ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾದ ಒಂದು ಹಾಡಿನಲ್ಲಿ ಸಾಲೊಂದಿದೆ. ಕಮೆಂಟ್ ಮಾಡೋರೆಲ್ಲಾ ಕೆಲಸಾನ ಮಾಡೋದಿಲ್ಲ ಟೀಕೆಗಳಿಗೆ ಕಿವಿ ಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ ಎಂದು. ಹೌದು, ಈ ಮಾತನ್ನು ಕೆಲ ಸಮಯದಲ್ಲಿ ನಾವು ಉಪಯೋಗಿಸುವುದು ಒಳ್ಳೆಯದು. ಮಾತು ಬಲ್ಲವರಿಗೆ ಜಗಳವೂ ಇರುವುದಲ್ಲ ಇಂತಹ ಒಂದು ಮೆಚ್ಯುರ್ಡ್ ಬಿಹೇವಿಯರ್ ಇಂದ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ. ಸೋಷಿಯನ್ ವಿಡಿಯೋದಲ್ಲಿ ಕಾಂತರಾ ಸಿನಿಮಾ ರಿಲೀಸ್ ಆದ ದಿನದಿಂದ ತುಳುನಾಡಿನ ಸಂಸ್ಕೃತಿ ಬಗ್ಗೆ ಸಿನಿಮಾ ಬಗ್ಗೆ ಸಿನಿಮಾದಲ್ಲಿನ ಇನ್ನಿತರ ವಿಷಯಗಳ ಬಗ್ಗೆ ಅದರ ಕಲೆಕ್ಷನ್ ಬಗ್ಗೆ ಮಾಡುತ್ತಿರುವ ದಾಖಲೆ ಬಗ್ಗೆ ಚರ್ಚೆ ಆಗುತ್ತಿತ್ತು.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಆದರೆ ಇದೀಗ ಅದು ವಿವಾದದತ್ತ ತಿರುಗಿ ಕೊಂಡಿದೆ. ನಟ ಚೇತನ್ ಅಹಿಂಸ ಅವರು ಕಾಂತಾರ ಸಿನಿಮಾ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆದರೆ ಬುಡಕಟ್ಟು ಜನಾಂಗದ ಸಂಸ್ಕೃತಿ, ಅದು ಹಿಂದು ಸಂಸ್ಕೃತಿಗಿಂತ ಹಳೆಯದು ಸಿನಿಮಾ ಆಚೆಗೆ ಅಥವಾ ಸಿನಿಮಾ ಮೇಲೆ ಇಂಥ ಸಂಸ್ಕೃತಿಯ ಬಗ್ಗೆ ತೋರಿಸಿಕೊಡುವಾಗ ಮೂಲ ಸಂಸ್ಕೃತಿಯ ಬಗ್ಗೆ ಸರಿಯಾಗಿ ತಿಳಿಸಬೇಕು ಇದರ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಡಬೇಕು ಎಂದು ಹೇಳಿದ್ದರು. ಅವರು ಆ ರೀತಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೇಲೆ ಬರೆದಿದ್ದೇ ತಡ ಈಗ ಪರ ಮತ್ತು ವಿರೋಧ ತಂಡಗಳು ಹುಟ್ಟಿಕೊಂಡು ದಿನಕೊಂದು ಹೊಸ ವಿಷಯವನ್ನು ಎಳೆತ್ತಂದು ಕಿತ್ತಾಡಿಕೊಳ್ಳುತ್ತಿದ್ದಾರೆ.
