ಮನೆಯಲ್ಲಿರುವಂತಹ ಪ್ರತಿಯೊಬ್ಬ ಹೆಣ್ಣು ಕೂಡ ಮನೆಯಲ್ಲಿ ಅಡುಗೆಗೆ ಬಳಸುವಂತಹ ಸಿಲಿಂಡರ್ ಅನ್ನು ಹೇಗೆ ಕಡಿಮೆ ಪ್ರಮಾಣದಲ್ಲಿ ಉಪ ಯೋಗಿಸಬಹುದು ಅಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹಾಗೂ ಕೆಲವೊಂದಷ್ಟು ಜನರಿಗೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯೂ ಸಹ ತಿಳಿದಿರುವುದಿಲ್ಲ.
ಬದಲಿಗೆ ಅವರು ಹೆಚ್ಚು ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ ಖರ್ಚು ಮಾಡುತ್ತಿರುತ್ತಾರೆ. ಹಾಗೆ ಮಾಡುವುದರ ಬದಲು ಈಗ ನಾವು ಹೇಳುವಂತಹ ಕೆಲವೊಂದು ಟಿಪ್ ಗಳನ್ನು ಅನುಸರಿಸುವುದರಿಂದ ನಿಮ್ಮ ಸಿಲಿಂಡರ್ ಹೆಚ್ಚು ದಿನಗಳ ವರೆಗೆ ಬಾಳಿಕೆಗೆ ಬರುತ್ತದೆ ಹಾಗಾದರೆ ಆ ಟಿಪ್ ಗಳು ಯಾವುದು ಎನ್ನುವುದನ್ನು ಈ ಕೆಳಗಿನಂತೆ ತಿಳಿಯೋಣ.
* ಸಾಮಾನ್ಯವಾಗಿ ನಾವು ಯಾವುದೇ ರೀತಿಯ ಕಾಳುಗಳನ್ನು ಬೇಯಿಸಲು ಒಂದು ಪಾತ್ರೆಯಲ್ಲಿ ಹಾಕಿ ಹಾಗೆಯೇ ಬೇಯಿಸುತ್ತಿರುತ್ತೇವೆ ಆದರೆ ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಹೆಚ್ಚು ಖರ್ಚಾಗುತ್ತದೆ ಬದಲಿಗೆ ಆ ಪಾತ್ರೆಯಲ್ಲಿ ಕಾಳುಗಳನ್ನು ಇಡುವುದರಿಂದ ಅದರ ಒಳಗಡೆ ಇರುವಂತಹ ಬಿಸಿಯ ಅಂಶವೆಲ್ಲವೂ ಕೂಡ ತಕ್ಷಣವೇ ಹಾರಿ ಹೋಗುತ್ತದೆ ಅದರ ಬದಲು ಕುಕ್ಕರ್ ಒಳಗಡೆ ಕಾಳುಗಳನ್ನು ಹಾಕಿ ಬೇಯಿಸುವುದರಿಂದ ಗ್ಯಾಸ್ ಸಿಲಿಂಡರ್ ಕಡಿಮೆ ಖರ್ಚಾಗುತ್ತದೆ ಹೆಚ್ಚು ಅವಶ್ಯಕತೆ ಇರುವುದಿಲ್ಲ.
* ನಾವು ರಾತ್ರಿ ಸಮಯ ಅಡುಗೆ ಮಾಡಿ ಸ್ಟವ್ ಆಫ್ ಮಾಡಿರುತ್ತೇವೆ ಆದರೆ ಬೆಳಗ್ಗೆ ಎದ್ದ ತಕ್ಷಣ ನಾವು ರೆಗುಲೇಟರ್ ನಿಂದ ಸ್ಟವ್ ಹಚ್ಚಿದರೆ ಅದು ತಕ್ಷಣವೇ ಹತ್ತುವುದಿಲ್ಲ ಬದಲಿಗೆ ಅದನ್ನು ಆನ್ ಮಾಡಿ ನಾವು ಸುಮ್ಮನೆ ರೆಗುಲೇಟರ್ ನಿಂದ ಹಚ್ಚುತ್ತಿರುತ್ತೇವೆ ಹೀಗೆ ಮಾಡುವುದ ರಿಂದ ಹೆಚ್ಚು ಸಿಲಿಂಡರ್ ಖರ್ಚಾಗುತ್ತದೆ. ಅದರ ಬದಲು ಬೆಳಗ್ಗೆ ಎದ್ದ ತಕ್ಷಣ ನೀವು ಸ್ಟವ್ ಹಚ್ಚಬೇಕು ಎಂದರೆ ಕಡ್ಡಿ ಪೆಟ್ಟಿಗೆಯ ಸಹಾಯದಿಂದ ಹಚ್ಚಿ ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಉಳಿತಾಯವಾಗುತ್ತದೆ.
ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!
* ಹಾಗೂ ನೀವು ಸ್ಟವ್ ಮೇಲೆ ಯಾವುದಾದರೂ ಆಹಾರವನ್ನು ತಯಾರಿಸಬೇಕು ಎಂದರೆ ಆ ಒಂದು ಪಾತ್ರೆಯಿಂದ ಆಚೆ ಬರುವ ರೀತಿ ಉರಿ ಬರುತ್ತಿದ್ದರೆ. ಆ ಪಾತ್ರೆಯನ್ನು ಇಡಬೇಡಿ ಬದಲಿಗೆ ಅದರ ಬಿಸಿ ಅಂಶ ಹೊರಗಡೆ ಹೋಗುತ್ತದೆ. ಬದಲಿಗೆ ದೊಡ್ಡ ಪಾತ್ರೆಯನ್ನು ಇಟ್ಟು ನೀವು ಸ್ಟವ್ ಮೇಲೆ ಇಡುವುದರಿಂದ ಯಾವುದೇ ಆಹಾರ ಪದಾರ್ಥವಾಗಲಿ ಅದು ಬೇಗನೆ ತಯಾರಾಗುತ್ತದೆ. ಇದರಿಂದ ಗ್ಯಾಸ್ ಸಿಲಿಂಡರ್ ಬಳಕೆಯೂ ಕೂಡ ಉಳಿತಾಯವಾಗುತ್ತದೆ.
* ಹಾಗೂ ಫ್ರಿಡ್ಜ್ ನಲ್ಲಿ ಹಾಲನ್ನು ಇಟ್ಟಿದ್ದರೆ ಅದನ್ನು ತಕ್ಷಣವೇ ತೆಗೆದು ಸ್ಟವ್ ಮೇಲೆ ಇಡಬೇಡಿ, ಬದಲಿಗೆ ಅದನ್ನು 10 ನಿಮಿಷಗಳ ಕಾಲ ಹೊರಗೆ ಇಟ್ಟು ಆನಂತರ ಉಪಯೋಗಿಸಿ ಅಥವಾ ನಿಮಗೆ ಸಮಯ ಇಲ್ಲ ಅಂದರೆ ಒಂದು ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಹಾಕಿ ಆನಂತರ ಹಾಲನ್ನು ಬೇರೆ ಪಾತ್ರೆಯಲ್ಲಿ ಕಾಯಲು ಬಿಡಿ ಈ ರೀತಿ ಮಾಡುವುದರಿಂದ ಹೆಚ್ಚು ಗ್ಯಾಸ್ ಸಿಲಿಂಡರ್ ಅವಶ್ಯಕತೆ ಇರುವುದಿಲ್ಲ.
ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!
* ಸಾಮಾನ್ಯವಾಗಿ ಪ್ರತಿಯೊಬ್ಬರು ಮಾಡುವಂತಹ ತಪ್ಪು ಏನು ಎಂದರೆ ಯಾವುದೇ ಪಾತ್ರೆಯನ್ನು ತೊಳೆದ ತಕ್ಷಣ ಅದನ್ನು ಸ್ಟವ್ ಮೇಲೆ ಇಟ್ಟು ಅದು ನೀರು ಹೋಗುವವರೆಗೆ ಬಿಸಿ ಮಾಡುತ್ತಿರುತ್ತಾರೆ ಆದರೆ ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಅವಶ್ಯಕತೆ ಹೆಚ್ಚಾಗುತ್ತದೆ. ಅಂದರೆ ಹೆಚ್ಚು ಗ್ಯಾಸ್ ಬಳಕೆಯಾಗುತ್ತದೆ ಬದಲಿಗೆ ಆ ಪಾತ್ರೆಯನ್ನು ಒಣ ಬಟ್ಟೆಯಲ್ಲಿ ವರೆಸಿ ಆನಂತರ ಅದನ್ನು ಸ್ಟವ್ ಮೇಲೆ ಇಡುವುದು ಒಳ್ಳೆಯದು ಈ ರೀತಿ ಮಾಡುವುದರಿಂದ ಗ್ಯಾಸ್ ಸಿಲಿಂಡರ್ ಉಳಿತಾಯ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.