ಮೇಘನಾ ರಾಜ್ ನಂತರ ಮತ್ತೊರ್ವ ನಟಿ ಪತಿ ಮತ್ತು ಮಗನ ಹೆಸರನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ ಆ ನಟಿ ಯಾರು ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವಾರಗಳಿಂದಲೂ ಎಲ್ಲೇ ನೋಡಿದರೂ ಕೂಡ ಮೇಘನಾ ರಾಜ್ ಅವರ ಎರಡನೇ ಮದುವೆಯ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿಗಳು ಹರಿದಾಡುತ್ತಿದ್ದವು. ಈ ಎಲ್ಲಾ ಒದಂತಿಗಳಿಂದ ಮೇಘನಾ ರಾಜ್ ಅವರು ತುಂಬಾನೇ ಕಂಗೆಟ್ಟು ಹೋಗಿದ್ದರು ಅಷ್ಟೇ ಅಲ್ಲದೆ ತಾವು ಎರಡನೇ ಮದುವೆ ಆಗುತ್ತಿಲ್ಲ ಎಂಬ ವಿಚಾರವನ್ನು ಎಷ್ಟೇ ಬಾರಿ ಸ್ಪಷ್ಟ ಪಡಿಸಿದರು ಕೂಡ ಅದಕ್ಕೆ ಕೆಲವು ನೆಟ್ಟಿಗರು ಮಾತ್ರ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರ ಬೆನ್ನೆಲೆ ಮೇಘನಾ ರಾಜ್ ಅವರು ತಮ್ಮ ಪತಿ ಮತ್ತು ಮಗನ ಹೆಸರನ್ನು ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಈ ಎಲ್ಲ ವಿಚಾರಗಳಿಗೂ ಕೂಡ ತೆರೆ ಎಳೆಯುತ್ತಾರೆ.

ಹೌದು ಮೇಘನಾ ರಾಜ್ ಅವರು ತಮ್ಮ ಕೈನ ಮೇಲೆ ಚಿರು ಮತ್ತು ರಾಯಲ್ ಎಂಬ ಹೆಸರನ್ನು ಟ್ಯಾಟೋ ಹಾಕಿಸಿಕೊಳ್ಳುತ್ತಾರೆ ಇದರ ಜೊತೆಗೆ ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು. ಇವರಿಬ್ಬರೂ ಕೂಡ ನನ್ನ ಬದುಕಿಗೆ ಮತ್ತು ಜೀವನಕ್ಕೆ ಬಹಳ ಮುಖ್ಯವಾದ ವ್ಯಕ್ತಿಗಳು ಕೊನೆಯ ಉಸಿರು ಇರುವವರೆಗೂ ಇವರಿಬ್ಬರನ್ನು ನಾನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದರು. ಈ ರೀತಿ ಮಾಡುವುದರ ಮೂಲಕ ಮೇಘನಾ ರಾಜ್ ಅವರು ತಮ್ಮ ಎರಡನೇ ಮದುವೆಯ ವಿಚಾರದ ಬಗ್ಗೆ ಇದ್ದಂತಹ ವದಂತಿಗಳಿಗೆ ಸ್ಪಷ್ಟನೆಯನ್ನು ನೀಡಿದರು. ಈ ವಿಚಾರ ತಣ್ಣಗಾಗುತ್ತಿದ್ದ ಹಾಗೆ ಇದೀಗ ಮತ್ತೊಬ್ಬ ನಟಿ ಕೂಡ ತಮ್ಮ ಪತಿ ಮತ್ತು ಮಗನ ಹೆಸರನ್ನು ಹಾಕಿಸಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.

ಹೌದು ಶ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮೊಟ್ಟಮೊದಲ ಬಾರಿಗೆ ಕಿರುತೆರೆಯ ಧಾರವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಇವರು ತಮ್ಮ ಮಾರುತಿ ಬದುಕನ್ನು ಪ್ರಾರಂಭ ಮಾಡುತ್ತಾರೆ. ಕಿರುತೆರೆಯಲ್ಲಿ ಬಹುದೊಡ್ಡ ಯಶಸ್ವಿ ಹೆಸರು ಎಲ್ಲವೂ ಲಭಿಸುತ್ತದೆ ತದನಂತರ ಬೆಳ್ಳಿ ತಯಾರಿಗೆ ಪಾದಾರ್ಪಣೆ ಮಾಡಿ ಹಲವಾರು ಸಿನಿಮಾದಲ್ಲಿ ಪೋಷಕ ನಟಿಯಾಗಿ ಮತ್ತು ಸಹೋದರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಕೂಡ ಹೋಗಿ ಬಂದಿದ್ದರು ರಿಯಾಲಿಟಿ ಶೋ ಹಾಗೂ ಮಜಾ ಟಾಕೀಸ್ ಎಂಬ ಜನಪ್ರಿಯ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದರು ಅದ್ಭುತ ನಿರೂಪಕಿಯು ಕೂಡ ಸದ್ಯಕ್ಕೆ ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಶ್ವೇತಾ ಚಂಗಪ್ಪ ಅವರು ತಮ್ಮ ಪತಿ ಕಿರಣ್ ಅಪ್ಪಚ್ಚು ಅವರನ್ನು ತುಂಬಾನೇ ಪ್ರೀತಿಸುತ್ತಾರೆ ಇವರು ಸಾಫ್ಟ್ವೇರ್ ಇಂಜಿನಿಯರ್.

ಶ್ವೇತ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ದಂಪತಿಗಳಿಗೆ ಜಿಯಾನ್ ಅಯ್ಯಪ್ಪ ಎಂಬ ಗಂಡು ಮಗನು ಕೂಡ ಇದ್ದಾನೆ ಸದ್ಯಕ್ಕೆ ಶ್ವೇತ ಚಂಗಪ್ಪ ಅವರು ತಮ್ಮ ಪತಿ ಕಿರಣ್ ಹಾಗೂ ಮಗ ಜಿಯಾನ್ ಅಯ್ಯಪ್ಪ ಅವರ ಹೆಸರನ್ನು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವೀಡಿಯೋಸ್ ಮತ್ತು ಫೋಟೋಸ್ ಗಳನ್ನು ಶ್ವೇತ ಚಂಗಪ್ಪ ಅವರೇ ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಸ್ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಮೇಘನಾ ರಾಜ್ ಅವರನ್ನು ನೋಡಿದ ನಂತರ ನೀವು ಈ ರೀತಿ ಮಾಡಿದ್ದೀರಿ ಎಂದು ಕಾಮೆಂಟ್ ಹಾಕಿದ್ದಾರೆ. ಆದರೆ ಇದು ಯಾವುದಕ್ಕೂ ಕೂಡ ಶ್ವೇತ ಚಂಗಪ್ಪ ಅವರು ಪ್ರತಿಕ್ರಿಯೆ ನೀಡಿಲ್ಲ ಸದ್ಯಕ್ಕೆ ನಟಿಮಣಿಯರು ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಹೊಸದೊಂದು ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದಾರೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Leave a Comment

WhatsApp Group Join Now
Telegram Group Join Now