Home Entertainment ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

0
ಅಣ್ಣಾವ್ರ ಜೊತೆ ನಟಿಸಲು ಅವಕಾಶ ಸಿಕ್ಕರು ಅದನ್ನು ನಿರಾಕರಿಸಿದ ಏಕೈಕ ನಟಿ ಅಂದರೆ ಅದು ಶೃತಿ ಅವರು ಮಾತ್ರ.

ಕನ್ನಡದ ಕಲಾ ಕಂಠೀರವ, ಮೇರುನಟ ಅಣ್ಣಾವ್ರು ಎಂತಹ ಅದ್ಭುತ ಕಲಾವಿದ ಎನ್ನುವುದು ಪದಗಳಲ್ಲಿ ವಿವರಿಸುವ ಸಣ್ಣ ಮಾತಲ್ಲ. ಇಡೀ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟಕ್ಕೆ ಹೋಲಿಸಿದರೂ ಸಹ ಎಲ್ಲಾ ಪಾತ್ರಗಳಿಗೂ ಹೊಂದಬಲ್ಲ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಹೆಮ್ಮೆಯ ಡಾ. ರಾಜಕುಮಾರ್ ಅವರು ಮಾತ್ರ. ಮೂಲತಃ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅಣ್ಣಾವ್ರು ಸಿನಿಮಾಗಳಲ್ಲಿ ಅಭಿನಯಿಸಲು ಶುರು ಮಾಡಿದ ನಂತರ ಕನ್ನಡದಲ್ಲಿ ಸಿನಿಮಾ ಯುಗ ಆರಂಭವಾಯಿತು ಎನ್ನಬಹುದು.

ಕನ್ನಡದ ಚಂದನ ವನ ಇಂದು ವಿಶ್ವ ಮಟ್ಟಕ್ಕೆ ದಾಖಲೆ ಮಾಡುತ್ತಿದೆ ಎಂದರೆ ಇದಕ್ಕೆ ಮೂಲವಾಗಿ ಅಡಿಪಾಯ ಹಾಕಿದವರೇ ಮುತ್ತುರಾಜ. ಅಭಿನಯದಲ್ಲಿ ಇವರೆಂತಹ ಭಯಂಕರ ನಟ ಎನ್ನುವುದನ್ನು ಹೇಳುವುದೇ ಬೇಡ ಅವರ ಸಿನಿಮಾಗಳನ್ನು ನೋಡಿದರೆ ಸಾಕು ನೋಡುವವರು ಮೈ ಮರೆತು ತಾವೂ ಸಹಾ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಪೊಲೀಸ್ ಪಾತ್ರವಾಗಲಿ, ಲಾಯರ್ ಪಾತ್ರವಾಗಲಿ, ಲೆಕ್ಚರರ್ ಪಾತ್ರವಾಗಲಿ, ರೈತನ ಪಾತ್ರವೇ ಆಗಲಿ ಅಥವಾ ರಾಜನ ಪಾತ್ರವೇ ಆಗಲಿ ಎಲ್ಲಾ ಪಾತ್ರಗಳಿಗೂ ಕೂಡ ಜೀವ ತುಂಬುತ್ತಿದ್ದರು ಅಣ್ಣಾವ್ರು.

ಅಣ್ಣಾವ್ರ ಬಾಯಿಯಲ್ಲಿ ಬರುತ್ತಿದ್ದ ಅದ್ಭುತವಾದ ಕನ್ನಡ ಅವರ ಸುಶ್ರಾವ್ಯ ಕಂಠ, ಪಾತ್ರಕ್ಕೆ ತಕ್ಕ ಹಾಗೆ ಹಾವಭಾವ ಎಲ್ಲವೂ ಕೂಡ ನೋಡುಗನನ್ನು ಮೋಡಿ ಮಾಡುತ್ತಿತ್ತು. ಅಭಿಮಾನಿಗಳನ್ನೇ ದೇವರು ಎಂದು ಇವರು ಕರೆದರೆ ಇಡೀ ಕರ್ನಾಟಕ ಇವರನ್ನು ಅಣ್ಣ ಎಂದು ಕರೆಯಿತು. ಇಂತಹ ಒಬ್ಬ ಅದ್ಭುತ ನಟನ ಜೊತೆ ಅಭಿನಯಿಸುವ ಅವಕಾಶ ಸಿಗುತ್ತದೆ ಎಂದರೆ ಯಾರು ಕೂಡ ಮಿಸ್ ಮಾಡಿಕೊಳ್ಳುವುದಿಲ್ಲ. ಇವರ ಸಿನಿಮಾದಲ್ಲಿ ಯಾವುದಾದರೂ ಸಣ್ಣ ಪಾತ್ರ ಸಿಕ್ಕರೂ ತಪ್ಪದೆ ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು.

