Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶಿವ ಹಾಗೂ ವಿಷ್ಣುಪ್ರಿಯವಾ ಈ ಶಂಖ ಪುಷ್ಪದಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತ.?

Posted on November 13, 2023 By Kannada Trend News No Comments on ಶಿವ ಹಾಗೂ ವಿಷ್ಣುಪ್ರಿಯವಾ ಈ ಶಂಖ ಪುಷ್ಪದಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತ.?

 

ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳನ್ನು ಅತ್ಯಂತ ಮಂಗಳಕರ ಎಂದೂ ಪರಿಗಣನೆ ಮಾಡಲಾಗುತ್ತದೆ. ಅಂತಹ ಸಸ್ಯಗಳನ್ನು ಮನೆಯಲ್ಲಿ ನೆಡು ವುದರಿಂದ ಅವು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಸಂಚರಿಸುವಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಅವುಗಳನ್ನು ಮನೆಯಲ್ಲಿ ನೆಟ್ಟ ತಕ್ಷಣವೇ ಹೊಸ ಆದಾಯದ ಮೂಲಗಳು ಸಹ ತರೆದುಕೊಳ್ಳುತ್ತದೆ.

ಇದರಿಂದ ಮನೆ ಮತ್ತು ಮನಸ್ಸಿಗೆ ಶಾಂತಿ ಸಮೃದ್ಧಿ ಗಳು ದೊರೆಯುತ್ತದೆ. ಅಂತಹ ಒಂದು ಸಸ್ಯವೇ ಶಂಖ ಪುಷ್ಪ. ಸಾಮಾನ್ಯವಾಗಿ ಶಂಖ ಪುಷ್ಪ ಸಸ್ಯ ಹೂವನ್ನು ನೋಡದವರು ಬಹಳ ವಿರಳ ಎಂದೇ ಹೇಳಬಹುದು. ಶಂಖ ಪುಷ್ಪ ಎಂಬ ಹೆಸರನ್ನು ಹೊಂದಿರುವ ಇದು ಸರಿಸುಮಾರು 10 ಅಡಿಗಳಷ್ಟು ಎತ್ತರವಾಗಿ ಹಬ್ಬಿ ಬೆಳೆಯುವಂತಹ ಬಳ್ಳಿ. ನೀಲಿ ಮತ್ತು ಬಿಳಿ ಬಣ್ಣದಲ್ಲಿ ಹೂವನ್ನು ಬಿಡುವಂತಹ ಈ ಸಸ್ಯ

ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಂಸ್ಕೃತದಲ್ಲಿ ಇದನ್ನು ಗಿರಿಕರಣಿಕ ಎಂದು ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಅಪರಾಜಿತ ಎಂದು ಕರೆಯ ಲಾಗುತ್ತದೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣದಿಂದ ಈ ಪುಷ್ಪಕ್ಕೆ ಶಂಖ ಪುಷ್ಪಿ ಎಂಬ ಹೆಸರು ಬಂದಿದೆ.

ಶಂಖ ಪುಷ್ಪ ಕೆಲವು ದೇವರ ಪೂಜೆಗೆ ಅತ್ಯಂತ ಶ್ರೇಷ್ಠ. ಶಂಖ ಪುಷ್ಪ ಹೂವನ್ನು ಮಹಾಲಕ್ಷ್ಮಿ ದೇವರು ಲಕ್ಷ್ಮಿ ದೇವಿ ಗಣಪತಿ ಮತ್ತು ಮಹಾದೇವ ದೇವರ ಪೂಜೆಗೆ ಬಹಳ ಶ್ರೇಷ್ಠ ಎಂದು ಭಾವಿಸಲಾಗುತ್ತದೆ. ಅದರಲ್ಲೂ ಶನೇಶ್ವರನಿಗೆ ನೀಲಿ ಬಣ್ಣ ಬಹಳ ಪ್ರಿಯವಾದ್ದರಿಂದ ಶಂಖ ಪುಷ್ಪವನ್ನು ಶನಿವಾರದ ದಿನ ಶನೇಶ್ವರನಿಗೆ ಅರ್ಪಿಸುವುದರಿಂದ ಸಾಡೆ ಸಾತಿ ಸೇರಿದಂತೆ ಶನಿ ಮಹಾದೆಸೆಗಳ ಕಷ್ಟಕಾರ್ಪಣ್ಯಗಳಿಂದ ಪರಿಹಾರ ಪಡೆದು ಕೊಳ್ಳಬಹುದು.

