ಕರ್ನಾಟಕದ ಮನೆ ಮಾತಗಿದ್ದ, ರಾಜ್ಯದ ರಾಜಕುಮಾರನಾಗಿ ಕಂಗೊಳಿಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಇಡೀ ಚಿತ್ರರಂಗಕ್ಕೆ ತುಂಬಲಾಗದ ನ’ಷ್ಟವನ್ನು ಉಂಟುಮಾಡಿದೆ ಅಲ್ಲದೆ ದೊಡ್ಮನೆ ಕುಟುಂಬಕ್ಕೆ ಹಾಗೂ ಅಪ್ಪು ಅವರ ಅಭಿಮಾನಿಗಳ ಬಳಗಕ್ಕೆ ಅತೀವ ನೋ’ವನ್ನು ಉಂಟುಮಾಡಿದೆ. ಪುನೀತ್ ಅವರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿದ್ದರು. ಪ್ರಸ್ತುತ ಆ ಕಾರ್ಯಗಳನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ಇಡೀ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಅಂದರೆ ಅದು ಪವರ್ ಸ್ಟಾರ್ ಪುನೀತ್ ಅವರು ಮಾತ್ರ. ಡ್ಯಾನ್ಸಿಂಗ್ ವಿಚಾರದಲ್ಲಿ ಅವರನ್ನು ಮೀರಿಸಿದವರು ಯಾರು ಇಲ್ಲ, ಅವರ ಡ್ಯಾನ್ಸ್ ಅನ್ನು ಎಲ್ಲರೂ ಇಷ್ಟ ಪಡುತ್ತಾರೆ ಅಷ್ಟೇ ಅಲ್ಲದೆ ಪುನೀತ್ ಅವರ ಅದ್ಭುತವಾದ ನಟನೆ, ಫೈಟ್, ಹಾಡು ಅವರಿಂದ ಸ್ಪೂರ್ತಿದಾಯಕ ವಾಗಿ ಇವೆ.
ಆದರೆ ವಿಧಿ ಇಂತಹ ವ್ಯಕ್ತಿಯೊಡನೆ ಇನ್ನು ಹೆಚ್ಚಿನ ಸಮಯ ಕಳೆಯಲು ಅವಕಾಶ ನೀಡದೆ ಅವಸರವಾಗಿ ಅವರನ್ನು ನಮ್ಮಿಂದ ದೂರ ಮಾಡಿದೆ. ಆದರೂ ಅಪ್ಪು ಅವರ ನೆನಪು ಅಜರಾಮರ. ಇವರ ನೆನಪನ್ನು ಸದಾ ಅಚ್ಚ ಹಸಿರಾಗಿ ಇರಿಸಲು ಅಭಿಮಾನಿಗಳು ನಾನಾ ಪ್ರಯತ್ನ ಮಾಡುತ್ತ ಇರುತ್ತಾರೆ. ಕನ್ನಡದ ಜೀ ಕನ್ನಡ ವಾಹಿನಿಯು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇದುವರೆವಿಗೂ ಹಾಡಿನ ಮೂಲಕ, ಅವಾರ್ಡ್ ಮೂಲಕ, ಡ್ಯಾನ್ಸ್ ಮೂಲಕ ಗೌರವ ಸಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಅಷ್ಟೆ ಅಲ್ಲದೆ ಇದೀಗ ಶೋ ಒಂದರ ವಿಜೇತರಿಗೆ ಅಪ್ಪು ಹೆಸರಲ್ಲಿ ಟ್ರೋಫಿ ನೀಡಲು ಸಿದ್ಧವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಹಲವು ದಿನಗಳಿಂದ ಪ್ರಸಾರವಾಗುತ್ತಿದ್ದು ಇದರಲ್ಲಿ ಹಲವಾರು ಸ್ಪರ್ಧಿಗಳು ಇದ್ದಾರೆ. ಆ ಸ್ಪರ್ಧಿಗಳಿಗೆ ಗೆಲುವಾದ ಮೇಲೆ ಹಣದ ಜೊತೆಗೆ ಒಂದಷ್ಟು ಬೇರೆ ಬೇರೆ ಉಡುಗೊರೆಗಳನ್ನು ಸಹ ನೀಡುತ್ತಿದ್ದರು.
