ಸಾಧು ಕೋಕಿಲ ಅವರನ್ನು ತೆರೆ ಮೇಲೆ ಕಂಡರೆ ಸಾಕು ಪ್ರೇಕ್ಷಕರ ಎಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಅಷ್ಟು ಚೆನ್ನಾಗಿ ಹಾಸ್ಯ ಮಾಡಿ ನೋಡುಗರ ಮುಖದಲ್ಲಿ ನಗು ತರುಸುವ ತೆರೆ ಮೇಲಿನ ಈ ಕಲಾವಿದ ತೆರೆ ಹಿಂದೆ ಅಷ್ಟೇ ಮಟ್ಟದ ಕಲೆ ಹೊಂದಿರುವ ತಂತ್ರಜ್ಞನು ಹೌದು. ಸಾಧುಕೋಕಿಲ ಅವರು ನಟನೆಯ ಕಲೆಯ ಜೊತೆಗೆ ಆಳವಾದ ಸಂಗೀತ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಯಶಸ್ವಿಯಾಗಿದ್ದು ಹಲವು ಸಿನಿಮಾಗಳ ಹಾಡಿಗೆ ಇವರು ಸಹ ಧ್ವನಿ ನೀಡಿದ್ದಾರೆ.
ಸಾಧು ಕೋಕಿಲ ಅವರು ನಿರ್ದೇಶನದಲ್ಲೂ ಕೂಡ ಕೈಚಳಕ ತೋರಿದ್ದು ಕನ್ನಡ ಚಲನಚಿತ್ರ ರಂಗದ ಯಶಸ್ವಿ ನಿರ್ದೇಶಕ ಎನಿಸಿದ್ದಾರೆ. ರಕ್ತ ಕಣ್ಣೀರು, ಸುಂಟರಗಾಳಿ, ಅನಾಥರು, ಶೌರ್ಯ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಸಾಧು ಕೋಕಿಲ ಹಾಗೂ ದರ್ಶನ್ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿ ವರ್ಕ್ ಆಗುತ್ತದೆ. ಸುಂಟರಗಾಳಿ ಅಯ್ಯಾ ಸಿನಿಮಾಗಳಿಂದ ಹಿಡಿದು ಈಗಿನ ಕ್ರಾಂತಿ ಸಿನಿಮಾದ ತನಕ ದರ್ಶನ್ ಅವರ ಹಲವು ಸಿನಿಮಾಗಳಲ್ಲಿ ಸಾಧುಕೋಕಿಲ ಅವರು ಕಾಮಿಡಿ ನಟನಾಗಿ ಕಾಣಿಸಿಕೊಂಡಿದ್ದಾರೆ.
ಈಗ ಕ್ರಾಂತಿ ಸಿನಿಮಾದಲ್ಲೂ ಸಹ ಪಾತ್ರ ಮಾಡಿರುವ ಕಾರಣ ಪ್ರಚಾರದ ಸಂದರ್ಶನ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ಬಂದಿದ್ದ ಸಾಧುಕೋಕಿಲ ಅವರನ್ನು ಖಾಸಗಿ ಯೌಟ್ಯೂಬ್ ಚಾನೆಲ್ ನ ಆಂಕರ್ ತೆರೆ ಮೇಲೆ ನಿಮ್ಮನ್ನು ಹಾಗೂ ದರ್ಶನ್ ಅವರನ್ನು ಕಾಣುತ್ತಿದ್ದೇವೆ ಆದರೆ ನೀವು ಅವರಿಗೆ ಆಕ್ಷನ್ ಕಟ್ ಹೇಳಿ ಬಹಳ ಸಮಯ ಆಯಿತು, ಮತ್ತೆ ನಿಮ್ಮ ನಿರ್ದೇಶನದ ದರ್ಶನ್ ಅವರ ನಟನೆಯ ಸಿನಿಮಾ ಯಾವಾಗ ಬರುತ್ತದೆ ಎಂದು ಪ್ರಶ್ನೆ ಕೇಳಿದ್ದಾರೆ.
ಈ ಮಾತಿಗೆ ಸಾಧು ಕೋಕಿಲ ಅವರು ಕೊಟ್ಟ ಉತ್ತರ ಈ ರೀತಿ ಇತ್ತು ನನಗೂ ಸಹ ಸಿನಿಮಾ ಮಾಡಬೇಕು ಎಂದು ಇದೆ. ನಾನು ಈಗ ಸಿನಿಮಾ ಮಾಡಬೇಕು ಎಂದರೆ ಅದಕ್ಕೆ ಒಂದು ವರ್ಷ ಆದರೂ ಸಮಯ ಮೀಸಲು ಇಡಬೇಕು. ಈಗ ನಮ್ಮ ಲೂ ಪ್ರಕಡಕ್ಷನ್ಸ್ ಇಂದ ಶಿವಣ್ಣ ಅವರಿಗೆ ಒಂದು ಸಿನಿಮಾ ಮಾಡುವ ಪ್ರಯತ್ನದಲ್ಲಿ ಇದ್ದೇವೆ. ದರ್ಶನ್ ಅವರ ಬಳಿ ನಾನು ಡೇಟ್ಸ್ ಕೇಳಿದರೆ ಅವರು ಕೊಟ್ಟೆ ಕೊಡುತ್ತಾರೆ ದರ್ಶನ್ ನನಗೆ ಎಂದು ಇಲ್ಲ ಎಂದು ಹೇಳುವುದಿಲ್ಲ.
