ಮನುಷ್ಯನಿಗೆ ಹಣಬಲ ಹಾಗೂ ಜನಬಲಕ್ಕಿಂತ ದೈವಬಲ ಬಹಳ ದೊಡ್ಡದು. ಆ ದೇವರ ಸಹಕಾರ ಒಂದಿದ್ದರೆ, ಆಶೀರ್ವಾದ ಇದ್ದರೆ ಎಂತಹ ಕಷ್ಟಗಳನ್ನು ಬೇಕಾದರೂ ಮೆಟ್ಟಿನಿಂತು ಜಯಿಸಬಹುದು. ಮನುಷ್ಯನಿಗೆ ಹಣ ಶಾಶ್ವತವಲ್ಲ ಜನಬೆಂಬಲವೂ ಕೂಡ ಹಣದ ಮೇಲೆ ನಿರ್ಧಾರವಾಗಿರುತ್ತದೆ ಹಾಗಾಗಿ ಇದು ಕೆಲವು ಸಮಯ ಮಾತ್ರ ಆದರೆ ದೈವ ಬಲ ಎನ್ನುವುದು ಸತ್ಯ ಹಾಗೂ ಶಾಶ್ವತ.
ಹಾಗೆ ಇದು ಒಲಿಯುವುದು ಕೂಡ ಸುಲಭವಲ್ಲ, ಒಂದು ಕಠಿಣ ತಪಸ್ಸು. ನಿಮಗೂ ಕೂಡ ದೇವರು ಕೃಪೆ ತೋರಿರಬಹುದು, ನಿಮ್ಮ ಪಾಲಿಗೂ ಭಗವಂತನ ಅನುಗ್ರಹ ಆಗಿರಬಹುದು ಆದರೆ ಬಹುತೇಕರಿಗೆ ಇದು ಅರ್ಥವಾಗುವುದಿಲ್ಲ. ನಿಮ್ಮ ಮನೆ ಮೇಲೆ ದೇವರ ಆಶೀರ್ವಾದ ಇದೆ ಆತ ನಿಮ್ಮ ಕಷ್ಟ-ಸುಖ ನೋಡುತ್ತಿದ್ದಾನೆ ಎನ್ನುವ ವಿಚಾರವನ್ನು ಈಗ ನಾವು ಹೇಳುವ ವಿಧಾನದ ಮೂಲಕ ನೀವು ಪರೀಕ್ಷಿಸಿ ತಿಳಿದುಕೊಳ್ಳಬಹುದು.
ನಿಮ್ಮ ಮನೆಯಲ್ಲಿ ಪ್ರತಿನಿತ್ಯವೂ ಕೂಡ ದೇವರಿಗೆ ದೀಪ ಹಚ್ಚಿ ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ದೇವರ ಕೋಣೆಯಲ್ಲಿ ತಪ್ಪದೆ ಭಗವಂತನ ಹೆಸರು ಹೇಳಿ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಾ ಇದ್ದರೆ ಆ ಮೂಲಕ ಭಗವಂತನ ಸ್ಮರಣೆ ಮಾಡುತ್ತಾ ಇದ್ದರೆ ಖಂಡಿತವಾಗಿಯೂ ಆತ ನಿಮ್ಮನ್ನು ಅನುಗ್ರಹಿಸಿರುತ್ತಾನೆ.
ನೀವು ದೀಪದ ಎಣ್ಣೆ ಜೊತೆ ಎರಡು ಲವಂಗ ಹಾಕಿ ದೀಪ ಹಚ್ಚಿದರೆ ಅದು ಲವಂಗದ ದೀಪ ಆಗುತ್ತದೆ ಈ ದೀಪ 21 ದಿನಗಳವರೆಗೆ ಅಥವಾ 48 ದಿನಗಳವರೆಗೆ ಪ್ರತಿ ಬೆಳಿಗ್ಗೆ ಹಾಗೂ ಸಂಜೆ ಹಚ್ಚಿ ನಿಮಗೆ ಈ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ಭಗವಂತನ ಬಳಿ ಹೇಳಿಕೊಂಡು ಪರಿಹರಿಸುವಂತೆ ಕೇಳಿಕೊಳ್ಳಿ ಅಥವಾ ಇಷ್ಟಾರ್ಥಗಳಿದ್ದರೆ ಅದಕ್ಕಾಗಿ ಕೋರಿಕೆ ಸಲ್ಲಿಸಿ.
