ಕೊರಗಜ್ಜ ದೇವರ ಮಹಿಮೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಕೊರಗಜ್ಜನನ್ನು ಬಹಳ ನಂಬುತ್ತಾರೆ. ಆ ಪಾಲಿನ ಜನರಿಗೆ ದೈವವಾಗಿರುವ ಕೊರಗಜ್ಜನ ಬಳಿ ನಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತಾರೆ. ತಲ ತಲಾಂತರದಿಂದಲೂ ಇಲ್ಲಿಯ ಜನರು ಗುಣವಾಗದ ಯಾವುದೇ ಅನಾರೋಗ್ಯ ಸಮಸ್ಯೆ ಆದರೂ ಅಥವಾ ಬಹಳ ಮುಖ್ಯವಾದ ವಸ್ತುವನ್ನೇನಾದರೂ ಕಳೆದುಕೊಂಡಿದ್ದರೂ ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ.
ಹಾಗೆ ಅವರ ಸಮಸ್ಯೆ ಸರಿ ಹೋಗಿರುವುದರ ಬಗ್ಗೆ ಮನೆ ಮನೆಯಲ್ಲೂ ಕೂಡ ಉದಾಹರಣೆಗಳನ್ನು ಕೊಡುತ್ತಾರೆ. ಹೀಗಾಗಿ ಕರಾವಳಿ ಭಾಗವಾಗದ ನಂಬಿಕೆ ದೈವಗಿದ್ದ ಕೊರಗಜ್ಜನ ಮಹಿಮೆಯನ್ನು ಇಂದು ಕರ್ನಾಟಕದ ಎಲ್ಲಾ ಜನರು ಅರಿತಿದ್ದಾರೆ. ಈ ವಿಷಯವನ್ನು ತಿಳಿದಿದ್ದ ಶಿವರಾಜ್ ಕುಮಾರ್ ಅವರು ಪತ್ನಿ ಸಮೇತವಾಗಿ ಹೋಗಿ ಕೊರಗಜ್ಜನ ಮೂಲ ಕ್ಷೇತ್ರ ಆದ ಕುತ್ತಾರುವಿನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಂಡು ಬಂದಿದ್ದಾರೆ ಅದು ಸಹ ಪತ್ನಿಗಾಗಿ ಎನ್ನುವುದು ವಿಶೇಷ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೇದ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಮಂಗಳೂರಿನಲ್ಲಿ ನಡೆಯುತ್ತಿದೆ. ಸಿನಿಮಾಗೆ ನಿರ್ಮಾಪಕಿ ಆಗಿರುವ ಗೀತ ಶಿವ ರಾಜಕುಮಾರ್ ಅವರು ಸಿನಿಲೋಕದ ತಮ್ಮ ಮೊದಲ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕಾಗಿ ಪತ್ನಿ ಮತ್ತು ಕುಟುಂಬ ಸಮೇತವಾಗಿ ಮಂಗಳೂರಿನ ಕಡೆಗೆ ಶಿವಣ್ಣನ ಕುಟುಂಬ ಹೊರಟಿದೆ.
ಮೊದಲಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಿಗೆ ಭೇಟಿಕೊಟ್ಟು ನಂತರ ಕೊರಗಜ್ಜನ ಕ್ಷೇತ್ರದ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ರಕ್ಷಿತಾ ಪ್ರೇಮ್ ಅವರು ಶಿವರಾಜ್ ಕುಮಾರ್ ಅವರಿಗೆ ತಿಳಿಸಿದರಂತೆ. ಕೊರಗಜ್ಜನ ಕಾರಣಿಕದ ಬಗ್ಗೆ ಹಲವಾರು ಜನರಿಂದ ವಿಷಯ ತಿಳಿದಿದ್ದ ಶಿವಣ್ಣ ಅವರು ತಾವು ಸಹ ಕೊರಜ್ಜನ ಕ್ಷೇತ್ರಕ್ಕೆ ಭೇಟಿಕೊಟ್ಟು ತಮ್ಮ ವೇದ ಸಿನಿಮಾಗೆ ಒಳಿತಾಗಲಿ ಈ ಮೂಲಕ ಯಶಸ್ವಿ ನಿರ್ಮಾಪಕಿಯಾಗಿ ಗೀತ ಹೆಸರು ಮಾಡಲಿ ಎಂದು ಹರಕೆ ಕಟ್ಟಿ ಕೊಂಡಿದ್ದಾರಂತೆ.
ಕೊರಗಜ್ಜನ ಕ್ಷೇತ್ರದಲ್ಲಿ ಯಾರೇ ಆದರೂ ಸಹ ಯಾವುದೇ ಆಡಂಬರ ಇಲ್ಲದೆ ಪೂಜೆ ಸಲ್ಲಿಸಬಹುದು. ಭಕ್ತಿಯಿಂದ ಇಲ್ಲಿ ವೀಳ್ಯದೆಲೆ ಇಟ್ಟು ಚಕ್ಕಲಿ ಮತ್ತು ಶರಾಬು ಇಟ್ಟು ಭಕ್ತಾದಿಗಳು ಪ್ರಾರ್ಥಿಸಿ ಹರಕೆ ಕಟ್ಟಿಕೊಳ್ಳುತ್ತಾರೆ. ಮತ್ತು ಬಹುತೇಕ ಈ ಎಲ್ಲಾ ಹರಕೆಗಳು ಕೂಡ ನೆರವೇರಿವೆ. ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಬೇಕು ಅಷ್ಟೇ.
ಕೊರಗಜ್ಜ ಈ ರೀತಿ ತಮ್ಮನ್ನು ಹರಿಸಿ ಬಂದ ಎಲ್ಲಾ ಭಕ್ತಾದಿಗಳ ಕೈ ಹಿಡಿಯುತ್ತಾರೆ ಎನ್ನುವುದು ಇಲ್ಲಿನ ಬಲವಾದ ನಂಬಿಕೆ ಹಾಗೂ ಕೊರಗಜ್ಜ ಕೂಡ ಅಂತಹ ಶಕ್ತಿವಂತ ಕಟ್ಟುನಿದ್ದಾಗ ದೈವ. ಈ ಹಿಂದೆ ರಕ್ಷಿತ ಪ್ರೇಮ್ ಅವರು ಸಹ ಸಾಕಷ್ಟು ಬಾರಿ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ ಹರಕೆ ಕಟ್ಟಿಕೊಂಡು ತೀರಿಸಿದ್ದಾರೆ ಹಾಗಾಗಿ ಈ ಸಲಹೆಯನ್ನು ಶಿವಣ್ಣ ಅವರಿಗೂ ನೀಡಿದ್ದಾರೆ.
ಕೊರಗಜ್ಜನ ದರ್ಶನ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಶಿವಣ್ಣ ಸಹ ರಕ್ಷಿತಾ ಪ್ರೇಮ್ ಅವರು ಕೊಟ್ಟ ಸಲಹೆ ಬಳಿಕ ನಾನು ಇಲ್ಲಿ ಬಂದೆ ಇಲ್ಲಿ ಬಂದು ನೋಡಿದ ಮೇಲೆ ಇಲ್ಲಿನ ಆಚಾರ ವಿಚಾರ ಹಾಗೂ ಸಂಪ್ರದಾಯಗಳು ನನ್ನ ಮನಸ್ಸಿಗೆ ಬಹಳ ಶಾಂತಿ ನೀಡಿತು. ಭಕ್ತಿಯಿಂದ ಪ್ರಾರ್ಥನೆ ಮಾಡುವುದಷ್ಟೇ ಭಕ್ತಾದಿಗಳಾಗಿ ನಮ್ಮ ಕರ್ತವ್ಯ ಏನು ಆಗಬೇಕು ಅದು ಈಗಾಗಲೇ ನಿರ್ಧಾರ ಆಗಿರುತ್ತದೆ ಅದು ದೈವದ ಇಚ್ಛೆ ಎಂದು ಮಾತನಾಡಿದ್ದಾರೆ.