒಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದರೆ ಆತ ಏನು ಕೆಲಸ ಮಾಡಿದರು ಕೂಡ ನಮಗೆ ಒಳ್ಳೆಯದಾಗಿಯೇ ಕಾಣುತ್ತದೆ. ಅದೇ ರೀತಿ ಆ ವ್ಯಕ್ತಿಯ ಬಗ್ಗೆ ನಮ್ಮ ಮೇಲೆ ಕೆಟ್ಟ ಅಭಿಪ್ರಾಯ ಒಂದು ಬಾರಿ ಬಂದರೆ ಆತ ಏನೇ ಒಳ್ಳೆ ಕೆಲಸ ಮಾಡಿದರು ಕೂಡ ಅದು ನಮಗೆ ತಪ್ಪಾಗಿಯೇ ಕಾಣುತ್ತದೆ. ಹಾಗೆಯೇ ರವಿಚಂದ್ರನ್ ಅವರು ಯಾವುದೇ ಕೆಲಸ ಮಾಡಿದರು ಏನೇ ಮಾತನಾಡಿದರು ಕೂಡ ಅವೆಲ್ಲವೂ ಹಂಸಲೇಖ ಅವರ ಕಣ್ಣಿಗೆ ತಪ್ಪಾಗಿಯೇ ಕಾಣುತ್ತದೆ. ಇವರಿಬ್ಬರ ನಡುವೆ ಇದ್ದಂತಹ ಒಡನಾಟ ಹಾಗೂ ಅರ್ಥ ಮಾಡಿಕೊಳ್ಳುವಂತಹ ಗುಣ ಕಾಲ ಕಳೆದಂತ ಮಾಯವಾಗುತ್ತದೆ. ಈ ಕಾರಣದಿಂದಾಗಿಯೇ ರವಿಚಂದ್ರನ್ ಕೂಡ ದೂರ ಇರುವುದು ಈ ವಿಚಾರದ ಬಗ್ಗೆ ಸ್ವತಹ ರವಿಚಂದ್ರನ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ವಿಡಿಯೋ ಈ ಕೆಳಕಂಡಂತೆ ಇದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.