Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!

Posted on February 2, 2023 By Kannada Trend News No Comments on ಆಕ್ಸಿ-ಡೆಂಟ್ ನಲ್ಲಿ ಸ್ವಾಧೀನ ಕಳೆದುಕೊಂಡಿದ್ದ ನಟಿ ರಿಷಿಕಾ ಈಗ ಹೇಗಿದ್ದಾರೆ ಗೊತ್ತ.? ಗುರುತೇ ಸಿಗದಷ್ಟು ಬದಲಾವಣೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಹೇಗಿದ್ದ ನಟಿ ಹೇಗಾದ್ರು.!

ಹೀರೋಯಿನ್ ಆಗಿ ಮಿಂಚಿದ್ದ ಆದಿತ್ಯನ ತಂಗಿ ರಿಷಿಕಾ ಸಿಂಗ್ ಪರಿಸ್ಥಿತಿ ಈಗ ಹೇಗಾಗಿದೆ ಗೊತ್ತಾ. ರಾಜೇಂದ್ರ ಸಿಂಗ್ ಬಾಬು (Rajendra Singh Babu ) ಅವರ ಇಬ್ಬರ ಮಕ್ಕಳಲ್ಲಿ ಆದಿತ್ಯ (Adhitya) ಅವರು ಕನ್ನಡ ಚಿತ್ರರಂಗದಲ್ಲಿ ಡೆಡ್ಲಿ ಸೋಮ (Deadly Soma) ಆಗಿ ಎಲ್ಲರಿಗೂ ಪರಿಚಿತರು. ಆದರೆ ಮಗಳು ರಿಷಿಕ ಸಿಂಗ್ (Rishika Singh ) ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಸಹ ನೋಡುಗರ ಮನಸಿನಲ್ಲಿ ಕೊನೆಯವರೆಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದರಲ್ಲಿ ಇವರ ಕಳ್ಳ ಸುಳ್ಳ ಮಳ್ಳ (Kalla malla sulla) ಸಿನಿಮಾದ ಪಾತ್ರವನ್ನು ಹೇಳಬಹುದು. ಜೊತೆಗೆ ಕನ್ನಡದ ಬಿಗ್ ಬಾಸ್ ಸೀಸನ್ ಒಂದರ ಸ್ಪರ್ಧಿ ( Bigboss Season 1 ) ಕೂಡ ಆಗಿದ್ದ ರಿಷಿಕಾ ಸಿಂಗ್ ಅವರು ಬಳಿಕ ನಾನಾ ವಿವಾದಗಳಲ್ಲಿ ಸುದ್ದಿ ಆಗಿದ್ದವರು. ಕನ್ನಡ ಚಲನಚಿತ್ರ ರಂಗದ ಜೊತೆ ಬೇರೆ ಭಾಷೆಯಲ್ಲೂ ಸಹ ನಟಿಸಲು ಆಫರ್ ಪಡೆದಿದ್ದ ಇವರು ಬೆಂಗಳೂರಿನಲ್ಲಿ ಅ-ಪ-ಘಾ-ತ ( Accident) ಒಂದಕ್ಕೆ ಈಡಾಗುತ್ತಾರೆ.

ಆ ಅ-ಪ-ಘಾ-ತದ ರಭಸಕ್ಕೆ ಇವರ ದೇಹದ ಅನೇಕ ಅಂಗಗಳು ಡ್ಯಾಮೇಜ್ ಆಗಿ ಹಾಸಿಗೆ ಮೇಲೆ ವರ್ಷಗಟ್ಟಲೆ ಕಾಲ ಕಳೆಯುವ ಪರಿಸ್ಥಿತಿ ಬರುತ್ತದೆ. ರಿಷಿಕ ಸಿಂಗ್ ಅವರಿಗೆ ಈ ಆಕ್ಸಿಡೆಂಟ್ ಆಗಿ ಒಂದೂವರೆ ವರ್ಷಗಳು ಕಳೆದಿವೆ. ಒಂದರ್ಥದಲ್ಲಿ ಈಕೆಗೆ ಇದು ಪುನರ್ಜನ್ಮ ಎಂದೇ ಹೇಳಬಹುದು. ಕನ್ನಡದ ಉದಯೋನ್ಮುಖ ನಟಿ ಒಬ್ಬರಿಗೆ ಈ ರೀತಿ ಆಗಿದ್ದಕ್ಕೆ ಕನ್ನಡಿಗರೆಲ್ಲರೂ ಬೇಸರ ವ್ಯಕ್ತಪಡಿಸಿದ್ದರು. ಇಷ್ಟಕ್ಕೆ ಇವರ ಬದುಕು ಮುಗಿದು ಹೋಯಿತ ಎಂದು ಹಲವರು ನೊಂದುಕೊಂಡಿದ್ದರು.

