ಕಂಬಳದ ವೇದಿಕೆಯಲ್ಲಿ ಸಾನಿಯಾ ಅಯ್ಯರ್ ಹೈಡ್ರಾಮಾ. ಪುಟ್ಟಗೌರಿ ಮದುವೆ (Putta gowri Madhuve) ಧಾರಾವಾಹಿ ಖ್ಯಾತಿಯ ಸಾನಿಯಾ ಅಯ್ಯರ್ (Sanita Iyer) ಅವರು ಈಗ ಬಿಗ್ ಬಾಸ್ ಸಾನಿಯಾ ಎಂದೇ ಕರ್ನಾಟಕದ ಪೂರ್ತಿ ಫೇಮಸ್ ಆಗಿದ್ದಾರೆ. ಈ ಬಾರಿ ಕನ್ನಡದ 9ನೇ ಸೀಸನ್ ಬಿಗ್ ಬಾಸ್ (Bigboss) ಕಾರ್ಯಕ್ರಮದಲ್ಲಿ ಮತ್ತು ಬಿಗ್ ಬಾಸ್ ಓಟಿಟಿ (Bigboss OTT ) ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಹೋಗಿದ್ದ ಸಾನಿಯಾ ಅಯ್ಯರ್ ಅವರು ಬಹಳ ದಿನಗಳ ಕಾಲ ಮನೆಯಲಿದ್ದು ಪ್ರೇಕ್ಷಕರನ್ನು ಮನೋರಂಜಿಸಿದ್ದರು.
ಈಗಷ್ಟೇ ಪದವಿ ಪಡೆದುಕೊಂಡ ಸಂಭ್ರಮದಲ್ಲಿದ್ದ ಸಾನಿಯಾ ವಿ-ವಾ-ದ ಒಂದಕ್ಕೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಖ್ಯಾತಿಯಿಂದ ಇವರನ್ನು ಹಲವಾರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಸಲಾಗುತ್ತಿದೆ. ನಾಡಿನಾದ್ಯಂತ ಹಲವು ಕಡೆ ಇವರು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದಾರೆ. ಆದರೆ ಈ ಬಾರಿ ತುಳು ನಾಡಿಗೆ ಹೋಗಿದ್ದ ಇವರು ಗಲಾಟೆ ಮಾಡಿಕೊಂಡು ಕಾಂಟ್ರವರ್ಸಿ (contreversy) ಮಾಡಿಕೊಂಡಿದ್ದಾರೆ. ವ್ಯಕ್ತಿಯೋರ್ವರಿಗೆ ಇವರು ಹ-ಲ್ಲೆ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದೆ.
ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಟಾಸ್ಕುಗಳ ವಿಚಾರಕ್ಕಿಂತ ಮನೆಯ ಇತರ ಚಟುವಟಿಕೆ ವಿಚಾರಕ್ಕಿಂತ ಜಶ್ವಂತ್ (Jashvanth) ಹಾಗೂ ರೂಪೇಶ್ ಶೆಟ್ಟಿ (Roopesh Shetty) ಅವರ ಜೊತೆಗಿನ ಸಂಬಂಧದ ಕಾರಣದಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಿದ್ದ ಸಾನಿಯಾ ಅವರು ರೂಪೇಶ್ ಶೆಟ್ಟಿ ಅವರ ಜೊತೆ ಮಿತಿಮೀರಿದ ಬಾಂಧವ್ಯ ಹೊಂದಿದ್ದರು. ಎಷ್ಟೋ ಬಾರಿ ಇವರ ವರ್ತನೆ ಕಂಡು ಇತರರು ಬುದ್ಧಿ ಹೇಳಿದ್ದಾರೆ, ಸ್ವತಃ ಸುದೀಪ್ (Suddep) ಅವರೇ ಇಬ್ಬರಿಗೂ ವಾರಾಂತ್ಯದ ಪಂಚಾಯಿತಿ ಕಟ್ಟೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದು ಇದೆ.
ಹಾಗಾಗಿ ಬಿಗ್ ಬಾಸ್ ಮನೆಗೆ ಹೋದ ಮೇಲೆ ಜನರ ದೃಷ್ಟಿಯಲ್ಲಿದ್ದ ಪುಟ್ಟಗೌರಿ ಬದಲು ಈಗ ಬೇರೆ ಇಮೇಜ್ ಬಂದಿದೆ ಎನ್ನಬಹುದು. ಬಹುಶಃ ಈಗ ಆಗಿರುವ ಈ ಘಟನೆಗೂ ಅದೇ ಇಮೇಜ್ ಕಾರಣ ಇದ್ದರೂ ಇರಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಚೆನ್ನಯ್ಯ ಜೋಡಿಕೆರೆ ಕಂಬಳಕ್ಕೆ (Chennaya Jodikere Kambala) ಅತಿಥಿಯಾಗಿ ಸಾನಿಯಾ ಅಯ್ಯರ್ ಹೋಗಿದ್ದರು. ಜನವರಿ 28ನೇ ರಂದು ಈ ಕಂಬಳ ಕಾರ್ಯಕ್ರಮ ನಡೆದಿತ್ತು ಆದರೆ ಇಲ್ಲಿ ಆಗಿರುವ ಪ್ರಕರಣ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳು ಕೂಡ ಸಾರ್ವಜನಿಕರಿಗೆ ಸಿಕ್ಕರೆ ಅವರನ್ನು ಮಾತನಾಡಿಸಲು ಅವರ ಆಟೋಗ್ರಾಫ್ ಹಾಕಿಸಿಕೊಳ್ಳಲು ಮತ್ತು ಫೋಟೋ ತೆಗೆದುಕೊಳ್ಳಲು ಜನರು ಮುಗಿ ಬೀಳುತ್ತಾರೆ. ಹೀಗೆ ಅಲ್ಲಿದ್ದ ಹಲವರು ಸಾನಿಯಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಆಸೆ ಪಡುತ್ತಿದ್ದರು ಹಲವರಿಗೆ ಸ್ಪಂದಿಸಿದ ಸಾನಿಯಾ ಅವರಿಗೆ ಒಬ್ಬಾತ ಕೂದಲು ಎಳೆದು ಕೈ ಕೂಡ ಎಳೆದಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಆಕೆ ಆತನಿಗೆ ಕಪಾಳ ಮೋಕ್ಷ (Slapping) ಮಾಡಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ಆತ ಮತ್ತೆ ಸಾನಿಯಾ ಕೆನ್ನೆಗೂ ಬಾರಿಸಿದ್ದಾನೆ. ಇದಾದ ಬಳಿಕ ಸಾನಿಯಾ ಹಾಗೂ ಅವರ ಸ್ನೇಹಿತರು ಕಂಬಳ ಆಯೋಜಿಸಿದ್ದ ಆಯೋಜಕ ರನ್ನು ತರಾಟೆಗೆ ತೆಗೆದುಕೊಂಡಿದ್ದು ಇದೇನ ನೀವು ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಸಾನಿಯಾ ಹಾಗೂ ಅವರ ಸ್ನೇಹಿತೆ ಪ್ರಶ್ನೆ ಮಾಡುತ್ತಿರುವುದು ಮತ್ತು ಸಾನಿಯಾ ಬೆರಳು ತೋರಿಸಿ ಅಲ್ಲಿದ್ದ ಯಾರಿಗೋ ಹುಡುಗಿಯರ ವಿಷಯಕ್ಕೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಅವಾಜ್ ಹಾಕಿರುವುದು ಕಂಡು ಬರುತ್ತದೆ.
ಈಗಷ್ಟೇ ಇದು ಮಾಧ್ಯಮಗಳೆಲ್ಲ ಸುದ್ದಿ ಆಗುತ್ತಿದ್ದು ನಂತರ ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ. ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ಎಲ್ಲರೂ ಮಹಿಳೆಯರ ಪರ ನಿಲ್ಲುತ್ತಾರೆ ಆದರೆ ಈ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಕಾಮೆಂಟ್ಗಳಲ್ಲಿ ಸಾನಿಯಾ ಪರವಾಗಿ ಮಾಡುವುದಕ್ಕಿಂತ ವಿರೋಧವಾಗಿ ಹೆಚ್ಚು ಜನ ಕಾಮೆಂಟ್ ಮಾಡುತ್ತಿದ್ದಾರೆ ಎನ್ನುವುದೇ ಬಹಳ ವಿಚಿತ್ರ ಎನಿಸುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.