
ನಟ ಹರೀಶ್ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಎರಡು ದಶಕಗಳಿಂದಲೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಗುರುತಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಹೆಚ್ಚು ಫೇಮಸ್ ಆದವರು ಕನ್ನಡ ತಮಿಳು ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಪರಭಾಷೆಯಲ್ಲಿ ಎಲ್ಲಿಯೂ ಕೂಡ ಹೆಚ್ಚಿನ ಮನ್ನಣೆ ಮತ್ತು ಅವಕಾಶ ದೊರೆಯಲಿಲ್ಲ. ಆದರೆ ಕನ್ನಡ ಚಿತ್ರರಂಗ ಮಾತ್ರ ಇವರನ್ನು ಎಂದಿಗೂ ಕೈ ಬಿಡಲಿಲ್ಲ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡ ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿ ಚಾಚಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ ಈ ಒಂದು ಪಾತ್ರ ಇವರಿಗೆ ಎಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿದೆ ಅಂದರೆ
ಒಂದು ಕಾಲದಲ್ಲಿ ಇವರಿಗೆ ಯಾರೂ ಕೂಡ ಗೌರವ ಮನ್ನಣೆಯನ್ನು ನೀಡುತ್ತಿರಲಿಲ್ಲ ಆದರೆ ಇದೀಗ ಹರೀಶ್ ರೈ ಅಂದರೆ ಸಾಕು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದವರು ಕೂಡ ನಮ್ಮ ಸಿನಿಮಾದಲ್ಲಿ ನಟನೆ ಮಾಡಿ ಎಂದು ಆಫರ್ ಕೊಡುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ಇವರ ಹೆಸರು ಖ್ಯಾತಿ ಬೆಳೆದಿದೆ ಒಂದು ರೀತಿಯಲ್ಲಿ ಹೇಳುವುದಾದರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಭರವಸೆ ಯಶಸ್ಸು ಸಿಗದೇ ಇದ್ದಾಗ ಇವರ ಬದುಕನ್ನು ಕಟ್ಟಿಕೊಟ್ಟಿದ್ದು ಕೆಜಿಎಫ್ ಸಿನಿಮಾ. ಈಗ ಕೆಜಿಎಫ್ ಸಿನಿಮಾದಿಂದ ಹಲವಾರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆತಿದೆ ಆದರೆ ವಿಧಿ ಆಟ ಎಂಬುದು ಹೇಗಿದೆ ಅಂದರೆ. ಅವಕಾಶ ಸಿಕ್ಕರೂ ಕೂಡ ಇದೀಗ ನಟ ಸುರೇಶ್ ಅವರು ಅಭಿನಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.
ಹೌದು ನಟ ಹರೀಶ್ ರೈ ಅವರು ಸುಮಾರು ಮೂರು ವರ್ಷಗಳಿಂದಲೂ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೆ ಆದರೆ ಪ್ರಾರಂಭದ ಹಂತದಲ್ಲಿ ಇವರಿಗೆ ಅಷ್ಟೇನೂ ಈ ರೋಗದ ಲಕ್ಷಣ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಇದನ್ನು ಇವರು ನಿರ್ಲಕ್ಷ ಮಾಡಿದರು ಗಂಟಲು ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಆದರೆ ಹರೀಶ್ ರೈ ಅವರು ಅದರ ಕಡೆ ಹೆಚ್ಚು ಗಮನವನ್ನು ನೀಡಲಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರ್ಥಿಕ ಪರಿಸ್ಥಿತಿ ಅಂತಾನೇ ಹೇಳಬಹುದು. ನಾವೆಲ್ಲರೂ ಅಂದುಕೊಳ್ಳುತ್ತೇವೆ ಸೆಲೆಬ್ರೆಟಿಗಳಿಗೆ ನಟ ನಟಿಯರಿಗೆ ಯಾವುದೇ ಕಷ್ಟ ಇರುವುದಿಲ್ಲ ಅವರ ಬಳಿ ಸಾಕಷ್ಟು ಹಣ ಆಸ್ತಿ ಇರುತ್ತದೆ ಅಂತ ಆದರೆ ಇವೆಲ್ಲವೂ ಕೂಡ ಸ್ಟಾರ್ ನಟರಿಗೆ ಮಾತ್ರ ಸೀಮಿತವಾಗಿರುತ್ತದೆ.
ವಿಲ್ಲನ್ ಪಾತ್ರದಲ್ಲಿ ನಟನೆ ಮಾಡುವವರಿಗೆ ಪೋಷಕ ಪಾತ್ರದಲ್ಲಿ ಇರುವವರಿಗೆ ಮತ್ತು ಸೈಡ್ ರೋಲ್ ನಲ್ಲಿ ಅಭಿನಯ ಮಾಡುವಂತಹ ವ್ಯಕ್ತಿಗಳು ಸಾಮಾನ್ಯ ಜನರಂತೆ ಜೀವನ ಸಾಗಿಸುತ್ತಾರೆ. ಇವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆಯನ್ನು ನೀಡುತ್ತಾರೆ ವರ್ಷಕ್ಕೆ ಒಂದು ಎರಡು ತಿಂಗಳ ಶೂಟಿಂಗ್ ಇರುತ್ತದೆ. ಬಾಕಿ ಉಳಿದ ದಿನ ಕಾಲಿ ಕುಳಿತುಕೊಂಡಿರಬೇಕಾಗುತ್ತದೆ ಹಾಗಾಗಿ ಇವರಿಗೆ ಬರುವಂತಹ ಸಂಭಾವನೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಈ ಸಮಯದಲ್ಲಿ ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಆ ಒಂದು ಆಸ್ಪತ್ರೆ ಖರ್ಚಿಗೆ ಬರಿಸುವಂತಹ ಶಕ್ತಿ ಈ ಸಣ್ಣ ಕಲಾವಿದರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಹರೀಶ್ ರೈಯವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಅದಕ್ಕೆ ಟ್ರೀಟ್ಮೆಂಟ್ ಕೊಡಿಸಿಕೊಳ್ಳುವುದಿಲ್ಲ.
ಸದ್ಯಕ್ಕೆ ಹರೀಶ್ ರೈ ಅವರ ಪರಿಸ್ಥಿತಿ ಹೇಗಾಗಿದೆ ಅಂದರೆ ಒಂದು ಕಡೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೆ ಇವರ ಬಳಿ ಟ್ರೀಟ್ಮೆಂಟ್ ಗೆ ಬೇಕಾದಷ್ಟು ಹಣ ಇಲ್ಲ ಈ ಕಾರಣಕ್ಕಾಗಿ ನಟ ಹರೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಆರೋಗ್ಯ ಸರಿ ಇಲ್ಲ ಹೇಗಾದರೂ ಮಾಡಿ ನನಗೆ ಆರ್ಥಿಕ ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ತಿಳಿದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗಾ ಹರೀಶ್ ರೈ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಚಿಕಿತ್ಸೆ ಸುಮಾರು 40 ರೂಪಾಯಿ ಸಹಾಯಧನವನ್ನು ನೀಡಿದ್ದಾರೆ ಚಿಕಿತ್ಸೆಯ ಸಂಪೂರ್ಣ 40 ಲಕ್ಷ ಮಾತ್ರವಲ್ಲ ಕುಟುಂಬಕ್ಕೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ರಾಕಿ ಭಾಯ್, ಯಶ್ ಹರೀಶ್ ರೈ ಅವರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಕಿ ಭಾಯ್ ಗೆ ಅಭಿನಂದನೆಯ ಮಹಪೂರವೇ ಹರಿದು ಬಂದಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.