ಆದರೆ ರಿಷಿಕಾ ಸಿಂಗ್ ಅವರು ಅವರ ಆತ್ಮವಿಶ್ವಾಸದಿಂದ ಮತ್ತೆ ಎದ್ದು ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸಂತೋಷದಿಂದ ಅವರೇ ತಮ್ಮ instagram ಖಾತೆಯಲ್ಲಿ ಇಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಹಳೆಯ ಒಂದೆರಡು ಫೋಟೋ ಜೊತೆ ಒಂದುವರೆ ವರ್ಷದಿಂದ ಅವರು ಅನುಭವಿಸಿರುವ ಕಷ್ಟಗಳ ಮತ್ತು ಅವರಿಗೆ ಆದ ಅಪಘಾತ ತೀವ್ರತೆಯ ಅವರು ಪಡೆಯುತ್ತಿದ್ದ ಚಿಕಿತ್ಸೆಯ ಒಂದಷ್ಟು ಫೋಟೋಗಳನ್ನು ಸೇರಿಸಿ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಕೊನೆ ಕೊನೆ ಫೋಟೋಗಳಲ್ಲಿ ಅವರು ಈಗ ಸ್ಟ್ಯಾಂಡ್ ಹಿಡಿದುಕೊಂಡು ನಡೆಯಲು ಪ್ರಯತ್ನಿಸುತ್ತಿರುವುದು ಜೊತೆಗೆ ಎರಡು ಕೋಲುಗಳನ್ನು ಹಿಡಿದುಕೊಂಡು ನಡೆಯಲು ಪ್ರಯತ್ನಿಸುತ್ತಿರುವುದು ಅವರ ಸಪೋರ್ಟ್ ಗೆ ಅವರ ಕುಟುಂಬಸ್ಥರು ಇರುವುದು ಕಂಡು ಬರುತ್ತದೆ. ಜೊತೆಗೆ ಭಾವನಾತ್ಮಕವಾಗಿ ಒಂದಷ್ಟು ಸಾಲುಗಳನ್ನು ಕೂಡ ನಟಿಮಣಿ ಬರೆದುಕೊಂಡಿದ್ದಾರೆ. ಮನಸ್ಸು ಮಾಡಿದರೆ ಯಾವುದು ಕೂಡ ಅಸಾಧ್ಯ ಅಲ್ಲ, ನಾನೀಗ ಸುಧಾರಿಸಿಕೊಳ್ಳುತ್ತಿದ್ದೇನೆ.

ನಾನು ಇಷ್ಟು ಆತ್ಮ ವಿಶ್ವಾಸದಿಂದ ಇರಲು ಹಾಗೂ ನನ್ನ ಆರೋಗ್ಯ ಸುಧಾರಿಸಲು ನನ್ನ ಕುಟುಂಬ ಸ್ನೇಹಿತರು ಹಿತೈಷಿಗಳು ಮತ್ತು ಹೆಚ್ಚಾಗಿ ನನ್ನ ಹೆತ್ತವರು ಕಾರಣ ಅವರೆಲ್ಲರಿಗೂ ಋಣಿ ಎಂಬರ್ಥದಲ್ಲಿ ರಿಷಿಕ ಸಿಂಗ್ ಅವರು ಶೀರ್ಷಿಕೆ ಬರೆದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಅಭಿಮಾನಿಗಳು ಸಹಾ ಖುಷಿಯಾಗಿದ್ದು ಸದ್ಯ ಇವರ ಆರೋಗ್ಯ ಚೇತರಿಕೆ ವಿಷಯ ಕೇಳಿ ಸಂತಸಪಟ್ಟಿದ್ದಾರೆ.

ರಿಷಿಕ ಸಿಂಗ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಅವರ ಕುಟುಂಬಸ್ಥರಾದ ಅಣ್ಣ ಆದಿತ್ಯ, ತಂದೆ ರಾಜೇಂದ್ರ ಸಿಂಗ್ ಬಾಬು ಹಾಗೂ ರಿಷಿಕ ಸಿಂಗ್ ಅವರ ತಾಯಿ ಮತ್ತು ಅತ್ತೆ ಆದ ವಿಜಯಲಕ್ಷ್ಮಿ ಸಿಂಗ್ ಹಾಗೂ ಅವರ ಮೂರು ಜನ ಮಕ್ಕಳು ಒಂದಿಷ್ಟು ಸ್ನೇಹಿತರು ಇವರನ್ನು ಚಿಯರಪ್ ಮಾಡುತ್ತಿರುವ ಫೋಟೋಗಳು ಇವೆ. ರಿಷಿಕ ಸಿಂಗ್ ಅವರು ಆದಷ್ಟು ಬೇಗ ಸಂಪೂರ್ಣವಾಗಿ ಗುಣಮುಖಗೊಂಡು ಮತ್ತೆ ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯಿಸುವ ಮೂಲಕ ಮತ್ತಷ್ಟು ವರ್ಷಗಳ ಕಾಲ ಎಲ್ಲರನ್ನೂ ರಂಜಿಸುವಂತಾಗಲಿ ಎಂದು ನಾವು ಕೇಳಿಕೊಳ್ಳೋಣ.

Viral News Tags:Rishika Singh
WhatsApp Group Join Now
Telegram Group Join Now

Post navigation

Previous Post: ದರ್ಶನ್ ಗಿಂತ ದೊಡ್ಡ ಸ್ಟಾರ್ ನಾ ಕರ್ಕೊಂಡ್ ಬಂದು ನನ್ನ ಸಿನಿಮಾ ಪ್ರಮೋಷನ್ ಮಾಡಿಸ್ತೀನಿ ಅಂತ ಚಾಲೆಂಜ್ ಮಾಡಿದ್ದ ಪ್ರಥಮ್ ಕೊನೆಗೆ ಕರ್ಕೊ ಬಂದಿದ್ದು ಯಾರನ್ನ ಗೊತ್ತಾ.?
Next Post: ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore