Home Entertainment ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.

ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.

0
ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.

ಸಖತ್ ಯಂಗ್‌ ಮತ್ತು ಎನರ್ಜಿಟಿಕ್ ಆಗಿರುವ ಶಿವಣ್ಣ ಅವರಿಗೆ 64 ವರ್ಷ ಅಂದರೆ ಯಾರಿಗೂ ಕೂಡ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಈಗಲೂ ಕೂಡ 18ರ ಯುವಕನಂತೆ ಡ್ಯಾನ್ಸ್ ಮಾಡುತ್ತಾರೆ ಯಾವುದೇ ಕಾರ್ಯಕ್ರಮ ಇರಲಿ ಲವ ಲವಿಕೆಯಿಂದ ಪಾಲ್ಗೊಳ್ಳುತ್ತಾರೆ. ಇನ್ನು ಸಿನಿಮಾದಲಂತೂ ಇವರ ಎನರ್ಜಿಯ ಬಗ್ಗೆ ಹೇಳುವ ಹಾಗೆಯೇ ಇಲ್ಲ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಕೆಲಸ ಮಾಡುತ್ತಾರೆ. ಇಷ್ಟೆಲ್ಲ ಸಾಧನೆ ಮಾಡಿದರು ಕೂಡ ಶಿವಣ್ಣ ಅವರು ಕೆಲವೊಮ್ಮೆ ಭಾವುಕರಾಗುವುದನ್ನು ನಾವು ನೋಡಿ ಇರುತ್ತೇವೆ‌. ಹೌದು ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಜೀ ಕುಟುಂಬ ಅವಾರ್ಡ್ ಅನ್ನು ಏರ್ಪಡಿಸಲಾಯಿತು ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವಣ್ಣ ಅವರು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು ಸುಮಾರು ಮೂರು ತಿಂಗಳುಗಳ ಕಾಲ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಈ ಬಾರಿಯ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಮುಖ್ಯ ಅತಿಥಿಯಾಗಿ ಗೀತಾ ಮತ್ತು ಶಿವಣ್ಣ ಇಬ್ಬರು ಕೂಡ ಭಾಗವಹಿಸಿದ್ದರು. ಎಲ್ಲಾ ನಟ ನಟಿಯರಿಗೆ ಹಾಗೂ ಸಹ ಕಲಾವಿದರಿಗೆ ಮತ್ತು ಪೋಷಕ ನಟೆಯರಿಗೆ ಅವಾರ್ಡ್ ಅನ್ನು ನೀಡಲಾಯಿತು. ಈ ಕಾರ್ಯಕ್ರಮವನ್ನು ಅನುಶ್ರೀ ಹಾಗೂ ರವಿಚಂದ್ರನ್ ಇಬ್ಬರೂ ಕೂಡ ಮುನ್ನಡೆಸಿಕೊಂಡು ಹೋಗುತ್ತಿರುತ್ತಾರೆ. ಈ ಸಮಯದಲ್ಲಿ ರವಿಚಂದ್ರನ್ ಅವರು ಶಿವಣ್ಣ ಅವರನ್ನು ಸ್ಟೇಜ್ ಮೇಲೆ ಕರೆಸಿ ಕೆಲವು ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ.

ರವಿಚಂದ್ರನ್ ಅವರು ಶಿವರಾಜಕುಮಾರ್ ಅವರನ್ನು ಪ್ರಶ್ನೆ ಕೇಳುವುದಕ್ಕೆ ಪ್ರಾರಂಭವಾಗಿ ಮಾಡುತ್ತಾರೆ ಈ ಸಮಯದಲ್ಲಿ ರವಿಚಂದ್ರನ್ ಹೇಗಿದ್ದೀಯಾ ಅಂತ ಕೇಳಿದ್ದಕ್ಕೆ ಶಿವಣ್ಣ ಅವರು ಚೆನ್ನಾಗಿದ್ದೇನೆ ಅಂತ ಹೇಳುತ್ತಾರೆ. ತದನಂತರ ಮಕ್ಕಳು ಹೆಂಡತಿ ಹೇಗಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಈ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ದೊಡ್ಡ ಮಗಳ ಆರೋಗ್ಯ ಸರಿ ಇರಲಿಲ್ಲ ಆದರೆ ಈಗ ಪರವಾಗಿಲ್ಲಾ ಇನ್ನು ಅಳಿಯ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಎರಡನೇ ಮಗಳು ವೆಬ್ ಸೀರೀಸ್ ನಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾಳೆ. ಗೀತಾ ಶಕ್ತಿ ಧಾಮ ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾಳೆ ಇದರ ಜೊತೆಗೆ ಏಂಜಲ್ಸ್ ಎಂಬ ಪ್ರಾಡಕ್ಟ್ ಅನ್ನು ಬಿಡುಗಡೆ ಮಾಡಿದ್ದರೆ ಈ ಒಂದು ಪ್ರಾಡಕ್ಟ್ ಮುಖಾಂತರ ಬರುವ ಹಣವನ್ನು ಶಕ್ತಿಧಾಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಲಾಗುತ್ತಿದೆ ಎಂದರು.

