ಸದ್ದಿಲ್ಲದೇ ಸೆಟ್ಟೇರಿದ ರವಿಚಂದ್ರನ್ ಅವರ ಹೊಸ ಸಿನಿಮಾ, ಸ್ನೇಹಿತನಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ ಶಿವಣ್ಣ
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚಂದನವನ ಕಂಡ ಕನಸುಗಾರ. ಸಿನಿಮಾ ಲೋಕದಲ್ಲಿ ಹೊಸ ಹೊಸ ವಿಭಿನ್ನ ಬಗೆಯ ಪ್ರಯೋಗಗಳನ್ನು ಮಾಡಿ ಕನ್ನಡಿಗರಿಗೆ ಹೊಸ ರೀತಿಯ ಸಿನಿಮಾಗಳನ್ನು ಮತ್ತು ಕನ್ನಡ ಚಿತ್ರರಂಗಕ್ಕೆ ನೂತನ ಮಾದರಿಯ ಸಿನಿಮಾಗಳನ್ನು ಕೊಟ್ಟವರು ರವಿ ಸರ್ ವಯಸ್ಸು 60 ದಾಟಿದ್ದರೂ ಕೂಡ ಸಿನಿಮಾ ಉತ್ಸಾಹ ಇವರಿಗೆ ಸ್ವಲ್ಪ ಕೂಡ ಕಡಿಮೆ ಆಗಿಲ್ಲ.
10 ವರ್ಷಗಳ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಅವರು ಸಿನಿಮಾ ಇಂಡಸ್ಟ್ರಿಗೆ ಕೊಟ್ಟಿರುವ ಕೊಡುಗೆ ಬರಿ ಪದಗಳಲ್ಲಿ ವಿವರಿಸಿದಷ್ಟು ಹಗುರವಾದದಲ್ಲ. ಇತ್ತೀಚಿಗಷ್ಟೇ ಖಾಸಗಿ ಕಾರ್ಯಕ್ರಮ ಒಂದರಲ್ಲಿ ವೈಯಕ್ತಿಕ ಜೀವನದ ಕಹಿ ಘಟನೆ ನೆನೆದು ಭಾವುಕರಾಗಿ ಮಾತನಾಡಿದ್ದರು ರವಿಚಂದ್ರನ್.
ಆನಂತರ ಕನ್ನಡದ ಸ್ಟಾರ್ ಹೀರೋಗಳು ಅವರಿಗೆ ಸಹಾಯ ಮಾಡಿದ್ದಾನೆ ಎನ್ನುವ ಗಾಳಿ ಸುದ್ದಿಗಳು ಹಬ್ಬಿತ್ತು. ಅದಕ್ಕೂ ಕೂಡ ರವಿಚಂದ್ರನ್ ಅವರೇ ಸ್ಪಷ್ಟನೆ ನೀಡಿದ್ದರು. ರವಿಚಂದ್ರನ್ ಅವರಿಗೆ ಅವರ ವೈಯಕ್ತಿಕ ಜೀವನ ಕಷ್ಟಕಿಂತ, ಜನರಿಗೆ ಇಷ್ಟ ಆಗುವ ಸಿನಿಮಾ ಕೊಡುತ್ತಿಲ್ಲ ಜನ ನನ್ನ ಸಿನಿಮಾ ನೋಡಲು ಥಿಯೇಟರ್ ಕಡೆ ಬರುತ್ತಿಲ್ಲ ಎನ್ನುವುದೇ ಹೆಚ್ಚು ಕಾಡುತ್ತಿರುವುದು ಎಂದು ಅವರೇ ಹೇಳಿಕೊಂಡಿದ್ದಾರೆ.
ಹೀಗಾಗಿ ಅವರಿಗೆ ಈ ಬಾರಿ ಜನರಿಗೆ ಸಾಕಷ್ಟು ಹತ್ತಿರವಾಗುವ ಆಗುವ ಸಿನಿಮಾ ಒಂದರಲ್ಲಿ ನಾಯಕ ಆಗುವ ಅವಕಾಶ ಸಿಕ್ಕಿದೆ. ಅದು ಸಹ ತೆಲುಗಿನ ಮೂಲದ ಯುವ ನಿರ್ದೇಶಕ ಅನೀಸ್ ಕುಮಾರ್ ಎನ್ನುವ ನಿರ್ದೇಶಕನ ಜೊತೆ. ಅನೀಸ್ ಅವರು ಅಮೆರಿಕದ ಸೈನ್ಯದಲ್ಲಿ ಹಲವು ವರ್ಷಗಳ ಕಾಲ ಫೋಟೋ ಜರ್ನಲಿಷ್ಟಾಗಿ ಕೆಲಸ ಮಾಡಿದ್ದರು
ಈಗ ತಮಿಳುನಾಡಿನಲ್ಲಿ ನೆಲೆಸಿರುವ ಅವರು 80ಕ್ಕೂ ಹೆಚ್ಚು ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಮಿಡ್ಲ್ ಈಸ್ಟ್ ದೇಶಗಳಲ್ಲಿ ತಿರುಗಿ ಅನುಭವ ಪಡೆದುಕೊಂಡು ಚಿತ್ರಕಥೆಯನ್ನು ರೆಡಿ ಮಾಡಿಕೊಂಡಿರುವ ಈ ಸಿನಿಮಾ ರವಿಚಂದ್ರನ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಂದುಕೊಂಡಿದ್ದರಂತೆ.
