ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ, ಗಳಿಗೆ, ರಾಶಿ ನಕ್ಷತ್ರಗಳು ಮಾತ್ರ ಅಲ್ಲದೇ ಅವರ ಹುಟ್ಟಿದ ವಾರದ ಆಧಾರದ ಮೇಲೂ ಕೂಡ ಅವರ ಗುಣಲಕ್ಷಣಗಳನ್ನು ಅಳೆಯಬಹುದು. ಅಲ್ಲದೆ ಅವರ ಭವಿಷ್ಯವನ್ನು ಕೂಡ ನಿರ್ಧರಿಸಬಹುದು. ಹಾಗಾಗಿ ಹುಟ್ಟಿದ ವಾರವು ಕೂಡ ಒಬ್ಬ ವ್ಯಕ್ತಿಗೆ ಆತನ ಬದುಕು ಮತ್ತು ಭವಿಷ್ಯಕ್ಕೆ ಬಹಳ ಮುಖ್ಯವಾದ ವಿಷಯ ಆಗಿರುತ್ತದೆ. ಇಂದು ನಾವು ಸಹ ಈ ಅಂಕಣದಲ್ಲಿ ಯಾವ ವಾರ ಹುಟ್ಟಿದವರು ಯಾವ ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವುದರ ಬಗ್ಗೆ ಕೆಲ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
● ಸೋಮವಾರ ಹುಟ್ಟಿದವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಇವರ ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರ ಮೇಲೆಯೂ ಕೂಡ ತಾಯಿಯಂತೆ ಕಾಳಜಿ ಹೊಂದಿರುತ್ತಾರೆ. ಸದಾ ನಗುನಗುತ್ತ ಇರುವವರು ತಮ್ಮಂತೆ ಇತರರು ಚೆನ್ನಾಗಿರಬೇಕು ಎಂದು ಅಂದುಕೊಳ್ಳುತ್ತಾರೆ. ಇವರ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ, ಬಹಳ ಪ್ರಾಮಾಣಿಕವಾದ ಭಾವನೆಗಳನ್ನು ಹೊಂದಿದ್ದು ಮುಚ್ಚು ಮರೆ ಮಾಡದೆ ತಮ್ಮ ಕೋಪ ಅಸಹನೆ ಪ್ರೀತಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.
ಮನೆ ಸ್ವಚ್ಛಗೊಳಿಸುವ ಸುಲಭ ವಿಧಾನ.!
● ಮಂಗಳವಾರ ಹುಟ್ಟಿದವರು ಬಹಳ ಚುರುಕಾಗಿರುತ್ತಾರೆ. ಇವರು ಸ್ವಲ್ಪ ಕೋಪಿಷ್ಟರು, ಇವರು ಬಹಳ ನೀತಿ ನಿಯತ್ತಿನಿಂದ ಇರುವುದರಿಂದ ಬೇರೆಯವರು ಹಾಗೆ ಇರಬೇಕು ಎಂದು ಬಯಸುತ್ತಾರೆ. ಇವರ ಎದುರು ಸುಳ್ಳು ಹೇಳಿ ಸಿಕ್ಕಿಬಿದ್ದರೆ ಆವೇಶದಲ್ಲಿ ಏನನ್ನು ಬೇಕಾದರೂ ಮಾಡುತ್ತಾರೆ ಹಾಗಾಗಿ ಇವರಿಗೆ ಸುಳ್ಳು ಹೇಳುವವರು ಮೋಸ ಮಾಡುವವರು ಇಷ್ಟ ಆಗುವುದಿಲ್ಲ.
● ಬುಧವಾರ ಹುಟ್ಟಿದವರು ಬಹಳ ಸೂಕ್ಷ್ಮ ಸ್ವಭಾವದವರು. ಇವರಿಗೆ ದೇವರ ಮೇಲೆ ನಂಬಿಕೆ ಹೆಚ್ಚು ಆಧ್ಯಾತ್ಮದ ಕಡೆ ಹೆಚ್ಚು ಆಕರ್ಷಿತರಾಗಿರುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸುವ ಸ್ವಭಾವ ಇವರದ್ದು. ಎಲ್ಲರ ಜೊತೆ ಗೌರವದಿಂದ ನಡೆದುಕೊಳ್ಳುತ್ತಾರೆ. ಬಹಳ ತಾಳ್ಮೆಯನ್ನು ಹೊಂದಿರುತ್ತಾರೆ ಯಾವುದನ್ನು ಅತಿಯಾಗಿ ಮನಸ್ಸಲ್ಲಿ ಹಚ್ಚಿಕೊಳ್ಳದ ತಾವಾಯಿತು ತಮ್ಮ ಪಾಡಾಯಿತು ಎಂದು ಇರುವ ಮನಸ್ಥಿತಿಯವರಾಗಿರುತ್ತಾರೆ.