ತದನಂತರ ರವಿಚಂದ್ರನ್ ಗೀತಾನ ಮದುವೆಯಾಗುವಾಗ ಹಾಗೂ ಈಗ ಇರುವ ಗೀತಗೂ ಏನೂ ವ್ಯತ್ಯಾಸ ಏನು ಅಂತ ಕೇಳ್ತಾರೆ ಆಗ ಶಿವಣ್ಣ ಆಗ ಎಷ್ಟು ಮೆಚ್ಯೂರ್ ಆಗಿದ್ದರೂ ಈಗ ಅಷ್ಟೇ ಮೆಚ್ಯೂರ್ ಆಗಿದ್ದಾರೆ. ಅವಾಗ ನನ್ನನ್ನು ಎಷ್ಟು ಖಡಕ್ ಆಗಿ ಇಟ್ಕೊಂಡಿದ್ದರು ಇವಾಗಲೂ ಅಷ್ಟೇ ಖಡಕ್ ಆಗಿ ಇಟ್ಕೊಂಡಿದ್ದಾರೆ ಎಂದಿದ್ದಾರೆ. ನಂತರ ರವಿಚಂದ್ರನ್ ಯಾವಾಗಲೂ ಗೀತ ನಿಮ್ಮ ಜೊತೆಗೆ ಇರುತ್ತರ ಅಂತ ಕೇಳ್ತಾರೆ ಆಗ ಶಿವಣ್ಣ ಗೀತಾ ನನ್ನ ಜೊತೆ ಯಾವಾಗಲೂ ಇರುತ್ತಾಳೆ ಒಂದು ಕ್ಷಣವೂ ನನ್ನನ್ನು ಬಿಟ್ಟಿರಲಾರಲು. ಏಕೆಂದರೆ ಕಳೆದ ಹತ್ತು ವರ್ಷದ ಹಿಂದೆ ನನಗೆ ಬ್ರೈನ್ ನಲ್ಲಿ ಒಂದು ಚಿಕ್ಕ ಸಮಸ್ಯೆ ಆಗಿತ್ತು, ಈ ಸಮಯದಲ್ಲಿ ವೈದ್ಯರು ಆಪರೇಷನ್ ಮಾಡಬೇಕು ಅಂತ ಹೇಳಿದ್ದರು.

ಭಾರತದಲ್ಲಿ ಈ ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದಾಗ ನಾನು ಪ್ಯಾರೀಸ್ ಗೆ ಈ ಆಪರೇಷನ್ ಮಾಡಿಸಿಕೊಳ್ಳಲು ತೆರಳ ಬೇಕಾಯಿತು. ಈ ಸಮಯದಲ್ಲಿ ನನ್ನ ಜೊತೆ ಬರಲು ಅಪ್ಪು ಮತ್ತು ರಾಘಣ್ಣ ಇಬ್ಬರಿಗೂ ಕೂಡ ವೀಸಾ ದೊರೆಯಲಿಲ್ಲ. ರಿಸ್ಕ್‌ ಫ್ಯಾಕ್ಟರ್ ಜಾಸ್ತಿ ಇತ್ತು ನನಗೆ ಆತಂಕ ಹೆಚ್ಚಿತ್ತು ಆ ಸಮಯದಲ್ಲಿ ಗೀತ ನನ್ನ ಜೊತೆ ನಿಂತಿದ್ದರು ಅಷ್ಟೇ ಅಲ್ಲದೆ ನನ್ನ ಆರೋಗ್ಯ ಸರಿಯಾದ ತಲೆ ಕೂದಲು ಕೊಡುವುದಾಗಿ ಹೇಳಿಕೊಂಡಿದ್ದರು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕೂದಲನ್ನು ತುಂಬಾ ಇಷ್ಟಪಡುತ್ತಾರೆ ಹೆಣ್ಣು ಮಕ್ಕಳಿಗೆ ಕೂದಲು ಅಂದ ಮತ್ತು ಸೌಂದರ್ಯ ಈ ಕೂದಲನ್ನು ಅಷ್ಟು ಸುಲಭವಾಗಿ ಕೊಡುವುದಕ್ಕೆ ಯಾರು ಕೂಡ ಒಪ್ಪುವುದಿಲ್ಲ.

ಆದರೆ ಗೀತಾಳಿಗೆ ತನ್ನ ಕೂದಲಿಗಿಂತ ನನ್ನ ಆರೋಗ್ಯ ಹೆಚ್ಚು ಹಾಗಾಗಿ ಆಕೆ ಕೂದಲನ್ನು ಒಂದು ಕ್ಷಣವು ಯೋಚನೆ ಮಾಡದೆ ಕೊಟ್ಟುಬಿಟ್ಟಳು ಆ ಕ್ಷಣವನ್ನು ನಾನು ಜೀವನದಲ್ಲಿ ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಈ ಘಟನೆ ನಡೆದ ನಂತರ ನಿಜಕ್ಕೂ ನನಗೆ ಹೆಂಡತಿ ಬೆಲೆ ಏನು ಎಂಬ ಸತ್ಯ ಅರಿವಾಯಿತು ಎಂದು ವೇದಿಕೆಯ ಮೇಲೆ ಶಿವಣ್ಣ ಹೇಳಿದ್ದಾರೆ. ತದನಂತರ ರವಿಚಂದ್ರನ್ ಅವರು ನಿಮ್ಮ ಮನದಾಳದ ಮಾತನ್ನು ಹೇಳುವುದಕ್ಕೆ ಅವಕಾಶ ಸಿಗುವುದಿಲ್ಲ ಹಾಗಾಗಿ ಈ ವೇದಿಕೆಯ ಮೇಲೆ ಗೀತಾ ಅವರ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರ ನೀಡಿದ ಶಿವಣ್ಣ ಅವರು ಗೀತಾ ಅವರಿಗೆ ಒಂದು ಹಾಡನ್ನು ಹೇಳುತ್ತಾರೆ ಆ ವಿಡಿಯೋ ಈ ಕೆಳಗಿದೆ ನೋಡಿ. ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗಂಡನಿಗಾಗಿ ತ್ಯಾಗ ಮಾಡುವ ಅದೆಷ್ಟೋ ಜನ ಹೆಂಡತಿಯರಿದ್ದಾರೆ.

LEAVE A REPLY

Please enter your comment!
Please enter your name here