ಹಾಗೆಯೇ ಈ ಬಾರಿ ಹಣದ ಜೊತೆಗೆ ನೀಡುತ್ತಿದ್ದ ಇತರೆ ಉಡುಗೊರೆಯ ಬದಲಾಗಿ ವಿಶೇಷವಾದ ಉಡುಗೊರೆ ಒಂದನ್ನು ನೀಡಲು ನಿರ್ಧರಿಸಿದೆ. ಅದೆಂದರೆ ಅದು ಅಪ್ಪು ಅವರ ಟ್ರೋಫಿ. ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ನಗದು ಬಹುಮಾನದ ಜೊತೆಗೆ ಬೆಲೆಯನ್ನೇ ಕಟ್ಟಲಾಗದ ಅಪ್ಪು ಟ್ರೋಫಿ ಸಿಗಲಿದೆ.ಅಪ್ಪು ಅವರ ಡ್ಯಾನ್ಸ್ ವಿತ್ ಅಪ್ಪು ಹಾಡು ಸದಾ ಕಾಲಕ್ಕೂ ಜೀವಂತ. ಡ್ಯಾನ್ಸ್ ಎಂದರೆ ಅತಿಯಾಗಿ ಆಸೆ ಪಡುವವರೆಲ್ಲಾ ಬಯಸುತ್ತಿದ್ದದ್ದು ಒಮ್ಮೆಯಾದರೂ ಅಪ್ಪು ಅವರ ಜೊತೆ ಡ್ಯಾನ್ಸ್ ಮಾಡಬೇಕು ಡ್ಯಾನ್ಸ್ ವಿತ್ ಅಪ್ಪು ಅಂತ. ಇದು ಹಲವರಿಗೆ ಈಡೇರಿದರೆ ಇನ್ನು ಕೆಲವರಿಗೆ ಈಡೇರದೆ ಹಾಗೆಯೇ ಉಳಿದು ಬಿಟ್ಟಿತು. ಆದರೆ ಅಪ್ಪು ಅವರ ಹಾಡುಗಳಿಗೆ ಕುಣಿಯುವುದು ಸಹ ಒಂದು ಅದೃಷ್ಟದಂತೆ ಅವಕಾಶ ಸಿಕ್ಕಾಗ ಡ್ಯಾನ್ಸ್ ಪ್ರೇಮಿಗಳು ಅಪ್ಪು ಹಾಡಿಗೆ ನೃತ್ಯ ಮಾಡುತ್ತಾರೆ.
ಈ ಬಾರಿಯ ಜೀ ಕನ್ನಡದ ಡಿಕೆಡಿ ಕಾರ್ಯಕ್ರಮದಲ್ಲಿ ಅಪ್ಪು ಅವರ ಹಾಡುಗಳೇ ಹೆಚ್ಚಿದ್ದು ವೇದಿಕೆ ಮೇಲೆ ಅಪ್ಪು ಬರಮಾಡಿಕೊಳ್ಳುವ ಕ್ಷಣ, ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಇಡೀ ಡಿಕೆಡಿ ಟೀಂ ಕುಣಿದು ನೃತ್ಯದ ಮೂಲಕವೇ ಗೌರವ ನೀಡಿ, ಅಪ್ಪುವಿನ ಟ್ರೋಫಿಯನ್ನು ಬಹಳ ಗೌರವದಿಂದ ವೇದಿಕೆಯ ಮೇಲೆ ಇಳಿಸಿದರು. ಆ ಶೋನ ಒಬ್ಬ ತೀರ್ಪುಗಾರರಾಗಿ ಇದ್ದ ಶಿವರಾಜ್ ಕುಮಾರ್ ಅವರು ಆ ಟ್ರೋಫಿಯ ಬಟ್ಟೆ ಸರಿಸಿ ವೇದಿಕೆ ಮೇಲೆ ತಂದರು. ನಕ್ಷತ್ರಗಳ ನಡುವೆ ಅಪ್ಪು ಕಂಚಿನ ಪ್ರತಿಮೆ ಮಿನುಗುತ್ತಿದೆ. ಒಂದು ಕ್ಷಣ ಆ ಪ್ರತಿಮೆ ನೋಡಿದರೆ ಅಪ್ಪು ನಿಜವಾಗಲೂ ಅಗಲಿದರಾ ಎಂಬ ನೋವು ಮತ್ತೆ ಕಾಡುತ್ತೆ, ದುಃಖ ಉಮ್ಮಳಿಸಿ ಬರುತ್ತದೆ. ಡ್ಯಾನ್ಸ್ ಮಾಡುವ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಇದ್ದು ಇದರ ಬಳಿ ಪವರ್ ಎಂದು ಬರೆಯಲಾಗಿದೆ.
