ನಮ್ಮ ಬಟ್ಟೆಗಳು ನಾವು ಇರುವಷ್ಟು ದಿನ ಬಾಳಿಕೆ ಬರುವುದಿಲ್ಲ ನಿಜ. ಒಂದಷ್ಟು ವರ್ಷಗಳಾದ ಮೇಲೆ ಫ್ರೆಂಡ್ ಬದಲಾಗಿದೆ ಎಂದು ಅಥವಾ ಬಳಸಿ ಹಾಳಾಗಿದೆ ಎಂದು ಬದಲಾಯಿಸಲೇಬೇಕು. ಆದರೆ ದುಬಾರಿ ಬೆಲೆ ಕೊಟ್ಟು ತಂದ ಬಟ್ಟೆಗಳು ಅಥವಾ ಬಹಳ ಇಷ್ಟಪಟ್ಟು ತೆಗೆದುಕೊಂಡ ಸೀರೆಗಳು ಈ ಮೇಲೆ ತಿಳಿಸಿದ ಎರಡು ಕಾರಣಗಳಿಂದ ಅಲ್ಲದೆ ಬೇರೆ ಯಾವುದೋ ಕಾರಣದಿಂದ ಬಿಸಾಕುವ ರೀತಿ ಆದರೆ ಅದರ ನೋವು ಅಷ್ಟಿಷ್ಟಲ್ಲ.
ಸಾಮಾನ್ಯವಾಗಿ ಬಟ್ಟೆಗಳಲ್ಲಿ ಈ ರೀತಿ ಸಮಸ್ಯೆ ಆಗುವುದು ಅದು ತೂತು ಬೀಳುವುದರಿಂದ ನಮ್ಮ ಸೀರೆಗಳು ಅಥವಾ ಡ್ರೆಸ್ ಗಳು ದುಪಟ್ಟಗಳು ಈ ರೀತಿಯಾಗಿ ತೂತಾಗಿ ವೇಸ್ಟ್ ಮಾಡಿದ್ದೇ ಹೆಚ್ಚು ಇದು ಎಲ್ಲರಿಗೂ ಅನುಭವ ಆಗಿರುತ್ತದೆ. ಹೀಗೆ ತೂತಾಗಲು ಸಾಕಷ್ಟು ಕಾರಣಗಳಿವೆ ಸಾಮಾನ್ಯವಾಗಿ ಒವೆನ್ ಬಟ್ಟೆಗಳು ಹೆಚ್ಚು ತೂತಾಗುತ್ತವೆ ಅಲ್ಲದೆ ಊದಿನ ಕಡ್ಡಿಯಿಂದ ಅಥವಾ ಮೊಳೆ ಅಥವಾ ಇನ್ನಿತರ ಶಾರ್ಪ್ ಆಬ್ಜೆಕ್ಟ್ ಗಳು ಚುಚ್ಚಿ ಒಂದು ಚಿಕ್ಕ ಹೋಲ್ ಆಗಿರುತ್ತದೆ.
ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!
ಇದು ಹಾಕಿಕೊಂಡಾಗ ಮೇಲೆ ಬಂದು ನೋಡಿದವರು ಗುರುತಿಸುವ ರೀತಿ ಕಂಡರೆ ಬಹಳ ಮುಜುಗರ ಆಗುತ್ತದೆ. ಅದೆಷ್ಟು ದುಬಾರಿ ಬಟ್ಟೆ ಆಗಿದ್ದರೂ ಒಂದು ಚಿಕ್ಕ ತೂತು ಅದರ ಮೌಲ್ಯವನ್ನು ಕಳೆದು ಬಿಟ್ಟಿರುತ್ತದೆ. ಈಗ ಅವುಗಳನ್ನು ಬಿಸಾಕಲು ಮನಸಿರುವುದಿಲ್ಲ ಹಾಗೆ ಹಾಕಿಕೊಳ್ಳಲು ಕೂಡ ಕಷ್ಟವಾಗಿರುತ್ತದೆ.
ನೀವು ಈ ರೀತಿ ಸಮಸ್ಯೆಗಳಲ್ಲಿ ಇರಬಹುದು ಇದಕ್ಕಾಗಿ ನೀವು ಕವರ್ ಮಾಡಲು ಏನೇನೋ ಬಳಸಿ ಇದ್ದಿದ್ದು ಹಾಳಾಯಿತು ಎಂದುಕೊಂಡಿರಬಹುದು ಈ ಬೇಸರವೆಲ್ಲ ಬಿಡಿ ಎಲ್ಲ ಮಹಿಳೆಯರಿಗೂ ಅನುಕೂಲವಾಗುವ ಒಂದು ಬಹಳ ಸರಳವಾದ ಸುಲಭವಾದ ಟ್ರಿಕ್ಸ್ ಹೇಳಿಕೊಡುತ್ತಿದ್ದೇನೆ ಈ ಐಡಿಯಾ ಮಾಡಿದರೆ ನಿಮ್ಮ ಬಟ್ಟೆ ತೂತಿದ್ದರು ಅದು ಗೊತ್ತೇ ಆಗುವುದಿಲ್ಲ.
ಈ ಸುದ್ದಿ ಓದಿ:- ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!
ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಖರ್ಚು ಇಲ್ಲದೆ ನಿಮ್ಮ ಡ್ಯಾಮೇಜ್ ಸರಿ ಪಡಿಸಿಕೊಳ್ಳಬಹುದು. ಇದಕ್ಕಾಗಿ ಬೇಕಾಗಿರೋದು ಒಂದೇ ವಸ್ತು ಕಾನ್ವಸ್. ಈ ಕ್ಯಾನ್ವಾಸ್ ನ್ನು ಬ್ಲೌಸ್ ಗಳನ್ನು ಸ್ಟಿಚ್ ಮಾಡಲು ನೆಕ್ ಡಿಸೈನ್ ಕೊಡುವುದಕ್ಕೆ ಬಳಸುತ್ತಾರೆ ಟೈಲರಿಂಗ್ ಮೆಟೀರಿಯಲ್ ಗಳನ್ನು ಸೇಲ್ ಮಾಡುವ ಶಾಪ್ ಗಳಲ್ಲಿ ಇದು ಸಿಕ್ಕೇ ಸಿಗುತ್ತದೆ ಮತ್ತು ಒಂದು ಮೀಟರ್ ಗೆ ಬಹಳ ಕಡಿಮೆ ಬೆಲೆ ಇರುತ್ತದೆ ಇದನ್ನು ತೆಗೆದುಕೊಳ್ಳಿ.
ಹೋಲ್ ಚಿಕ್ಕದಾಗಿರುವುದರಿಂದ ಒಂದು ರೂಪಾಯಿ ನಾಣ್ಯದ ಆಗಲದಲ್ಲಿ ಇದನ್ನು ಕತ್ತರಿಸಿಕೊಳ್ಳಿ ಈ ಕ್ಯಾನ್ವಾಸ್ ಗಳು ಒಂದು ಕಡೆ ಅಂಟು ಅಂಟು ಆಗಿರುತ್ತದೆ ಮತ್ತೊಂದು ಕಡೆ ಡ್ರೈ ಇರುತ್ತವೆ ಈಗ ಕಡೆಯನ್ನು ಸೀರೆಯ ತೂತಾಗಿರುವ ಲೇಯರ್ ಕೆಳಗೆ ಇಡಿ ಮತ್ತು ಮೇಲೆ ತೆಗೆದುಕೊಂಡು ನೀವು ಕ್ಯಾನ್ವಾಸ್ ಇಟ್ಟಿರುವ ಅಷ್ಟು ಜಾಗವನ್ನು 30 ಸೆಕೆಂಡ್ ವರೆಗೆ ಐರನ್ ಮಾಡಿ ಸೆಟ್ ಆಗುತ್ತದೆ.
ಈ ಸುದ್ದಿ ಓದಿ:- ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!
ಮೇಲಿನಿಂದ ತೂತು ಕೂಡ ಕವರ್ ಆಗಿರುತ್ತದೆ ಕೆಳಗೆ ಅದು ಅಂಟಿಕೊಂಡಿರುವುದರಿಂದ ಬಿದ್ದು ಹೋಗುವುದು ಕೂಡ ಇಲ್ಲ ಯಾರಿಗೂ ಸುಲಭಕ್ಕೆ ಗುರುತಿಸಲು ಕೂಡ ಆಗುವುದಿಲ್ಲ, ಅಷ್ಟು ನೀಟಾಗಿ ಇದು ಕವರ್ ಆಗಿರುತ್ತದೆ. ಈ ಟ್ರಿಕ್ ಇಂದೇ ಟ್ರೈ ಮಾಡಿ ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರ ಜೊತೆಗೂ ಹಂಚಿಕೊಳ್ಳಿ.