ಈ ಸಮಯ ಮುಗಿಯುವುದರ ಒಳಗೆ ನಿಮಗೆ ಸಮಸ್ಯೆಯಿಂದ ಮುಕ್ತಿ ಸಿಕ್ಕರೆ ಅಥವಾ ನಿಮ್ಮ ಇಷ್ಟಾರ್ಥ ಸಿದ್ದಿಯಾದರೆ ನಿಮ್ಮ ಜೊತೆ ದೇವರಿದ್ದಾರೆ ನೀವು ಸರಿಯಾದ ಮಾರ್ಗದಲ್ಲಿ ಇದ್ದೀರಿ ಹಾಗಾಗಿ ಅವರು ನಿಮ್ಮ ಪ್ರತಿ ಮಾತನ್ನು ಕೇಳುತ್ತಿದ್ದಾರೆ ಎಂದು ಅರ್ಥ.
ಹೀಗೆ ಇದೊಂದು ವಿಧಾನ ಮಾತ್ರ ಅಲ್ಲದೆ ಈ ರೀತಿಯಾದ ಸಣ್ಣಪುಟ್ಟ ಹಲವು ವಿಚಾರಗಳಿಂದ ಇದನ್ನು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಮನೆಯಲ್ಲಿ ಹಿರಿಯರು ಸಂತೋಷವಾಗಿದ್ದರೆ ಹಿರಿಯರನ್ನು ಪ್ರೀತಿಯಿಂದ ಜೋಪಾನ ಮಾಡಿ ನೋಡಿಕೊಳ್ಳುತ್ತಿದ್ದರೆ, ನಿಮ್ಮ ಮನೆ ಏಳಿಗೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಹೀಗೆ ಹಿರಿಯರ ಆಶೀರ್ವಾದ ಭಗವಂತನ ಆಶೀರ್ವಾದಕ್ಕೆ ಸಮ ನೀವು ಈ ರೀತಿ ಕುಟುಂಬದ ಹಿರಿಯರನ್ನು ಚೆನ್ನಾಗಿ ನೋಡಿಕೊಂಡರೆ ನಿಮ್ಮ ಕಲ್ಲಿನಂತ ಕಷ್ಟಗಳು ಮಂಜಿನಂತೆ ಕರಗುತ್ತವೆ ಮತ್ತು ನೀವು ಕೈ ಹಾಕಿದ ಎಲ್ಲಾ ಕೆಲಸಗಳನ್ನು ಕೂಡ ಜಯ ನಿಮ್ಮದಾಗುತ್ತದೆ. ಆಗ ಭಗವಂತನೇ ಆಶೀರ್ವಾದ ಮಾಡಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬಹುದು.
ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು ನೀವು ಕೂಡ ನಿಮ್ಮ ಮನೆಗೆ ಬರುವ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಅಷ್ಟೇ ಕಾಳಜಿಯಿಂದ ಅವರ ಸತ್ಕಾರ ಮಾಡಿದರೆ ಅವರು ಸಂತೋಷದಿಂದ ನಿಮ್ಮ ಮನೆಯಿಂದ ಹೊರಟರೆ ಹಾಗೂ ಪದೇಪದೇ ಅವರು ನಿಮ್ಮ ವಿಶ್ವಾಸಕ್ಕಾಗಿ ನಿಮ್ಮ ಬಳಿ ಬರುತ್ತಿದ್ದರೆ ಆ ರೂಪದಲ್ಲಿ ಭಗವಂತ ಬಂದಿದ್ದಾನೆ ಎಂದು ಅರ್ಥ.
ಯಾಕೆಂದರೆ ಯಾರು ಯಾರ ಮನೆಗೆ ಹೋದರೂ ಒಮ್ಮೆ ಅವಮಾನವಾದರೆ ಮತ್ತೆ ಬರುವುದಿಲ್ಲ. ಹೀಗೆ ಅತಿಥಿಗಳಿಗೆ ಗೌರವ ಇಲ್ಲದ ಮನೆಯಲ್ಲಿ ಭಗವಂತ ಹೋದರು ಕೂಡ ಹೀಗೆ ಆಗುತ್ತದೆ ಎಂದು ಭಗವಂತನು ಬರಲಾರ ಎಂದು ಈ ರೀತಿಯಾಗಿ ಅರ್ಥ ಮಾಡಿಕೊಳ್ಳಬಹುದು.