Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

Posted on September 30, 2023 By Kannada Trend News No Comments on ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

 

ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾ ವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ. ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ, ಆಕರ್ಷಣೆಯನ್ನುಂಟು ಮಾಡುವಂತಹ ವಸ್ತುವಾಗಿದೆ ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು, ಅವುಗಳದ್ದೇ ಆದ ಶಕ್ತಿ ಕೂಡಾ ಇರುತ್ತದೆ. ಆದ್ದರಿಂದ ಶಾಸ್ತ್ರ ಪುರಾಣಗಳಲ್ಲಿ ನೀವು ಯಾವುದಾದರು ಒಳ್ಳೆಯ ಶುಭ ಸಮಾರಂಭಕ್ಕೆ ಹೋಗುತ್ತಿದ್ದರೆ ಯಾವುದಾದರೂ ಕೆಲಸದ ವಿಚಾರವಾಗಿ ಹೋಗುತ್ತಿದ್ದರೆ ಇದೇ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಹೋಗಿ ಎಂದು ಹೇಳುತ್ತಿರುತ್ತಾರೆ.

ಏಕೆಂದರೆ ಈ ಬಣ್ಣದ ಬಟ್ಟೆಯನ್ನು ನೀವು ಧರಿಸಿಕೊಂಡು ಹೋಗುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಬಹುದು ಎನ್ನುವಂತಹ ಉದ್ದೇಶದಿಂದ ಈ ರೀತಿಯಾಗಿ ಹೇಳುತ್ತಿರುತ್ತಾರೆ. ಹಾಗಾದರೆ ಈ ದಿನ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ, ಹಾಗೂ ಎಷ್ಟು ಅದೃಷ್ಟವನ್ನು ತರುತ್ತವೆ ಎನ್ನುವುದನ್ನು ಈ ಕೆಳಗಿನಂತೆ ತಿಳಿಯೋಣ.

ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!

ಮೇಷ ರಾಶಿ :- ಈ ರಾಶಿಯವರಿಗೆ ಸದಾ ಕೆಂಪು ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ. ಕೆಂಪು ಬಣ್ಣಕ್ಕೆ ವಿಶೇಷ ಶಕ್ತಿ ಇದ್ದು, ವ್ಯಕ್ತಿಯೊಳಗೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ. ಜೊತೆಗೆ ನಿಂಬೆ ಹಸಿರು ಅಥವ ಹಸಿರು ಬಣ್ಣ ಅಥವಾ ಬಿಳಿ ಬಣ್ಣವು ಸಹ ಇವರಿಗೆ ಒಪ್ಪಿತವಾಗುತ್ತದೆ.

ವೃಷಭ ರಾಶಿ :- ಈ ರಾಶಿಯವರಿಗೆ ಶುಭತರುವ ಬಣ್ಣ ಹಸಿರು. ಅಲ್ಲದೆ, ಹಳದಿ ಬಣ್ಣವೂ ಆಗಿಬರುತ್ತದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಆದರೆ, ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಿರಬಾರದು. ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಒಳ್ಳೆಯದು.

ಯಾವ ರಾಶಿಯವರ ಸ್ವಭಾವ ಹೇಗೆ ಇರುತ್ತೆ.!

ಮಿಥುನ ರಾಶಿ :- ಮಿಥುನ ರಾಶಿಯ ವ್ಯಕ್ತಿಗಳಿಗೆ ಹಳದಿ ಬಣ್ಣವು ಶುಭಕಾರಕವಾಗಿದೆ. ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಹಳದಿ ಬಣ್ಣವು ಬುದ್ಧಿವಂತಿಕೆ, ಮನಸ್ಸು ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ. ಹೀಗಾಗಿ ಈ ರಾಶಿಯ ವರು ಹಳದಿಯನ್ನು ಬಳಸಿದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ, ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಬಿಳಿ ಬಣ್ಣವು ಉತ್ತಮ. ಬಿಳಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣವು ಮನಸ್ಸು, ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ.
ಸಿಂಹ ರಾಶಿ :- ಈ ರಾಶಿಯವರಿಗೆ ಕೇಸರಿ ಬಣ್ಣವು ಉತ್ತಮ. ಕೇಸರಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ.

ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

ಕನ್ಯಾ ರಾಶಿ :- ಈ ರಾಶಿಯವರಿಗೆ ನೀಲಿ ಬಣ್ಣವು ಶುಭಕಾರಕವಾಗಿದೆ. ನೀಲಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಕರ.
ತುಲಾ ರಾಶಿ :- ಇವರಿಗೆ ಗುಲಾಬಿ ಬಣ್ಣವು ಶುಭವನ್ನು ತರುತ್ತದೆ. ಈ ಬಣ್ಣ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ. ಅಲ್ಲದೆ, ತಿಳಿ ಹಳದಿ ಬಣ್ಣವೂ ಇವರಿಗೆ ಒಳತನ್ನುಂಟು ಮಾಡುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಕಪ್ಪು ಬಣ್ಣವೂ ಶುಭ ತರಲಿದೆ. ಕಪ್ಪು ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.
ಧನು ರಾಶಿ :- ಈ ರಾಶಿಯ ವ್ಯಕ್ತಿಗಳಿಗೆ ನೇರಳೆ ಬಣ್ಣವು ಒಳಿತನ್ನುಂಟು ಮಾಡುತ್ತದೆ. ನೇರಳೆ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.
ಮಕರ ರಾಶಿ :- ಮಕರ ರಾಶಿಯ ವ್ಯಕ್ತಿಗಳಿಗೆ ಕಪ್ಪು ಮತ್ತು ನೀಲಿ ಬಣ್ಣ ಶುಭಕಾರಕವಾಗಿವೆ. ಕಪ್ಪು ಮತ್ತು ನೀಲಿ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

ಕುಂಭ ರಾಶಿ :- ಇವರಿಗೆ ತಿಳಿ ನೀಲಿ ಅಥವ ಆಕಾಶ ನೀಲಿ ಬಣ್ಣಗಳು ಬಹಳ ಉತ್ತಮ. ಇವರು ಈ ಬಣ್ಣಗಳನ್ನು ಬಳಸುವುದರಿಂದ ಹೋದ ಕಡೆಗಳಲ್ಲೆಲ್ಲ ಯಶಸ್ಸನ್ನು ಸಾಧಿಸಬಹುದು.
ಮೀನ ರಾಶಿ :- ಮೀನ ರಾಶಿಯ ವ್ಯಕ್ತಿಗಳಿಗೆ ಹಳದಿ ಕಿತ್ತಳೆ ಹಾಗೂ ಕೇಸರಿ ಬಣ್ಣಗಳು ಶುಭವನ್ನು ತಂದುಕೊಡಲಿವೆ. ಈ ಬಣ್ಣಗಳು ನೆಮ್ಮದಿಯನ್ನು ತಂದುಕೊಡುವುದಲ್ಲದೆ ಒಳತನ್ನುಂಟು ಮಾಡುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!
Next Post: ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore