ದಾಸವಾಳದಲ್ಲಿ ಸುಮಾರು 600 ಹೆಚ್ಚು ವಿಧಗಳಿವೆ ಎನ್ನುವುದನ್ನು ವಿಜ್ಞಾನ ಹೇಳುತ್ತದೆ. ನಾವು ಕೂಡ ಇದುವರೆಗೆ ಹತ್ತಾರು ವಿಧದ ದಾಸವಾಳಗಳನ್ನು ನೋಡಿರುತ್ತೇವೆ. ಇದೆಲ್ಲದರಲ್ಲೂ ಕೂಡ ಬಿಳಿ ದಾಸವಾಳ ಬಹಳ ವಿಶೇಷ. ಐದು ದಳಗಳನ್ನು ಹೊಂದಿರುವ ಬಿಳಿ ದಾಸವಾಳದ ಹೂವು ನಮ್ಮ ಆರೋಗ್ಯಕ್ಕೆ ಬೇಕಾದ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ ಹಾಗೂ ಇದರಿಂದ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಕೂಡ ಮಾಡಬಹುದು.
ದಾಸವಾಳದ ಹೂವು ಮಾತ್ರವಲ್ಲದೆ ಈ ಬಿಳಿ ದಾಸವಾಳದ ಎಲೆಗಳು ಕೂಡ ಅಷ್ಟೇ ಪ್ರಮಾಣದ ಔಷಧಿಯ ಗುಣಗಳನ್ನು ಹೊಂದಿವೆ, ಹಾಗಾಗಿ ಈ ಅಂಕಣದಲ್ಲಿ ಯಾವೆಲ್ಲಿ ಆರೋಗ್ಯ ಸಮಸ್ಯೆಗಳಿಗೆ ಬಿಳಿ ದಾಸವಾಳವನ್ನು ಬಳಸಬಹುದು ಮತ್ತು ಅದನ್ನು ಹೇಗೆ ಬಳಸಬೇಕು ಎನ್ನುವುದರ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ನಾ ಲಕ್ಷಣಗಳು ಇವೇ ನೋಡಿ, ಎಲ್ಲಾ ಮಹಿಳೆಯರು ಇದನ್ನು ತಿಳಿದುಕೊಂಡಿರಲೇಬೇಕು.!
● ಈ ಬಿಳಿ ದಾಸವಾಳದಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ಸೇರಬೇಕು ಎಂದರೆ ಅದನ್ನು ಆಹಾರದ ರೂಪದಲ್ಲಿ ಸೇವಿಸಬಹುದು. ನಾವು ದೋಸೆ ಅಥವಾ ಇಡ್ಲಿ ಅಕ್ಕಿಯನ್ನು ರುಬ್ಬುವಾಗ ಈ ದಾಸವಾಳದ ಎಲೆಗಳು ಹಾಗೂ ಅವುಗಳನ್ನು ತೆಗೆದುಕೊಂಡು ಸ್ವಚ್ಛ ಮಾಡಿ ಅದನ್ನು ಸೇರಿಸಿ ರುಬ್ಬಿ ದೋಸೆ ಮತ್ತು ಇಡ್ಲಿ ಮಾಡಿ ತಿನ್ನುವುದರಿಂದ ನೇರವಾಗಿ ಈ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಪದೇ ಪದೇ ಕುರು ಆಗುವುದು ಮುಂತಾದ ಚರ್ಮ ಸಂಬಂಧಿತ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರಿಗೆ ಇದು ಒಳ್ಳೆಯ ಔಷಧವಾಗುತ್ತದೆ.