ಆದರೆ ಈ ಒಬ್ಬ ನಟಿ ಮಾತ್ರ ಅಣ್ಣಾವ್ರ ಜೊತೆ ಅಭಿನಯಿಸುವ ಅದೃಷ್ಟವನ್ನು ತಾವಾಗೇ ಕಳೆದುಕೊಂಡಿದ್ದಾರೆ. ಇದು ಬೇರೆ ಯಾರು ಅಲ್ಲ ಕನ್ನಡದ ಕಣ್ಣೀರಿನ ನಟಿ ಎಂದ ಖ್ಯಾತಿ ಆಗಿರುವ ಶ್ರುತಿ ಅವರು. ಶೃತಿ ಅವರು ಇಂದು ಕರ್ನಾಟಕದ ಮನೆ ಮಗಳಂತೆ ಎಲ್ಲರಿಗೂ ಆಪ್ತರಾಗಿದ್ದಾರೆ ಯಾಕೆಂದರೆ ಇವರು ಅಭಿನಯಿಸುತ್ತಿದ್ದಿದ್ದು ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾ ಹಾಗೂ ಅದರಲ್ಲೂ ಸಾಂಸಾರಿಕ ಚಿತ್ರಗಳಲ್ಲಿ ಅಭಿನಯಿಸಿ ಹೆಣ್ಣುಮಕ್ಕಳ ಭಾವನೆಗಳನ್ನು ಕಷ್ಟಗಳನ್ನು ಎಲ್ಲರ ಕಣ್ಣು ಕಟ್ಟುವ ಹಾಗೆ ಅಭಿನಯಿಸಿ ತೋರಿಸುತ್ತಿದ್ದರು ಇವರು ಇಂದಿಗೂ ಕೂಡ ಅನೇಕರ ಫೇವರೆಟ್ ಹೀರೋಯಿನ್.

ಶಿವಣ್ಣ ಹಾಗೂ ರಾಘಣ್ಣನ ಜೊತೆ ನಾಯಕಿ ಆಗಿ ಅಭಿನಯಿಸಿರುವ ಶ್ರುತಿ ಅವರಿಗೆ ಅಣ್ಣಾವ್ರ ಜೊತೆ ಅಭಿನಯಿಸುವ ಅದೃಷ್ಟ ಕೂಡ ದೊರೆತಿತ್ತು. ಅದು ಕೂಡ ಅವರ ಜೀವನ ಚೈತ್ರ ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಶ್ರುತಿ ಅವರು ನಿಭಾಯಿಸಬೇಕಿತ್ತು ಆ ಪಾತ್ರಕ್ಕೆ ಸ್ವತಃ ಅಣ್ಣಾವ್ರೇ ಶ್ರುತಿ ಅವರನ್ನು ಸೂಚಿಸಿದ್ದರು. ಆದರೆ ಆ ಸಮಯದಲ್ಲಿ ಶ್ರುತಿ ಅವರು ಬಹಳ ಬ್ಯುಸಿ ಇದ್ದ ಕಾರಣ ಡೇಟ್ ಮ್ಯಾಚ್ ಆಗದೆ ಈ ಸಿನಿಮಾದಲ್ಲಿ ಅವರು ಅಭಿನಯಿಸಲು ಸಾಧ್ಯವಾಗಲಿಲ್ಲ ನಂತರ ಅವರ ಪಾತ್ರವನ್ನು ಬೇರೆ ಒಬ್ಬ ನಟಿ ಅಭಿನಯಿಸಿದರು.

ಆದರೆ ಆ ಬಗ್ಗೆ ಇಂದಿಗೂ ಕೂಡ ಪಶ್ಚಾತಾಪ ಪಡೆಯುವ ಶ್ರುತಿ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಇದರ ಬಗ್ಗೆ ಹೇಳಿಕೊಂಡು ಬೇಸರ ಪಟ್ಟಿಕೊಂಡಿದ್ದಾರೆ. ಆ ಸಿನಿಮಾದ ಬಳಿಕ ಅಣ್ಣಾವ್ರ ಜೊತೆ ಅಭಿನಯಿಸುವ ಮತ್ತೊಂದು ಅವಕಾಶ ಅವರಿಗೆ ಸಿಗಲೆ ಇಲ್ಲ ಅಂತ. ಸದ್ಯಕ್ಕೆ ಶೃತಿ ಅವರು ಕನ್ನಡದ ಕಿರುತೆರೆ ಕಾರ್ಯಕ್ರಮ ಒಂದರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಣ್ಣಾವ್ರ ಜೊತೆ ಅಭಿನಯಿಸಬೇಕಾದರೆ ಪುಣ್ಯ ಮಾಡಿರಬೇಕು ಎಂದು ಕೆಲವು ನೆಟ್ಟಿಗರು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here