ಶಿವ ಪರಮಾತ್ಮನಿಗೆ ಶಂಖ ಪುಷ್ಪ ಹೂಗಳನ್ನು ಅರ್ಪಣೆ ಮಾಡುವುದ ರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಮಹಾ ವಿಷ್ಣು ದೇವರು ಶಂಖ ಪುಷ್ಪ ಹೂವನ್ನು ತುಂಬಾ ಇಷ್ಟಪಡುತ್ತಾರೆ ಎಂಬ ಕಾರಣ ದಿಂದಲೇ ಶಂಖ ಪುಷ್ಪವನ್ನು ವಿಷ್ಣುಪ್ರಿಯ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಶಂಖ ಪುಷ್ಪ ಗಿಡವನ್ನು ನೆಡುವುದು ಅತ್ಯಂತ ಶುಭಕರ ಮತ್ತು ಶ್ರೇಯಸ್ಕರ ಎಂದು ಹೇಳಲಾಗುತ್ತದೆ.

ಈ ಸಸ್ಯ ಎಷ್ಟು ವೇಗವಾಗಿ ಬೆಳೆಯುತ್ತದೆಯೋ ಅಷ್ಟೇ ವೇಗವಾಗಿ ಧನಾತ್ಮಕ ಶಕ್ತಿ ಮನೆಯಲ್ಲಿ ಹಬ್ಬಿ ಸಂತೋಷ ಮತ್ತು ಸಮೃದ್ಧಿ ಮನೆ ಮಾಡುತ್ತದೆ. ವಿಷ್ಣುಪ್ರಿಯ ಎಂಬ ಕಾರಣಕ್ಕೆ ಶಂಖ ಪುಷ್ಪದ ಬಳ್ಳಿ ಧನಲಕ್ಷ್ಮಿಯನ್ನು ಸಹ ಆಕರ್ಷಿಸುತ್ತದೆ. ಈ ಗಿಡವನ್ನು ನೆಟ್ಟ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯು ನೆಲೆ ನಿಂತು ಧನವಂತರನ್ನಾಗಿ ಮಾಡುತ್ತಾರೆ.

ಶಂಖ ಪುಷ್ಪ ಹೂವು ನೋಡಲು ಬಹಳ ಸುಂದರ ದೇವರ ಪೂಜೆಗೆ ಉಪಯೋಗವಾಗುವುದು ಮಾತ್ರವಲ್ಲದೆ ಶಂಖ ಪುಷ್ಪ ಆರೋಗ್ಯ ವರ್ಧಕವು ಸಹ ಹೌದು. ಆಹಾರಕ್ಕೆ ನೈಸರ್ಗಿಕವಾಗಿ ಬಣ್ಣ ಬರಲು ಶಂಖ ಪುಷ್ಪ ಹೂವನ್ನು ಬಳಸಲಾಗುತ್ತದೆ. ಶಂಖ ಪುಷ್ಪವು ತನ್ನ ಆರೋಗ್ಯ ಕಾರಿ ಪ್ರಯೋಜನಗಳ ಕಾರಣದಿಂದಲೇ ಆಯುರ್ವೇದದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಶಂಖ ಪುಷ್ಪ ಹೂವಿನ ಆರೋಗ್ಯ ಗುಣಗಳು ಯಾವುದು ಎಂದು ನೋಡುವುದಾದರೆ.

* ಶಂಖ ಪುಷ್ಪವನ್ನು ಮೆದುಳಿನ ಟಾನಿಕ್ ಎಂದೇ ಬಣ್ಣಿಸಲಾಗುತ್ತದೆ.
* ಶಂಖ ಪುಷ್ಪದಿಂದ ಮಾಡಿದ ಸಿರಪ್ ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಮಕ್ಕಳು ನಿರಂತರವಾಗಿ ಮೂರು ತಿಂಗಳವರೆಗೆ ಇದನ್ನು ಸೇವಿಸಿದರೆ ಮಕ್ಕಳ ಸ್ಮರಣೆ, ಏಕಾಗ್ರತೆ, ಗ್ರಹಿಸುವ ಶಕ್ತಿ ಮತ್ತು ಬುದ್ಧಿವಂತಿಕೆ ಸುಧಾರಿಸುತ್ತದೆ ಎಂದು ಸಾಬೀತಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಮೂತ್ರ ವಿಸರ್ಜನೆ ಮಾಡುವಾಗ ಈ 10 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.!
Next Post: ಪತಿ ಪತ್ನಿಯ ನಡುವೆ ಕಲಹ ಉಂಟು ಮಾಡುವ ಅಂಶಗಳು ಇವು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore