Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜಕುಮಾರ್ ವಂಶ ಅಂದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕಷ್ಟ ಅಂತ ಇವರ ಮನೆ ಮುಂದೆ ಯಾರೇ ಹೋದರು ಕೂಡ ಬರಿಗೈನಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ ಸಹಾಯ ಮಾಡುವುದರಲ್ಲಿ ದಾನ ಧರ್ಮ ಮಾಡುವುದರಲ್ಲಿ ಅಪ್ಪು ಅವರನ್ನು ಬಿಟ್ಟರೆ ಬೇರೆ ಯಾವ ನಟರು ಕೂಡ ಇಲ್ಲ ಅಂತ ಹೇಳುತ್ತಿದ್ದರು. ಆದರೆ ಇದೀಗ ಅದೇ ಸಾಲಿನಲ್ಲಿ ಶಿವಣ್ಣ ಅವರು ಕೂಡ ಇದ್ದಾರೆ ಹೌದು ಶಿವಣ್ಣ ಅವರು ಒಂದು ಬಾರಿ ಮಾತು ಕೊಟ್ಟರೆ ಮುಗಿಯಿತು‌. ಅದಿಷ್ಟೇ ಕಷ್ಟ ಬಂದರೂ ಕೂಡ ಆ ಮಾತನ್ನು ನೆರವೇರಿಸುವುದಕ್ಕೆ ಅವರು ಸಿದ್ಧರಾಗಿರುತ್ತಾರೆ ಇಂತಹ ಹಲವು ಉದಾರಣೆಗಳು ಇದೆ.

ಇತ್ತೀಚಿಗಷ್ಟೇ ಶಿವಣ್ಣ ಅಭಿಜಿತ್ ಅವರಿಗೆ ಕೊಟ್ಟ ಮಾತು ಇಷ್ಟು ಬೇಗ ಈಡೇರುತ್ತದೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ಅಭಿಜಿತ್ ಅವರು ಇದೀಗ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಅವಕಾಶಗಳು ಸಿಗದೇ ಮನೆಯಲ್ಲೇ ಕೈ ಕೊಟ್ಟು ಕುಳಿತುಕೊಳ್ಳುವಂತಹ ಸಂದರ್ಭ ಎದುರಾಗಿದೆ ಒಂದು ಕಾಲದಲ್ಲಿ ಟಾಪ್ ನಟ ಆಗಿದಂತಹ ಅಭಿಜಿತ್ ಅವರು ದಿನ ಕಳೆದಂತೆ ಸಿನಿಮಾದಿಂದ ಕಣ್ಮರೆಯಾಗುತ್ತಾರೆ. ಜೀವನ ನಡೆಸುವುದಕ್ಕಾಗಿ ಇದೀಗ ಧಾರಾವಾಹಿಯಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದರೆ ತಮ್ಮ ಕುಟುಂಬದ ನಿರ್ವಹಣೆಗಾಗಿ ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಈ ವಿಚಾರವನ್ನು ಇತ್ತೀಚಿಗಷ್ಟೇ ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಜೋಡಿ ನಂಬರ್ ಒಂದು ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕೂಡ ಅಭಿಜಿತ್ ಅವರು ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಜೋಡಿ ನಂಬರದ ಒನ್ ಎಂಬ ಕಾರ್ಯಕ್ರಮದ ಮಹಾಸಂಗಮದ ವೇಳೆಯಲ್ಲಿ ಅಭಿಜಿತ್ ಅವರು ಮಾಡಿದಂತಹ ಡ್ಯಾನ್ಸನ್ನು ನೋಡಿ ಶಿವಣ್ಣ ಅವರು ಸಿಕ್ಕಾಪಟ್ಟೆ ಫಿಧಾ ಆಗಿದ್ದರು. ಈ ಸಮಯದಲ್ಲಿ ಅಭಿಜಿತ್ ಅವರು ತಮ್ಮ ಸಿನಿಮಾ ಜೀವನದ ಬಗ್ಗೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ವೇದಿಕೆಯ ಮೇಲೆ ಹೇಳಿಕೊಂಡು ಬಹಳ ಭಾವುಕರಾಗುತ್ತಾರೆ.

ಅಭಿಜಿತ್ ಅವರ ಮಾತನ್ನು ಕೇಳಿಸಿಕೊಂಡಂತಹ ಶಿವಣ್ಣ ಅವರು ಅಭಿಜಿತ್ ಅವರಿಗೆ ಧೈರ್ಯ ತುಂಬುತ್ತಾರೆ ಅಷ್ಟೇ ಅಲ್ಲದೆ ಅವರು ಜೀವನದುದ್ದಕ್ಕೂ ಕೂಡ ನೀವು ಸಂಘರ್ಷ ಮಾಡಿಕೊಂಡು ಬಂದಿದ್ದಿರ ಎಂದು ವೇದಿಕೆಯ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದರ ಜೊತೆಗೆ ಮುಂದಿನ ನನ್ನ ಸಿನಿಮಾದಲ್ಲಿ ಅಭಿಜಿತ್ ಅವರಿಗೆ ವಿಶೇಷ ಪಾತ್ರವನ್ನು ನೀಡುತ್ತೇನೆ. ಅವರ ಕೈಗೆ ದುಬಾರಿ ಸಂಭಾವನೆ ಸಿಗುವಂತೆ ನಾನು ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಶಿವಣ್ಣ ಅವರು ಈ ಮಾತನ್ನು ಹೇಳಿ ಕೇವಲ 3 ವಾರಗಳಷ್ಟೇ ಆಗಿತ್ತು ಆದರೆ ಇದೀಗ ಆ ಮಾತನ್ನು ಶಿವಣ್ಣ ಅವರು ನಿಜ ಮಾಡಿದ್ದಾರೆ.

ಹೌದು ಶಿವಣ್ಣ ಅವರ ಮುಂದಿನ ಪ್ರಾಜೆಕ್ಟ್ ಆದಂತಹ ಘೋಸ್ಟ್ ಸಿನಿಮಾದಲ್ಲಿ ಅಭಿಜಿತ್ ಅವರಿಗೆ ವಿಶೇಷ ಪಾತ್ರ ಒಂದನ್ನು ಕಲ್ಪಿಸಿ ಕೊಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಚಿತ್ರತಂಡದವರೇ ಹೇಳಿಕೊಂಡಿದ್ದಾರೆ ಇದರಿಂದಲೇ ತಿಳಿಯುತ್ತದೆ ರಾಜ್ ವಂಶದವರು ಒಂದು ಬಾರಿ ಮಾತು ಕೊಟ್ಟರೆ ಮುಗಿಯಿತು ಆ ಮಾತನ್ನು ತಪ್ಪುವ ಪ್ರಮೇಯವೇ ಇಲ್ಲ ಅಂತ. ಸದ್ಯ ಕಂತು ಅಭಿಜಿತ್ ಅವರಿಗೆ ಸಿನಿಮಾದಲ್ಲಿ ಮತ್ತೆ ನಟನೆ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ಸಂಜೀವಿನಿ ಸಿಕ್ಕಂತೆ ಆಗಿದೆ. ಇನ್ನು ಕಳೆದ ವಾರ ಜೋಡಿ ನಂಬರ್ ಒಂದು ಕಾರ್ಯಕ್ರಮದಲ್ಲಿ ವಿಜೇತರಾದಂತಹ ಅಭಿಜಿತ್ ದಂಪತಿಗಳಿಗೆ 5 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ದೊರೆತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಶಿವಣ್ಣ ಅವರು ಅಭಿಜಿತ್ ಗೆ ಧೈರ್ಯ ತುಂಬಿದ ಮೇಲೆ ಒಂದರ ಮೇಲೆ ಮತ್ತೊಂದರಂತೆ ಸಿಹಿ ಸುದ್ದಿಯನ್ನು ಕೇಳುತ್ತಿದ್ದಾರೆ. ಹಲವು ವರ್ಷದಿಂದ ಕಷ್ಟದ ಜೀವನ ನಡೆಸುತ್ತಿದ್ದ ಅಭಿಜಿತ್ ಕುಟುಂಬ ಇನ್ನು ಮುಂದೆಯಾದರೂ ಕೂಡ ಸುಖಕರವಾಗಿರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.