ಬದುಕಿನಲ್ಲಿ ಹಣ ಎಲ್ಲರಿಗೂ ಬಹಳ ಅವಶ್ಯಕತೆಯ ವಸ್ತು. ಅದು ಈಗಿನ ಕಾಲದಲ್ಲಿ ಹಣ ಇಲ್ಲದಿದ್ದರೆ ಏನು ಕೂಡ ಮಾಡಲಾಗುವುದಿಲ್ಲ. ದಿನ ಸಾಗುವುದಕ್ಕು, ಸಾಧನೆ ಮಾಡುವುದಕ್ಕೂ ಹಣವೇ ಸಾಧನ. ಈ ಹಣದ ಸಂಪಾದನೆಯ ಹಿಂದೆಯೇ ಎಲ್ಲರೂ ಓಡಾಡುತ್ತಿರುತ್ತಾರೆ. ಯಾವುದೇ ರಂಗ ತೆಗೆದುಕೊಂಡರು ಅದರ ಅಂತ್ಯ ಹಣ ಸಂಪಾದನೆಯ ಆಗಿರುತ್ತದೆ. ಹಣದ ಈ ಕಾರಣದಿಂದಲೇ ಇಂದು ದೇಶದಾದ್ಯಂತ ಇಷ್ಟು ಚಟುವಟಿಕೆಗಳು ನಡೆಯುತ್ತಿರುವುದು.
ಇಲ್ಲಿ ಪ್ರತಿಯೊಂದು ಶ್ರಮಕ್ಕೂ ಕೂಡ ತನ್ನದೇ ಆದ ಬೆಲೆ ಇದೆ, ಹೆಚ್ಚಿನ ಶ್ರಮಕ್ಕೆ ಹಣದ ಮೂಲಕವೇ ಬೆಲೆ ಕಟ್ಟಲಾಗುತ್ತಿದೆ. ಇದಕ್ಕೆ ಕಿರುತೆರೆಗಳು ಹೊರತೆನಲ್ಲ. ಕಿರುತೆರೆಯಲ್ಲಿ ನಾನಾ ರಿಯಾಲಿಟಿ ಶೋಗಳು ಬರುತ್ತವೆ ಅದರಲ್ಲಿ ಕಂಟೆಸ್ಟೆಂಟ್ಗಳಾಗಿ ಹೋಗುವವರಿಗೆ ಒಂದು ಲೆಕ್ಕ, ಗೆದ್ದ ಮೇಲೆ ಗೆದ್ದ ಸರ್ಧಿಗೆ ಬರುವ ಹಣದ ಮೊತ್ತವೆ ಒಂದು ಲೆಕ್ಕವಾಗಿ ಗೆದ್ದವರ ಕೈ ಸೇರುತ್ತದೆ. ಇಂತಹ ಎಲ್ಲಾ ಶೋ ಗಳ ಬಾಸ್ ಬಿಗ್ ಬಾಸ್. (BigBoss)
ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆದ್ದವರಿಗೆ ಬರೋಬ್ಬರಿ 60 ಲಕ್ಷಗಳ ಮೊತ್ತದ ಹಣ ಬಹುಮಾನವಾಗಿ ಸಿಗುತ್ತದೆ. ಕೆಲವೊಮ್ಮೆ ಇದು ಸೀಸನ್ ಗಳಿಗೆ ಅನುಗುಣವಾಗಿ ಹೆಚ್ಚಾಗಬಹುದು ಮತ್ತು ಅವರವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ವಾರಕ್ಕೆ ಸಂಭಾವನೆಯನ್ನು ಸಹ ಪಡೆಯುತ್ತಿರುತ್ತಾರೆ. ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ 100 ದಿನಗಳ ಆಟ ಆಗಿರುತ್ತದೆ.
100 ದಿನಗಳವರೆಗೂ ಮನೆಯಲ್ಲಿದ್ದು ಮನೆಯ ಎಲ್ಲಾ ಏರಿಳಿತಗಳನ್ನೂ ಸಹಿಸಿಕೊಂಡು ಮೇಲಿದ್ದವರು ಈ ಐವತ್ತು ಕೋಟಿಗಳನ್ನು ಪಡೆಯುತ್ತಾರೆ. ಇಲ್ಲಿ ಬರುವ ಹೆಚ್ಚಿನ ಜನ ತಮ್ಮ ವ್ಯಕ್ತಿತ್ವವನ್ನು ತೋರಿಸುವುದಕ್ಕೆ, ಅಥವಾ ತಮ್ಮನ್ನು ತಾವು ಹುಡುಕುವುದಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುವುದರ ಜೊತೆಗೆ ಹಣವೂ ಒಂದು ಕಾರಣ ಆಗಿರುತ್ತದೆ. ನಮ್ಮ ಕನ್ನಡದ ಈ ಬಿಗ್ ಬಾಸ್ ಕಾರ್ಯಕ್ರಮ ಕೂಡ ಒಂಬತ್ತು ಆವೃತ್ತಿಗಳನ್ನು ಸಕ್ಸಸ್ ಫುಲ್ ಆಗಿ ಮುಗಿಸಿದೆ.
9ನೇ ಆವೃತ್ತಿಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಅವರು ವಿನ್ನರ್ ಆಗಿ 60 ಲಕ್ಷಗಳನ್ನು ಗಳಿಸಿದ್ದಾರೆ. ಈಗ ಅವರು ಗೆದ್ದ ಹಣವನ್ನು ಒಂದು ಒಳ್ಳೆ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಈ ಸೀಸನ್ ನಲ್ಲಿ ಮನೆಯಲ್ಲಿ ಇದ್ದ ಒಂದು ಸಮಯದಲ್ಲಿ ಗೆದ್ದ ಹಣದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಯಾರು ಯಾರು ಹಣ ಬಂದರೆ ಏನು ಮಾಡುತ್ತಿರಾ ಎಂದು ಕೇಳಿದ ಪ್ರಶ್ನೆಗೆ ನೇರವಾಗಿ ರೂಪೇಶ್ ಶೆಟ್ಟಿ ಅವರು ನನಗೆ ಹಣದ ಅವಶ್ಯಕತೆ ಬಹಳ ಇದೆ.
ನಾನು ಇದಕ್ಕಾಗಿ ಕಷ್ಟಪಟ್ಟಿದ್ದೇನೆ, ನಾನು ಇನ್ನು ಬೆಳೆಯಬೇಕು ಹಾಗಾಗಿ ಸಂಪೂರ್ಣವಾಗಿ ಇದನ್ನು ನನ್ನ ಮುಂದಿನ ಏಳಿಗೆಗೆ ಬಳಸಿಕೊಳ್ಳುತ್ತೇನೆ ಎಂದು ಧೈರ್ಯವಾಗಿ ಹಾಗೂ ನೇರವಾಗಿ ಹೇಳಿದ್ದರು. ಆದರೆ ಮನೆಯಿಂದ ಆಚೆ ಬಂದ ಬಳಿಕ ಅವರ ನಡವಳಿಕೆ ಬದಲಾಗಿದೆ ಈ ಬಾರಿ ಅವರು ತಮ್ಮಂತೆ ಕಷ್ಟದಲ್ಲಿರುವ ಇತರರಿಗೆ ಕೈಜೋಡಿಸುವ ನಿರ್ಧಾರ ಮಾಡಿ ಗೆದ್ದ ಹಣದ ಅರ್ಧದಷ್ಟು ಧಾರಾಳವಾಗಿ ದಾನ ಮಾಡಿದ್ದಾರೆ.
https://youtu.be/LcLbRbYkP3o
ರೂಪೇಶ್ ಶೆಟ್ಟಿಯವರು 5000 ಗಳಂತೆ 450 ಕುಟುಂಬಗಳಿಗೆ ಹಣ ಹಂಚಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ವೇದಿಕೆ ಮೇಲೆ ಅವರು ನಿಂತು ಪ್ರತಿಯೊಬ್ಬರನ್ನು ಕಳೆದು ಎನ್ವಿಲಪ್ ಒಳಗೆ ಹಣ ಹಾಕಿ ಕೊಟ್ಟಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಸದ್ಯಕ್ಕೆ ಈ ವಿಡಿಯೋ ಒಂದೇ ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಷ್ಟನೆ ಸಿಗುತ್ತದೆಯಾ ಕಾದು ನೋಡಬೇಕಾಗಿದೆ. ಏನೇ ಆದರೂ ತಾವು ಕಷ್ಟದಲ್ಲಿದ್ದರೂ ತಮ್ಮಂತೆ ಇತರರಿಗೂ ಮಿಡಿದಿರುವ ರೂಪೇಶ್ ಶೆಟ್ಟಿ ಅವರ ಹೃದಯವಂತಿಕೆಯನ್ನು ಮೆಚ್ಚಲೇಬೇಕು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.