ಜನವರಿ 26ರಂದು ರಿಲೀಸ್ ಗೆ ರೆಡಿಯಾಗಿರುವ ಈ ವರ್ಷದ ಮೊದಲ ಸೂಪರ್ ಸ್ಟಾರ್ ಸಿನಿಮಾ ದರ್ಶನ್ ಅವರ ಕ್ರಾಂತಿ ಸಿನಿಮಾದ ಕ್ರೇಜಿ ಈಗಾಗಲೇ ಕರ್ನಾಟಕದಾದ್ಯಂತ ಬಾರಿ ಜೋರಾಗಿದ್ದು ಹಾಡುಗಳಂತೂ ಬಹಳ ಟ್ರೆಂಡಿಂಗ್ ಆಗಿದೆ. ಬೊಂಬೆ ಬೊಂಬೆ ಹಾಡು ಹಾಗೂ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಚ್ಚು ಜನ ರೀಲ್ಸ್ ಮಾಡುತ್ತಿದ್ದಾರೆ ಅದರಲ್ಲೂ ಪುಷ್ಪವತಿ ಹಾಡಿಗೆ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಈ ಸಾಲಿನಲ್ಲಿ ಸೆಲೆಬ್ರಿಗಳು ಕೂಡ ಸೇರಿದ್ದಾರೆ.
ಈಗಾಗಲೇ ಪ್ರೇಮ್ ಪುತ್ರಿ ಅಮೃತಾ ಅವರು ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ, ರಚಿತಾ ರಾಮ್ ಅವರು ಈ ಸಿನಿಮಾದ ನಾಯಕಿ ಆಗಿದ್ದರು ಈ ಹಾಡಿನಲ್ಲಿ ಇರಲಿಲ್ಲ ಆದರೂ ಕೂಡ ರಚಿತಾ ರಾಮ್ ಅವರು ಪುಷ್ಪವತಿ ಹಾಡಿಗೆ ರೀಲ್ಸ್ ಗಾಗಿ ಹೆಜ್ಜೆ ಹಾಕಿದ್ದಾರೆ. ಇದೀಗ ಸಂಜನಾ ಗರ್ಲಾನಿ ಅವರು ಕೂಡ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.
ಸಂಜನ ಗರ್ಲಾನಿ ಅವರು ಗಂಡ ಹೆಂಡತಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟು ಹಲವು ವರ್ಷಗಳವರೆಗೆ ನಾಯಕಿಯಾಗಿ, ಸಹಕಲಾವಿದೆಯಾಗಿ, ಅತಿಥಿ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚಂದನವನದಲ್ಲಿ ಬಿಝಿ ಆಗಿದ್ದರು. ಯಾವಾಗ ಅವಕಾಶಗಳ ಕೊರತೆ ಕಂಡುಬಂತು ಬೇರೆ ಭಾಷೆಗಳನ್ನು ಕಡೆ ಮುಖ ಮಾಡಿದರು. ಇದಾದ ಬಳಿಕ ಅವರ ಮೇಲೆ ಡ್ರ-ಗ್ಸ್ ಆರೋಪ ಬಂದು ಜೈ-ಲು ಸೇರಿದ್ದ ಘಟನೆಯು ನಡೆಯಿತು.
ಇದೆಲ್ಲದರಿಂದ ಸಂಜನಾ ಗಿರ್ಲಾನಿ ಸುಧಾರಿಸಿಕೊಂಡು ಉದ್ಯಮಿ ಒಬ್ಬರ ಕೈ ಹಿಡಿದು ಇತ್ತೀಚೆಗಷ್ಟೇ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ . ಸೋಶಿಯಲ್ ಮೀಡಿಯಾಲಿ ಬಹಳ ಆಕ್ಟಿವ್ ಆಗಿರುವ ಸಂಜನ ಅವರು ತಮ್ಮ ಹೊಸ ಹೊಸ ಫೋಟೋ ಶೂಟ್ ಮತ್ತು ವಿಶೇಷ ಕ್ಷಣಗಳ ಹಾಗೂ ಮಗುವಿನ ಜೊತೆಗಿನ ವಿಡಿಯೋಗಳು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಈಗ ರೀಲ್ಸ್ ಮಾಡುವ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಸಂಜನ ರೀಲ್ಸ್ ಮಾಡಿದ್ದಾರೆ. ಆದರೆ ರೀಲ್ಸ್ ಮಾಡುವ ಮುನ್ನ ಅವರು ಜಂಪ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದಾರೆ ಆದರೆ ಅದನ್ನು ಎಡಿಟ್ ಮಾಡದೆ ಹಾಗೆಯೇ ಶೇರ್ ಮಾಡಿರುವ ಕಾರಣ ಈಗ ಆ ವಿಡಿಯೋ ಬಹಳ ವೈರಲ್ ಆಗುತ್ತಿದೆ.