ಅವರಿಗೆ ಸಿನಿಮಾ ಮಾಡಬೇಕು ಎನ್ನುವ ದೊಡ್ಡ ಆಸೆ ನನಗೂ ಇದೆ ಖಂಡಿತ ಮಾಡುತ್ತೇನೆ ಆದರೆ ಈಗ ಸಿನಿಮಾದ ಟ್ರೆಂಡ್ ಚೇಂಜ್ ಆಗಿದೆ ಒಂದು ಕಥೆಯನ್ನು ಇಟ್ಟುಕೊಂಡು ಒಬ್ಬ ಸ್ಟಾರ್ ನಟನಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅಥವಾ ಯಾವ ರೀತಿ ಮಾಡಬೇಕು ಎನ್ನುವುದನ್ನು ಎಲ್ಲ ಕೂಲಂಕುಶವಾಗಿ ಯೋಚಿಸಿ ಸರಿಯಾಗಿ ನಿರ್ಧಾರ ತೆಗೆದುಕೊಂಡು ಆ ಬಳಿಕ ಅದರ ಪ್ರಯತ್ನದಲ್ಲಿ ಸಾಗಬೇಕು.
ನಾನು ಈಗಾಗಲೇ ಹಲವಾರು ಕಮಿಟ್ಮೆಂಟ್ಗಳಲ್ಲಿ ಇದ್ದೇನೆ ನಾನು ಡೈರೆಕ್ಷನ್ ಹೇಳಲು ಹೋದರೆ ತೆರೆ ಹಿಂದಿನ ನನ್ನ ಕುಸುರಿ ಕೆಲಸಗಳು ಕಷ್ಟ ಆಗಬಹುದು ಹಾಗಾಗಿ ಇದಕ್ಕೆಲ್ಲ ಸರಿಯಾದ ವ್ಯವಸ್ಥೆ ಮಾಡಿ ನಂತರ ಆ ಕಡೆ ಹೋಗುತ್ತೇನೆ. ಖಂಡಿತ ಮತ್ತೊಮ್ಮೆ ನನ್ನ ಡೈರೆಕ್ಷನ್ ನಲ್ಲಿ ದರ್ಶನ್ ಸಿನಿಮಾವನ್ನು ನೀವೆಲ್ಲ ನೋಡುತ್ತೀರಾ ಸ್ವಲ್ಪ ಕಾಯಬೇಕು ಎಂದು ಹೇಳಿದ್ದಾರೆ ಮತ್ತು ಈಗಿನ ಟ್ರೆಂಡ್ ಬದಲಾಗಿದೆ ಮೊದಲೆಲ್ಲಾ ಇದೇ ರೀತಿ ಇತ್ತು ಕಂಟೆಂಟ್ ಜೊತೆ ಒಬ್ಬ ನಟ ಇರುತ್ತಿದ್ದರು.
ಆ ಸಿನಿಮಾ ಓಡುತ್ತಿತ್ತು ಮಧ್ಯ ಕೆಲವು ದಿನಗಳಲ್ಲಿ ಏನೇನೋ ಆಯಿತು ಈಗ ಮತ್ತೆ ಎಲ್ಲರೂ ಬೆಲ್ ಬಾಟಮ್ ಇಂದ ನ್ಯಾರೋ ಪ್ಯಾಂಟ್ ಕಡೆ ಹೋದ ಹಾಗೆ ಅದೇ ಟ್ರೆಂಡ್ ಶುರು ಆಗಿದೆ. ಈಗ ಎಲ್ಲರೂ ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳನ್ನು ಕೇಳುತ್ತಿದ್ದಾರೆ ಆ ರೀತಿ ಎಲ್ಲರಿಗೂ ಇಷ್ಟ ಆಗುವ ಕಂಟೆಂಟ್ ರೆಡಿ ಮಾಡಿಕೊಂಡು ಮಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶನ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆಗೆ ನನ್ನ ಮಗ ಸುರಾಗ್ ಮಾಡುತ್ತಾರೆ, ನಾನು ಸಹ ಜೊತೆಗಿರುತ್ತಾನೆ ನನ್ನ ಜೊತೆ ಚಿತ್ರರಂಗದ ಇತರರು ಇರುತ್ತಾರೆ ಎಂದಿದ್ದಾರೆ.