● ಇತ್ತೀಚಿಗಂತೂ ತಲೆ ಕೂದಲು ಉದುರುವ ಸಮಸ್ಯೆಯೂ ಸರ್ವೇ ಸಾಮಾನ್ಯ ಸಮಸ್ಯೆ ಆಗಿದೆ. ಪ್ರತಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಕೂಡ ಈ ಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ನಿಮ್ಮ ಕೂದಲಿನ ಸಮಸ್ಯೆಗಳು ಪರಿಹಾರವಾಗಿ ಕೂದಲು ಚೆನ್ನಾಗಿ ಬೆಳೆಯಬೇಕು ಎಂದರೆ ದಾಸವಾಳದ ಎಲೆ ಹಾಗೂ ಹೂವನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ ಅದನ್ನು ಕೂದಲುಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಇದರಿಂದ ಕೂದಲಿನ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳೆಲ್ಲ ಸಿಗುತ್ತದೆ. ಕೂದಲು ಸೋಂಪಾಗಿ ಬೆಳೆಯುವುದು ಮಾತ್ರವಲ್ಲದೆ ಕೂದಲು ಕವಲು ಒಡೆಯುವುದು, ಒರಟಾಗುವುದು, ಬಿಳಿಯಾಗುವುದು ಕೂದಲು ಹೊಟ್ಟಾಗುವುದು ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.
● ಕೊಬ್ಬರಿ ಎಣ್ಣೆಗೆ ಬಿಳಿ ದಾಸವಾಳದ ದಳಗಳು ಅಥವಾ ಎಲೆಗಳನ್ನು ಹಾಕಿ ಕುದಿಸಿ ತಲೆ ಕೂದಲಿಗೆ ಹಚ್ಚುವುದು ಕೂಡ ಒಳ್ಳೆಯದು.
● ಅಧಿಕ ರಕ್ತದ ಒತ್ತಡ ಇರುವವರು ಪ್ರತಿದಿನವೂ ಖಾಲಿ ಹೊಟ್ಟೆಗೆ ಬಿಳಿ ದಾಸವಾಳದ ಎದೆ ಅಥವಾ ಹೂವನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಇದು ಕಂಟ್ರೋಲಿಗೆ ಬರುತ್ತದೆ. ವಾರಕ್ಕೊಮ್ಮೆಯಾದರೂ ದಾಸವಾಳದ ಎಲೆಗಳನ್ನು ಈ ರೀತಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಕ್ಯಾನ್ಸರ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯು ದೇಹದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
● ಬಿಳಿ ದಾಸವಾಳದ ಎಲೆಗಳನ್ನು ಒಣಗಿಸಿ ಇಟ್ಟುಕೊಂಡು ಅದನ್ನು ಪುಡಿ ಮಾಡಿ ಪ್ರತಿದಿನ ಒಂದು ಚಮಚ ಸೇವಿಸುತ್ತಾ ಬರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಕಡಿಮೆ ಆಗುತ್ತದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಕಡಿಮೆಯಾಗುತ್ತದೆ.
SBI ಬ್ಯಾಂಕ್ ನಲ್ಲಿ ಒಂದು ಸಲ ಡೆಪಾಸಿಟ್ ಮಾಡಿದ್ರೆ ಸಾಕು 5 ವರ್ಷ ಪ್ರತಿ ತಿಂಗಳು 4950/- ಸಿಗುತ್ತೆ.!
● ದಾಸವಾಳದ ಎಲೆಗಳು ಅಥವಾ ಹೂವಿನ ದಳಗಳನ್ನು ನೀರಿನಲ್ಲಿ ಕುದಿಸಿ ಕೊಡುವುದರಿಂದ ರಕ್ತ ಶುದ್ಧಿಯಾಗುತ್ತದೆ, ಇದರಲ್ಲಿ ಸಾಕಷ್ಟು ನ್ಯೂಟ್ರಿಯೆಂಟ್ಸ್ ಹಾಗೂ ಮಿನರಲ್ಸ್ ಇರುತ್ತದೆ. ಇದು ದೇಹಕ್ಕೆ ಸೇರುವುದರಿಂದ ನೈಸರ್ಗಿಕವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ದೇಹ ಗಟ್ಟಿಮುಟ್ಟಾಗುತ್ತದೆ.
● ದಾಸವಾಳ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಶೀತ, ನೆಗಡಿ, ಕೆಮ್ಮು, ಅಲರ್ಜಿ ಮುಂತಾದ ಸಮಸ್ಯೆಗಳು ಕೂಡ ದೂರ ಆಗುತ್ತವೆ..