ಕನ್ನಡ ಚಲನಚಿತ್ರ ರಂಗಕ್ಕೆ ಇಲ್ಲಿವರೆಗೆ ಹಲವಾರು ನಾಯಕರುಗಳು ಬಂದಿದ್ದಾರೆ. ಆದರೆ ಕೊನೆಯವರೆಗೂ ಹೆಸರು ಉಳಿಸಿಕೊಂಡು ಫೇಮಸ್ ಆದವರು ಬೆರಳೆಣಿಕೆಯಷ್ಟು ಜನ ಮಾತ್ರ. ಆ ಸಾಲಿನಲ್ಲಿ ಸೇರುತ್ತಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ರವಿಚಂದ್ರನ್ ಅವರು ನಿಜವಾಗಿಯೂ ಸಿನಿಮಾ ಬಗ್ಗೆ ಇಟ್ಟುಕೊಂಡಿರುವ ಕ್ರೇಝ್ ಅದ್ಭುತವಾದದ್ದು. ಅದಕ್ಕಾಗಿ ಅವರನ್ನು ಕ್ರೇಜಿಸ್ಟಾರ್ ಎಂದು ಕರೆಯುತ್ತಾರೆ ಎಂದರೆ ತಪ್ಪಾಗಲಾರದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಬ್ಬ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಡುಗಾರರಾಗಿ ಸಂಗೀತ ರಚನಕಾರರಾಗಿ ಸಂಗೀತ ನಿರ್ದೇಶಕರಾಗಿ ಕಥೆಗಾರನಾಗಿ ಕಳೆದ ಮೂರ್ನಾಲ್ಕು ದಶಕಗಳಿಂದ ಸಕ್ರಿಯರಾಗಿದ್ದಾರೆ. ಇಂದಿಗೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಜನರಿಗೆ ನಿರೀಕ್ಷೆಗಳು ಹೆಚ್ಚು. ಯಾಕೆಂದರೆ ಸಿನಿಮಾ ಬಗ್ಗೆ ರವಿಚಂದ್ರನ್ ಅವರಿಗೂ ಕೂಡ ಅಷ್ಟೇ ಹುಚ್ಚು ಇದೆ ಅದರಿಂದ ಅವರ ಹೊಸ ಪ್ರಯೋಗಗಳನ್ನು ನೋಡುವ ಸಲುವಾಗಿ ಜನರು ಸಹ ಕಾತುರರಾಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕ ಎನ್ನುವ ಸಿನಿಮಾದ ಮೂಲಕ ಕನ್ನಡದಲ್ಲಿ ಹೊಸದೊಂದು ಸಂಚಲನವನ್ನು ಮೂಡಿಸಿದರು. ಅಂದಿನಿಂದ ಅವರು ನಡೆದಿದ್ದೆ ದಾರಿಯಾಯಿತು. ಹೆಚ್ಚಾಗಿ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಎಲ್ಲಾ ಹೆಂಗಳೆಯರ ಫೇವರೆಟ್ ಹೀರೋ ಆಗಿರುವ ರವಿಚಂದ್ರನ್ ಅವರು ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕೆ ಇರುವಷ್ಟು ಬೆಲೆಯನ್ನು ನಾಯಕಿಯ ಪಾತ್ರಕ್ಕೂ ಬಿಟ್ಟುಕೊಡುತ್ತಾರೆ. ಹೀಗಾಗಿ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಒಂದು ಬಾರಿಯಾದರೂ ನಟಿಸಲು ಅವಕಾಶ ಸಿಗುತ್ತದೆಯೇ ಎಂದು ಎಲ್ಲ ನಟಿಮಣಿಯರು ಕಾಯುತ್ತಾರೆ. ಹಿಂದಿ ಭಾಷೆಯ ನಾಯಕಿಯರನ್ನೂ ಕೂಡ ಕನ್ನಡದ ಸಿನಿಮಾಗಳಿಗೆ ಕರೆತಂದ ಖ್ಯಾತಿ ರವಿಚಂದ್ರನ್ ಅವರದ್ದು. ಇವರ ಸಿನಿಮಾ ಪೂರ್ತಿ ಹೀರೋಯಿನ್ ಜೊತೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಇವರನ್ನು ಲವ್ ಗುರು, ರೋಮ್ಯಾಂಟಿಕ್ ಹೀರೋ ಎಂದು ಕನ್ನಡಿಗರು ಕರೆಯುತ್ತಾರೆ.