ಕೆಲವರು ತುಳುನಾಡಿನ ಸಂಸ್ಕೃತಿ ನಂಬಿಕೆ ದೈವಾರಾಧನೆ ಈ ವಿಚಾರವನ್ನು ಅಮೆರಿಕದಲ್ಲಿ ಹುಟ್ಟಿ ಬೆಳೆದ ನಟ ಚೇತನ್ ಅವರು ಮಾತನಾಡುವುದು ತಪ್ಪು, ತಲೆತಲಾಂತರದಿಂದ ಇಲ್ಲಿ ನಡೆದು ಬಂದಿರುವ ಆಚರಣೆಯ ಬಗ್ಗೆ ಮಾತನಾಡಿದರೆ ಇಲ್ಲಿನ ಭಾಗದ ಜನರ ಮನಸ್ಸಿಗೆ ನೋವು ತರುತ್ತದೆ ಅವರನ್ನು ಈ ವಿಷಯ ಕೆಣಕಿಸುತ್ತದೆ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಚೇತನ್ ಪರ ನಿಂತಿದ್ದಾರೆ. ಹಿಂದೂ ಸಂಸ್ಕೃತಿ ಎಂದು ದಲಿತ ಹಾಗೂ ಬುಡಕಟ್ಟು ಜನಾಂಗ ಎಲ್ಲವನ್ನು ಒಟ್ಟಾಗಿ ಸೇರಿಸಿಕೊಂಡು ಹೇಳುತ್ತಿದ್ದಾರೆ ಆದರೆ ಅವರನ್ನು ಅಸ್ಪಶ್ಯರಾಗಿ ಈವರೆಗೆ ನೋಡಲಾಗಿದೆ.
ಚೇತನ್ ಅಹಿಂಸಾ ಅವರು ಈ ಬಗ್ಗೆ ಸರಿಯಾಗಿ ಪ್ರಶ್ನಿಸಿದ್ದಾರೆ ಎಂದು ಹೇಳಿ ಅದಕ್ಕೆ ಹಿಂದೆ ಶಂಕರ್ ನಾಗ್ ಅವರು ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಕ್ರಿಯೇಟ್ ಮಾಡಿದ್ದ ಒಂದು ಸೀನ್ ತುಣುಕನ್ನು ಸೇರಿಸಿ ಆಗಲು ಕೂಡ ಅವರ ಕಾಲದಲ್ಲೂ ಭೂತ ಆರಾಧನೆಯನ್ನು ಬುಡಕಟ್ಟು ವರ್ಗದವರು ಆಚರಿಸುತ್ತಿದ್ದು ಎನ್ನುವ ಸೀನ್ ಇದೆ ಎಂದು ಸೇರಿಸಿ ಚರ್ಚೆಗಳಿದಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿ ಚೇತನ್ ಅವರ ಬಗ್ಗೆ ಮನ ಬಂದಂತೆ ಬರೆದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದರೆ ಸ್ವತಃ ರಿಷಭ್ ಶೆಟ್ಟಿ ಅವರನ್ನೇ ಈ ಬಗ್ಗೆ ಕೇಳಿದಾಗ ರಿಷಬ್ ಶೆಟ್ಟಿ ಅವರು ನೋ ಕಮೆಂಟ್ಸ್ ಎನ್ನುವ ಮೂಲಕ ಆ ವಿವಾದಕ್ಕೆ ಅಲ್ಲೇ ಸ್ಟಾಪ್ ನೀಡುವ ಪ್ರಯತ್ನ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರು ಬುದ್ಧಿವಂತರು ಯಾರ ಜೊತೆ ವಿವಾದಕ್ಕೆ ಇಳಿಯಬೇಕು ಇಳಿಯಬಾರದು ಎನ್ನುವ ಅರಿವು ಅವರಿಗಿದೆ ಹಾಗಾಗಿ ಸರಿಯಾಗಿ ಉತ್ತರ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಉತ್ತರ ಕುರಿತು ಪ್ರಶಂಸೆಗಳ ಸುರಿಮಕಳ ಕೇಳಿ ಬರುತ್ತಿದೆ. ಹಿಂದೊಮ್ಮೆ ಸಂದರ್ಶನವೊಂದರ ರಾಪಿಡ್ ಫೈಯರ್ ರೌಂಡ್ ಅಲ್ಲಿ ಎಲ್ಲದಕ್ಕೂ ಉತ್ತರ ನೀಡಿ ರಾಹುಲ್ ಗಾಂಧಿ ಎಂದು ಕೇಳಿದಾಗ ಇದೇ ರೀತಿ ನೋ ಕಮೆಂಟ್ಸ್ ಎಂದಿದ್ದಕ್ಕಾಗಿ ಟ್ರೋಲಿಗೆ ಒಳಗಾಗಿದ್ದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.