ಮೊದಲಿಗೆ ಬಿದ್ದ ಸಂಜನಾ ಅವರು ನಂತರ ಅವರೇ ಎದ್ದು ಈ ಹಾಡಿಗೆ ಹೆಜ್ಜೆ ಹಾಕಿ ಸಿನಿಮಾದಲ್ಲಿರುವ ಸಿಗ್ನೇಚರ್ ಸ್ಟೆಪ್ ಕೂಡ ಕಾಪಿ ಮಾಡಿದ್ದಾರೆ. ಈ ರೀತಿ ರಿಲೀಸ್ ಆಗುವ ಚಿತ್ರಕ್ಕೆ ರೀಲ್ಸ್ ಮಾಡುವ ಟ್ರೆಂಡ್ ಶುರುವಾಗಿದ್ದು ರಕ್ಷಿತ್ ಶೆಟ್ಟಿ ಇಂದ ಹೇಳಬಹುದು. ಯಾಕೆಂದರೆ ಅವರು ಮೊದಲ ಬಾರಿಗೆ ಅವರ ಪಾನ್ ಇಂಡಿಯಾ ಸಿನಿಮಾ ಆಗಿದ್ದ ಶ್ರೀಮನ್ನಾರಾಯಣ ಸಿನಿಮಾದ ಇದು ಚರಿತ್ರೆ ಸೃಷ್ಟಿ ಅವತಾರ ಹಾಡಿಗೆ ಟಿಕ್ಟಾಕ್ ಮಾಡಿ ಹರಿ ಬಿಟ್ಟಿದ್ದರು.
ನಂತರ ಸಿನಿಮಾದ ಕಲಾವಿದರುಗಳೆಲ್ಲಾ ಹಾಗೇ ಮಾಡಿದರು, ಅದು ಟ್ರೆಂಡ್ ಆಗಿ ಟಿಕ್ ಟಾಕ್ ಮಾಡುವವರೆಲ್ಲ ಅದೇ ಸ್ಟೆಪ್ಗಳನ್ನು ಫಾಲೋ ಮಾಡಿದರು. ನಂತರ ಕಳೆದ ವರ್ಷ ಸುದೀಪ್ ಅವರು ಸಹ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳಿಗೂ ಅವರವರ ಸ್ಟೈಲ್ ನಲ್ಲಿ ಮಾಡುವಂತೆ ಹೇಳಿದ್ದರು. ಆದರೆ ಎಲ್ಲರೂ ಅವರ ಸಿಗ್ನೇಚರ್ ಸ್ಟೆಪ್ಗಳನ್ನು ಫಾಲೋ ಮಾಡಿ ಅದನ್ನು ಟ್ರೈ ಮಾಡಿದ್ದರು. ಇದೀಗ ದರ್ಶನ್ ಅವರ ಪುಷ್ಪವತಿ ಹಾಡಿಗೂ ಕೂಡ ಅದೇ ಸಂಪ್ರದಾಯ ಮುಂದುವರಿದಿದ್ದು ಕಾಮನ್ ಮ್ಯಾನ್ ಹಾಗೂ ಸೆಲೆಬ್ರಿಟಿಗಳು ಕೂಡ ಪುಷ್ಪವತಿ ಹಾಡಿಗೆ ರೀಲ್ಸ್ ಮಾಡಲು ಖುಷಿ ಪಡುತ್ತಿದ್ದಾರೆ.