ಇವರ ಸಿನಿಮಾ ಹಾಡುಗಳಲ್ಲಿ ಪ್ರಾಪರ್ಟಿಗಳಿಗೂ ಅಷ್ಟೇ ಕೆಲಸ ಕೊಟ್ಟಿರುತ್ತಾರೆ. ಪ್ರಾಣಿಗಳು ಪಕ್ಷಿಗಳು ಹೂವು ಹಣ್ಣುಗಳು ನವಿಲುಗರಿ ಚೆಂಡುಗಳು ಹೀಗೆ ಹಾಡಿಗಾಗಿ ಇವರು ಉಪಯೋಗಿಸದ ಪದಾರ್ಥಗಳೇ ಇಲ್ಲ. ಈ ರೀತಿಯ ಕ್ರೇಜಿ ಯೋಚನೆಗಳು ಕ್ರೇಜಿಸ್ಟಾರ್ ಗೆ ಮಾತ್ರ ಬರಲು ಸಾಧ್ಯ. ಕನ್ನಡದಲ್ಲಿ ಪ್ರೇಮಲೋಕ ಸಿನಿಮಾದ ನಂತರ ಇವರ ಸಿನಿಮಾಗಳನ್ನು ನೋಡುವವರಿಗೆ ಇದೇ ತರದ ನಿರೀಕ್ಷೆಗಳು ಹೆಚ್ಚು. ಇಲ್ಲಿಯವರೆಗೂ ರವಿಚಂದ್ರನ್ ಅವರ ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಕೂಡ ಸಿನಿಮಾಗಳಷ್ಟೇ ಹಾಡನ್ನು ಹಿಟ್ ಮಾಡಿದ್ದಾರೆ. ಹಾಡುಗಳ ವಿಚಾರವಾಗಿ ಅವರು ಅವುಗಳ ಸಾಹಿತ್ಯ ಸಂಗೀತ ಜೊತೆಗೆ ಸೀನುಗಳಿಗೂ ತುಂಬಾ ಗಮನ ವಹಿಸಿ ತೆಗೆಯುತ್ತಾರೆ. ಹೀಗಾಗಿ ರವಿಚಂದ್ರನ್ ಅವರು ಅವರ ಕ್ರೇಜಿನೆಸ್ ಇಂದ ರವಿಮಾಮ ಎಂದು ಕೂಡ ಫೇಮಸ್ ಆಗಿದ್ದಾರೆ. ಆದರೆ ಸಿನಿಮಾಗಳಲ್ಲಿ ಇವರನ್ನು ನೋಡಿದ ಅವರ ಪತ್ನಿ ಒಮ್ಮೆ ಒಂದು ಪ್ರಶ್ನೆ ಮಾಡಿದ್ದಾರಂತೆ.
ನೀವು ಸಿನಿಮಾಗಳಲ್ಲಿ ನಟಿಯರನ್ನು ಮುಟ್ಟದೇ ಆಕ್ಟಿಂಗ್ ಮಾಡಲು ಆಗುವುದಿಲ್ಲ ಹಾಡುಗಳನ್ನು ತೆಗೆಯಲು ಆಗುವುದಿಲ್ಲ ಎಂದು ಪ್ರಶ್ನಿಸಿದ್ದರಂತೆ. ಈ ವಿಷಯವನ್ನು ಜೀ ಕನ್ನಡ ವೇದಿಕೆಯಲ್ಲಿ ವಿಕ್ರಂ ರವಿಚಂದ್ರನ್ ಅವರ ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ ಹೇಳಿಕೊಂಡು ರವಿಚಂದ್ರನ್ ಅವರು ನಕ್ಕಿದ್ದಾರೆ. ನಿಜವಾಗಿಯೂ ಕನ್ನಡದಲ್ಲಿ ಈ ರೀತಿಯ ಒಬ್ಬ ಕನಸುಗಾರ ಸಿನಿಮಾ ಬಗ್ಗೆ ಅಷ್ಟು ಪ್ರೇಮ ಇಟ್ಟುಕೊಂಡಿರುವ ಸಿನಿಮಾವನ್ನೇ ಜೀವ ಎಂದುಕೊಂಡಿರುವ ಕಲಾಕಾರ ಕನ್ನಡದಲ್ಲಿ ಇರುವುದು ಕನ್ನಡಿಗರ ಅದೃಷ್ಟ ಎಂದೇ ಹೇಳಬಹುದು. ಇಂದಿಗೂ ರವಿಚಂದ್ರನ್ ಅವರ ಸಿನಿಮಾಗಳಿಗೆ ಹಾಗೂ ಹಾಡುಗಳಿಗೆ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.