ಉತ್ತಮ ಆರೋಗ್ಯ ಪಡೆಯಲು ನಿಮ್ಮ ಜೀವನದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.!
● ಗುರುವಾರ ಹುಟ್ಟಿದವರು ಪ್ರಯಾಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇವರಿಗೆ ವಿದೇಶ ಪ್ರಯಾಣ ಮಾಡುವುದು ಎಂದರೆ ಬಹಳ ಇಷ್ಟ. ಅದಕ್ಕೆ ತಕ್ಕ ಹಾಗೆ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಇವರು ಬಹಳ ಬೇಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೆ ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ ಕಷ್ಟಪಟ್ಟು ತಾವು ಅಂದುಕೊಂಡದ್ದನ್ನು ಸಾಧಿಸಿ ಬಿಡುತ್ತಾರೆ. ಸಾಹಸ ಪ್ರವೃತ್ತಿಯವರಾಗಿದ್ದು, ಇವನಿಗೆ ಧೈರ್ಯ ಬಹಳ ಜಾಸ್ತಿ ಇರುತ್ತದೆ.
● ಶುಕ್ರವಾರ ಹುಟ್ಟುವುದೇ ಒಂದು ಪುಣ್ಯ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಇವರಿಗೆ ಹೆಚ್ಚಾಗಿ ಕಷ್ಟಗಳು ಇರುವುದಿಲ್ಲ, ಕಷ್ಟಗಳು ಬಂದರೆ ಕೂಡ ಅದನ್ನು ಪರಿಹರಿಸಿಕೊಳ್ಳುವ ದಾರಿ ಮತ್ತು ಬುದ್ಧಿವಂತಿಕೆ ಇವರಿಗೆ ಗೊತ್ತಿರುತ್ತದೆ. ಬಹಳ ಸಂತೋಷದಿಂದ ಇವರು ಜೀವನವನ್ನು ನಡೆಸುತ್ತಾರೆ. ಎಲ್ಲರೂ ಹೀಗೆ ಇರಲಿ ಆಸೆಪಡುವ ಒಳ್ಳೆಯ ಮನಸ್ಸು ಇವರಿಗೆ ಇರುತ್ತದೆ.
ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!
● ಶನಿವಾರ ಹುಟ್ಟಿದವರಿಗೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚು ಆದರೂ ಕೂಡ ಇವರ ಮೌಲ್ಯ ಎಂದಿಗೂ ಕಡಿಮೆ ಆಗುವುದಿಲ್ಲ. ವ್ಯವಸಾಯ ಮಾಡುವುದಕ್ಕೆ ಮತ್ತು ವ್ಯಾಪಾರ ಮಾಡುವುದಕ್ಕೆ ಇವರಿಗೆ ಹೆಚ್ಚು ಆಸಕ್ತಿ ಇರುತ್ತದೆ. ಒಳ್ಳೆಯವರಾಗಿ ಧರ್ಮ ಮಾರ್ಗದಿಂದ ಬದುಕುತ್ತಾರೆ, ಅದೇ ಇವರನ್ನು ಕಾಯುತ್ತದೆ.
● ಭಾನುವಾರ ಹುಟ್ಟಿದವರಲ್ಲಿ ಆಡಳಿತದ ಗುಣ ಹುಟ್ಟಿದಾಗಲಿಂದಲೂ ಇರುತ್ತದೆ. ಜವಾಬ್ದಾರಿಗಳನ್ನು ತೆಗೆದುಕೊಂಡು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸ್ವಭಾವ ಹೊಂದಿರುತ್ತಾರೆ. ಸೂರ್ಯನಂತೆ ಹೊಳೆಯುವ ರೀತಿ ವ್ಯಕ್ತಿತ್ವ ಹೊಂದಿರುವ ಇವರು ಅದರಿಂದಲೇ ಎಲ್ಲರನ್ನು ಸೆಳೆಯುತ್ತಾರೆ.