ಆ ಟ್ರೋಫಿ ಕೆಳಗಿಳಿಯುತ್ತಿದ್ದಂತೆ ನೋಡುಗರ ಮನಸ್ಸು ತೀರಾ ಚಡಪಡಿಸುತ್ತಾ ಅಪ್ಪು ನಮ್ಮ ಜೊತೆ ಇಲ್ಲ ಎಂದು ಕಣ್ಣೀರು ಹಾಕಿದೆ. ಅಲ್ಲದೆ ಶಿವರಾಜ್ ಕುಮಾರ್ ಅವರ ಮುದ್ದಿನ ತಮ್ಮ ಪುನೀತ್ ಅವರು ಬಹಳ ಬೇಗ ದೂರಾದ ನೋವು ಶಿವಣ್ಣನನ್ನು ಬಾಧಿಸಿತು. ಅಪ್ಪು ಟ್ರೋಫಿ ಇಳಿದು ಬಂದ ರೀತಿ ಅಕ್ಷರಶಃ ಅಪ್ಪು ನೆನೆಪು ಎದೆಯೊಳಗೆ ಧಸಕ್ಕೆಂದು ಬೀಳುತ್ತದೆ. ಇದು ಶಿವಣ್ಣನ ಭಾವನೆಗಳನ್ನೇ ಬ್ರೇಕ್ ಮಾಡಿ, ಮಂಕಾಗಿ ಕುಳಿತುಬಿಟ್ಟರು. ಎಷ್ಟೆ ಕಂಟ್ರೋಲ್ ಮಾಡಿದರು ಬಿಡದೆ ಕಣ್ಣಲ್ಲಿ ನೀರು ಹರಿಯ ತೊಡಗಿತು. ವೇದಿಕೆಯ ಮೇಲೆಇದ್ದ ರಕ್ಷಿತಾ ಬಂದು ಸಮಾಧಾನ ಮಾಡಿದರು, ಚಿನ್ನಿ ಮಾಸ್ಟರ್ ಧೈರ್ಯ ತುಂಬಿದರು. ಶಿವಣ್ಣನ ದುಃಖ ಇಡೀ ಶೋನಲ್ಲಿ ದುಃಖ ಆವರಿಸುವಂತೆ ಮಾಡಿತು. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ಇಡೀ ಕರುನಾಡು ಆ ಕ್ಷಣ ಕಣ್ಣಲ್ಲಿ ನೀರು ಹಾಕಿದ್ದೆ. ವೇದಿಕೆ ಮೇಲೆ ಇದ್ದ ಅಪ್ಪು ಅವರ ಕಂಚಿನ ಪ್ರತಿಮೆಗೆ ಶಿವಣ್ಣ ಅವರು ಮುತ್ತು ಕೊಡುವಾಗ ನಿಜವಾಗಿಯೂ ಅಪ್ಪು ಕೆನ್ನೆಗೆ ಮುತ್ತಿಟ್ಟಂತೆ ಆಯಿತು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯವೇನು ಅಂತ ಕಾಮೆಂಟ್ ಮುಖಾಂತರ ತಿಳಿಸಿ