ಸಾಧು ಕೋಕಿಲ (Sadhu Kokila) ಕನ್ನಡದ ಮ್ಯೂಸಿಕ್ ಲೋಕದ ಮಾಂತ್ರಿಕ. ಫಾಸ್ಟೆಸ್ಟ್ ಕೀಬೋರ್ಡ್ ಪ್ಲೇಯರ್ ಎಂದು ಹೆಸರುವಾಸಿ ಆಗಿರುವ ಸಾಧುಕೋಕಿಲ ಅವರು ಸಂಗೀತ ಸಂಯೋಜನೆ (Music compose) ಮಾಡುತ್ತಾ ಅವಕಾಶಕ್ಕಾಗಿ ಸಿನಿಮಾ ಇಂಡಸ್ಟ್ರಿಯ ಕದ ತಟ್ಟಿದ್ದರು. ಮನೋಮೂರ್ತಿ (Manomoorthy) ಅವರ ಪರಿಚಯದಿಂದ ನಂತರ ಅವರ ಮೂಲಕ ಉಪೇಂದ್ರ ( Upendra) ಅವರಿಗೆ ಪರಿಚಯವಾದರು, ಆ ನಂತರ ನಡೆದದ್ದೆಲ್ಲ ಇತಿಹಾಸವೇ ಆಗಿಹೋಯಿತು.
ಆ ಭೇಟಿಯಿಂದ ಬರಿ ಸಾಧು ಆಗಿದ್ದ ಅವರು ಸಾಧುಕೋಕಿಲ ಆಗುವಂತೆ ಆಯಿತು ಆ ರೋಚಕ ಪಯಣದ ಬಗ್ಗೆ ವೀಕೆಂಡ್ ವಿತ್ ರಮೇಶ್ (Weekend with Ramesh program ) ಕಾರ್ಯಕ್ರಮದಲ್ಲಿ ಸಾಧುಕೋಕಿಲ ಅವರು ತಮ್ಮ ಆರಂಭಿಕ ದಿನಗಳನ್ನು ನೆನೆದು ಹೇಳಿಕೊಂಡಿದ್ದಾರೆ. ಉಪೇಂದ್ರ ಅವರ ನಿರ್ದೇಶನದ ಶ್! (Shh!) ಸಿನಿಮಾದಲ್ಲಿ ಸಾಧುಕೋಕಿಲ ಅವರಿಗೆ ಸಂಗೀತ ನಿರ್ದೇಶನ ಮಾಡಲು ಉಪೇಂದ್ರ ಅವರು ಆಫರ್ ಕೊಟ್ಟಿದ್ದರಂತೆ.
ಆದರೆ ಉಪೇಂದ್ರ ಅವರು ಎಂದಿಗೂ ಕೂಡ ಅನ್ಸಾಟಿಸ್ಫೈಡ್ ಪರ್ಸನ್ ಎನ್ನುವ ಸಾಧುಕೋಕಿಲ ಅವರು ಸಾಕಷ್ಟು ಬಾರಿ ಅವರ ಮಾಡಿದ ಎಲ್ಲಾ ಟ್ಯೂನ್ ಗಳನ್ನು ಉಪೇಂದ್ರ ಅವರು ರಿಜೆಕ್ಟ್ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ. ಹೀಗೆ ಒಂದು ದಿನ ಅಸಿಸ್ಟೆಂಟ್ ಎಲ್ಲರನ್ನು ಮನೆಗೆ ಕಳುಹಿಸಿ ಬಿಟ್ಟಿದ್ದರು, ಹಾಡು ಸರಿ ಇಲ್ಲ ಮತ್ತೊಂದು ಈಗಲೇ ಮಾಡಬೇಕಂತೆ ಬನ್ನಿ ಎಂದು ಜೊತೆಗೆ ಕರೆದುಕೊಂಡು ಹೋದರು. ನಾನು ಇದು ಮುಗಿಯದ ಕಥೆ ಎಂದುಕೊಂಡು ಅವರ ಜೊತೆ ಹೊರಟೆ, ಹೋದ ತಕ್ಷಣ ನನ್ನ ಅವತಾರವನ್ನೇ ಚೇಂಜ್ ಮಾಡಿ ಕ್ಯಾಮೆರಾ ಮುಂದೆ ನಿಲ್ಲಿಸಿಬಿಟ್ಟರು.
ಪಕ್ಕದಲ್ಲೇ ಕಾಶಿನಾಥ್ ಅವರು ಇದ್ದಾರೆ ಅವರ ಎದುರು ಆಕ್ಟಿಂಗ್ ಮಾಡಿ ಎಂದು ಉಪೇಂದ್ರ ಅವರು ನನಗೆ ಹೇಳುತ್ತಿದ್ದಾರೆ. ಏನು ಮಾಡಬೇಕು ಅಂತ ದೋಚದೆ ನನಗೆ ಗೊತ್ತಿರುವಷ್ಟು ಮಾಡಿದೆ. ಅಲ್ಲಿದ್ದವರೆಲ್ಲರೂ ಖುಷಿಪಟ್ಟರು ಅದುವರೆಗೆ ನನ್ನಲ್ಲೂ ಒಬ್ಬ ನಟ ಇರುತ್ತಾನೆ ಅನ್ನೋದೇ ನನಗೆ ಗೊತ್ತಿರಲಿಲ್ಲ. ಉಪೇಂದ್ರ ಅವರಿಂದ ನಾನು ನಟನಾದೆ, ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕಾಗಿ ಸಂಗೀತ ನಿರ್ದೇಶಕನಾದೆ ಮತ್ತು ರಕ್ತ ಕಣ್ಣೀರು (Raktha kanneru) ಸಿನಿಮಾಗೂ ಸಹ ನಾನು ಸಂಗೀತ ನಿರ್ದೇಶಕನಾಗಿಯೇ (Director) ಹೋಗಿದ್ದು ಆದರೆ ನಂತರ ನನಗೆ ನಿರ್ದೇಶಕನ ಬಡ್ತಿ ಕೊಟ್ಟಿದ್ದು ಉಪೇಂದ್ರ ಅವರು.
ನನ್ನ ಪಾಲಿಗೆ ಅವರೇ ಗಾಡ್ ಫಾದರ್, ಅವರೇ ನನ್ನ ಈ ಎಲ್ಲ ಕಲೆಗಳನ್ನು ಗುರುತಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಸಾಧು ಅವರ ಹೆಸರ ಜೊತೆ ಕೋಕಿಲ ಹೆಸರನ್ನು ಸೇರಿಸಿದ್ದು ಕೂಡ ಉಪೇಂದ್ರ ಅವರೇ ಎನ್ನುವುದನ್ನು ಈ ಹಿಂದೆ ಸುವರ್ಣ ಚಾನೆಲ್ ನ ಕಾರ್ಯಕ್ರಮ ಒಂದರಲ್ಲಿ ಸಾಧುಕೋಕಿಲ ಅವರು ಹೇಳಿಕೊಂಡಿದ್ದರು. ನನ್ನ ಮ್ಯೂಸಿಕ್ ಕಂಪೋಸ್ ನೋಡಿ ಕೋಗಿಲೆ ಎಷ್ಟು ಇಂಪಾಗಿ ಆಡುತ್ತದೊ ಅಷ್ಟೇ ಇಂಪಾಗಿ ನೀವು ಟ್ಯೂನ್ ಮಾಡುತ್ತೀರಾ ಹಾಗಾಗಿ ನಿಮ್ಮ ಹೆಸರನ್ನು ಕೋಕಿಲ ಎಂದು ಮಾಡಿ ಬಿಡೋಣ ಎಂದು ಸಾಧು ಜೊತೆ ಕೋಕಿಲ (Kokila name) ಸೇರಿಸಿದರು, ಅದರಿಂದ ನನ್ನ ಹೆಸರು ಸಾಧುಕೋಕಿಲ ಆಯ್ತು ಎಂದು ಹೇಳಿ ಹೆಸರಿನ ಕುರಿತು ಕಥೆ ಹೇಳಿದ್ದರು.
ಆದರೆ ಕರ್ನಾಟಕದಲ್ಲಿ ಇವರೆಗೆ ಮತ್ತೊಂದು ಹೆಸರಿದೆ ಅದೇನು ಎಂದರೆ ಸಾಧು ಮಹಾರಾಜ್ (Sadhu Maharaj) ಎಂದು. ಹಾಸ್ಯಲೋಕದ (Comedy King) ಮಹಾರಾಜನಂತಿರುವ ಇವರ ಹಾಸ್ಯವನ್ನು ನೋಡಿ ನಕ್ಕು ನಗದವರೇ ಇಲ್ಲ. ತೆರೆ ಮೇಲೆ ಇವರು ಎಂಟ್ರಿ ಕೊಟ್ಟರೆ ಸಾಕು ಶಿಲ್ಲೆ, ಚಪ್ಪಾಳೆ ಜೊತೆ ಎಲ್ಲರ ಮುಖ ನಗುವಿನಿಂದ ಕೂಡಿರುತ್ತದೆ ಮತ್ತು ಅಷ್ಟೇ ಕುತೂಹಲದಿಂದ ಇವರ ಡೈಲಾಗ್ ಮತ್ತು ಆಕ್ಟಿಂಗ್ ಅನ್ನು ಜನ ನೋಡುತ್ತಾರೆ. ಇದುವರೆಗೆ ಕನ್ನಡದ ನೂರಾರು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಸಾಧು ಕೋಕಿಲ ಅವರು ಕಾಣಿಸಿಕೊಂಡಿದ್ದಾರೆ. ಈ ಎಲ್ಲ ಸಾಧನೆ ಮತ್ತು ಹೆಸರಿಗೆ ಮನೋಮೂರ್ತಿ ಹಾಗೂ ಉಪೇಂದ್ರ ಅವರೇ ಕಾರಣ ಎಂದು ವಿನಯದಿಂದ ಹೇಳಿಕೊಳ್ಳುತ್ತಾರೆ.