ಅಲ್ಲದೆ ಚಿತ್ರದ ಕಥೆಯನ್ನು ನಿರ್ಮಾಪಕರಾದ ಎನ್ ಎಸ್ ರಾಜಕುಮಾರ್ ಹಾಗೂ ವಿ ಎಸ್ ರಾಜಕುಮಾರ್ ಅವರಿಗೆ ಹೇಳಿದಾಗ ಅವರು ಸಹ ಇವರನ್ನೇ ಸೂಚಿಸುತ್ತಾರೆ. ಮತ್ತು ರವಿಚಂದ್ರನ್ ಅವರೂ ಸಹ ಕಥೆ ಕೇಳಿದ ತಕ್ಷಣವೇ ಖುಷಿಯಾಗಿ ಈ ಪಾತ್ರ ಮಾಡೋದಾಗಿ ಒಪ್ಪಿಗೆ ಕೊಂಡರಂತೆ.
ಗಂಡ ಹೆಂಡತಿಯರ ನಡುವಿನ ಹಗ್ಗ ಜಗ್ಗಾಟದ ಎಳೆಯ ಸಿನಿಮಾದ ಮೂಲ ಕಥೆ ಆಗಿದ್ದು ಆದರೆ ಈ ರೀತಿಯ ಒಂದು ಪ್ರಯೋಗಾತ್ಮಕ ಸಿನಿಮಾ ಕನ್ನಡದಲ್ಲಿ ಇದುವರೆಗೆ ಬಂದಿಲ್ಲವಂತೆ. ಸಿನಿಮಾದಲ್ಲಿ ರವಿಚಂದ್ರನ್ ರಾಯಲ್ ಆಗಿ ಕಾಣಿಸಿಕೊಳ್ಳಲಿದ್ದು ಸಿನಿಮಾ ಪೂರ್ತಿ ಕಾಡಿನಲ್ಲಿ ಶೂಟಿಂಗ್ ಆಗಲಿದೆಯಂತೆ.
ಇದಕ್ಕಾಗಿ ಜಮಾಲಿಗುಡ್ಡ ದಾಂಡೇಲಿ ಕಡೆ ಸ್ಥಳ ಸೆಲೆಕ್ಟ್ ಕೂಡ ಮಾಡಲಾಗಿದೆಯಂತೆ ಮತ್ತು ಕೆಲವು ಸನ್ನಿವೇಶಗಳನ್ನು ಬ್ಯಾಂಕಾಕ್ ಅಲ್ಲಿ ಕೂಡ ಶೂಟಿಂಗ್ ಮಾಡಲು ನಿರ್ಧರಿಸಿದೆಯಂತೆ ಚಿತ್ರತಂಡ. ಸಿನಿಮಾದ ನಾಯಕಿ ಪಾತ್ರಕ್ಕೆ ಮುಂಬೈ ಬೆಡಗಿ ಬಾರ್ಕ್ ಬಿಸ್ಟ್ ಅವರನ್ನು ಕರೆತರಲಾಗಿದೆಯಂತೆ ಅವರಿಗೂ ಸಹ ಇದು ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿರಲಿದೆ.
ಇನ್ನು ನಿರ್ದೇಶಕ ಅನೀಶ್ ಸಾಕಷ್ಟು ಅನುಭವ ಹೊಂದಿದ್ದರೂ ಸ್ವತಂತ್ರವಾಗಿ ಮೊದಲಿಗೆ ಆಕ್ಷನ್ ಕಟ್ ಹೇಳುತ್ತಿರುವುದು ಇದೇ ಸಿನಿಮಾಗೆ. ಸಾಕಷ್ಟು ವಿಚಾರಗಳಿಂದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ನೆನ್ನೆ ಅಷ್ಟೇ ಬೆಂಗಳೂರಿನ ಶೇಷಾದ್ರಿಪುರಂ ಅಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದಿದೆ.
ರವಿಚಂದ್ರನ್ ಅವರ ಆಪ್ತ ಸ್ನೇಹಿತ ಶಿವಣ್ಣ ಬಂದು ಕ್ಲಾಪ್ ಮಾಡಿ ಶುಭ ಕೂಡ ಹಾರೈಸಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಕನ್ನಡದಲ್ಲಿ ಒಂದು ಹೊಸ ರೀತಿಯ ಕಂಟೆಂಟ್ ಓರಿಯೆಂಟೆಡ್ ಫ್ಯಾಮಿಲಿ ಡ್ರಾಮಾ ಸಿನಿಮಾ ಒಂದನ್ನು ನೋಡುವ ಅವಕಾಶ ಕನ್ನಡಿಗರ ಪಾಲಿಗೆ ದೊರೆಯಲಿದೆ.