ಹಿರಿಯ ನಾಗರಿಕರಿಗೆ ಸ್ವಾಭಾವಿಕವಾಗಿಯೇ ಸಾಕಷ್ಟು ಗೌರವ ಸಿಗುತ್ತದೆ. ಇದರ ಜೊತೆಗೆ ಸೌಲಭ್ಯಗಳು ಕೂಡ ಸಿಗಬೇಕು. ವಯಸ್ಸಾಗುತ್ತಿದ್ದಂತೆ ಮನುಷ್ಯ ದುಡಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಾಗಾಗಿ ಸರ್ಕಾರ ಅವರಿಗೆ ನೆರವಾದರು ವಿಶೇಷ ಯೋಜನೆಗಳನ್ನು ಮತ್ತು ಕೆಲ ರಿಯಾಯಿತಿಗಳನ್ನು ನೀಡುತ್ತದೆ.
ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗಾಗಿ ಅನೇಕ ವಿಶೇಷ ಯೋಜನೆಗಳು ಇವೆ ಇವುಗಳಲ್ಲಿ ಸೀನಿಯರ್ ಸಿಟಿಜನ್ ಕಾರ್ಡ್ (Senior Citizen card) ಪಡೆಯುವುದರಿಂದ ಕೆಲ ಅನುಕೂಲತೆಗಳು ಸಿಗುತ್ತದೆ ಅದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹೆಸರು:- ಸೀನಿಯರ್ ಸಿಟಿಜನ್ ಕಾರ್ಡ್
ಯಾರು ಅರ್ಹರು:-
ಭಾರತೀಯ ನಾಗರಿಕರಾಗಿದ್ದು 60 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಲು ಅರ್ಹರು.
ಮನೆ ಅಭಿವೃದ್ಧಿ ಆಗದೆ ಇರಲು, ಸಾಲ ದಿನದಿಂದ ದಿನಕ್ಕೆ ಹೆಚ್ಚಾಗಲು, ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣ.!
ಪ್ರಯೋಜನ:-
● ಸೀನಿಯರ್ ಸಿಟಿಜನ್ ಕಾರ್ಡ್ ಪಡೆಯುವುದರಿಂದ ಸರ್ಕಾರಿ ಬಸ್ ಗಳು ಮತ್ತು ರೈಲು ಹಾಗೂ ವಿಮಾನ ಪ್ರಯಾಣಗಳಲ್ಲಿ 25%
ರಿಯಾಯಿತಿ ಪಡೆಯಬಹುದು.
● ವಿದ್ಯಾಪ್ಯ ವೇತನ ಪಡೆಯಲು ಅರ್ಜಿ ಸಲ್ಲಿಸುವಾಗ ಸೀನಿಯರ್ ಸಿಟಿಜನ್ ಕಾರ್ಡ್ ಇದ್ದವರಿಗೆ ಶೀಘ್ರವಾಗಿ ಮಂಜೂರಾಗುತ್ತದೆ ಮತ್ತು ಪ್ರತಿ ತಿಂಗಳಿಗೆ ಸರ್ಕಾರದ ವತಿಯಿಂದ 1200 ವಿದ್ಯಾಪ್ಯ ವೇತನ ಬರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ನೀವು Sevasindhu poratal ನಲ್ಲಿ register ಆಗಿ login ಆಗಬೇಕು.
● ಮುಖಪುಟದ ಎಡಭಾಗದ ಮೆನುವಿನಲ್ಲಿ Apply for services ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ view all services ಎನ್ನುವ ಆಪ್ಷನ್ ಆಯ್ಕೆ ಮಾಡಬೇಕು.
● ಸ್ಕ್ರೀನ್ ಮೇಲೆ ಎಲ್ಲಾ ಸೇವೆಗಳ ವಿವರ ಬರುತ್ತದೆ, ಸುಲಭವಾಗಿ ಹುಡುಕಬೇಕು ಎಂದರೆ search ಬಾರ್ ಮೇಲೆ ಕ್ಲಿಕ್ ಮಾಡಿ ಸೀನಿಯರ್ ಸಿಟಿಜನ್ ಕಾರ್ಡ್ ಎಂದು ಸೆಲೆಕ್ಟ್ ಮಾಡಿ ಆಗ ನಿಮ್ಮ ಮುಂದೆ ಹಿರಿಯ ನಾಗರಿಕರ ಗುರುತಿನ ಚೀಟಿಗೆ ಅರ್ಜಿ ಎನ್ನುವ ಆಪ್ಷನ್ ಆಗುತ್ತದೆ.
● ಆಧಾರ್ ಕಾರ್ಡ್ (aadhar card) ಮೂಲಕ ಸೇವಾ ಸಿಂಧು ಪೋರ್ಟಲ್ ಲಾಗಿನ್ ಆಗಿರುವುದರಿಂದ ಕೆಲವು ಮಾಹಿತಿಗಳು ಆಟೋಮೆಟಿಕ್ ಆಗಿ ಫಿಲ್ ಆಗಿರುತ್ತವೆ. ನಿಮ್ಮ ಹೆಸರು, ವಯಸ್ಸು, ಭಾವಚಿತ್ರ, ವಿಳಾಸ ಇತ್ಯಾದಿಗಳು ಇರುತ್ತವೆ. ಇವುಗಳನ್ನು ಹೊರತುಪಡಿಸಿ ಕೇಳಲಾಗಿರುವ ಇತರೆ ಮಾಹಿತಿಗಳಲ್ಲಿ ಸರಿಯಾದ ವಿವರಗಳನ್ನು ತುಂಬಿಸಬೇಕು.
● ನಿಮ್ಮ ಬ್ಲಡ್ ಗ್ರೂಪ್, ಕಾಂಟಾಕ್ಟ್ ನಂಬರ್, ಇಮೇಲ್ ಐಡಿ, ವಿಳಾಸ ಇತ್ಯಾದಿ ವಿವರಗಳನ್ನು ಭರ್ತಿ ಮಾಡಬಹುದು. ಇದರಲ್ಲಿ ಕೆಲವು ಆಪ್ಷನಲ್ ಆಗಿರುತ್ತವೆ ಜೊತೆಗೆ ನೀವು ನಿಮ್ಮ ವಯಸ್ಸನ್ನು ಎಡಿಟ್ ಮಾಡಿ ಫಿಲ್ ಮಾಡುವುದಾದರೆ ಆಪ್ಶನ್ ಇದೆ ಆದರೆ ಮುಂದಿನ ಪುಟದಲ್ಲಿ ನೀವು ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
● ವಿವರಗಳು ಬರ್ತಿ ಆದ ಮೇಲೆ ಸಂಬಂಧಿಸಿದದಾಖಲೆಗಳನ್ನು ಕೇಳಲಾಗುತ್ತದೆ ಅದನ್ನು ನೀವು jpj ಅಥವಾ PNG ಫಾರ್ಮ್ ನಲ್ಲಿ ಅಪ್ಲೋಡ್ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ಹಾಗೂ ರಕ್ತ ಗುಂಪಿಗೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸಬೇಕು.
● ಎಲ್ಲಾ ವಿವರಗಳು ಸರಿ ಇದೆ ಎನ್ನುವುದನ್ನು ಚೆಕ್ ಮಾಡಿ, ಡೆಕ್ಲರೇಷನ್ ಬರುತ್ತದೆ. ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ. ವರ್ಡ್ ವೆರಿಫಿಕೇಶನ್ ಇರುತ್ತದೆ ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಕೊಡಿ.
● ಕೊನೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ಹಾಕಿ ಸಬ್ಮಿಟ್ ಕೊಟ್ಟರೆ ನಿಮ್ಮ ಅರ್ಜಿ ಸಲ್ಲಿಕೆ ಕಂಪ್ಲೀಟ್ ಆಗುತ್ತದೆ, ಅದರ ಅಕ್ನಾಲೆಜ್ಮೆಂಟ್ ಕೂಡ ನೀವು ಪಡೆದುಕೊಳ್ಳಬೇಕು. ಈ ರೀತಿ ಅರ್ಜಿ ಸಲ್ಲಿಸಿದ 10 ರಿಂದ 15 ದಿನದ ಒಳಗಡೆ ನಿಮಗೆ ಸೀನಿಯರ್ ಸಿಟಿಜನ್ ಕಾರ್ಡ್ ಸಿಗುತ್ತದೆ.