ಕಾಂಗ್ರೆಸ್ ಪಾಳಯದಲ್ಲಿ ಪ್ರಭಾವಿ ರಾಜಕಾರಣಿ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಬದುಕು ಖಂಡಿತವಾಗಿಯೂ ಒಂದು ಯಶೋಗಾಥೆ ಎಂದರೆ ತಪ್ಪಲ್ಲ. ಯಾಕೆಂದರೆ ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಇಂದು ಅತಿ ಹೆಚ್ಚು ಬಾರಿ ಕರ್ನಾಟಕದ ಹಣಕಾಸು ಮಂತ್ರಿ ಆದ ಖ್ಯಾತಿಗೆ ಒಳಗಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಆಗಿಯೂ ಕೂಡ ಅಧಿಕಾರ ಹೊಂದಿದ್ದ ಇವರು ಆ ಸಮಯದಲ್ಲಿ ಪ್ರಜೆಗಳಿಗೆ ಕೊಟ್ಟ ಭಾಗ್ಯಗಳು ಕೂಡ ಇನ್ನು ಎಷ್ಟೇ ಪಕ್ಷ ಅಧಿಕಾರಕ್ಕೆ ಬಂದರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಇಲ್ಲಿಯವರೆಗಿನ ಸಿದ್ದರಾಮಯ್ಯ ಅವರ ಬದುಕಿನ ಜರ್ನಿಯ ಒಂದು ಝಲಕ್ ಅನ್ನು ಸಾಧಕರ ವೇದಿಕೆ ಎನಿಸಿಕೊಂಡಿರುವ ಜೀ ಕನ್ನಡ ವಾಹಿನಿ ಮೂಲಕ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಣ್ಣದಾಗಿ ನಾವು ನೋಡಿದ್ದೇವೆ.
ಅದನ್ನು ಅಂದು ನೋಡಿದ ಪ್ರತಿಯೊಬ್ಬರು ಯೋಚನೆ ಮಾಡಿರುತ್ತಾರೆ ಇದು ಯಾವ ಸಿನಿಮಾದ ಕಥೆಗಿಂತಲೂ ಕಡಿಮೆ ಇಲ್ಲ ಎಂದು. ಹಾಗಾಗಿ ಕನ್ನಡ ಸಿನಿಮಾ ರಂಗದವರು ಹೇಗೆ ಬಾಲಿವುಡ್ ಅಲ್ಲಿ ಅಲ್ಲಿ ಭಾರತೀಯ ಗಣ್ಯ ವ್ಯಕ್ತಿಗಳ ಬಯೋಪಿಕ್ ಮಾಡುತ್ತಿದ್ದಾರೆ ಹಾಗೇ ಕರ್ನಾಟಕದಲ್ಲಿ ಕೂಡ ಇದೇ ರೀತಿ ಒಂದು ಪ್ರಯತ್ನ ಮಾಡುವ ಎನ್ನುವ ಯೋಚನೆಯಲ್ಲಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಕ್ಕೆ ಸಿಕ್ಕ ಸಿದ್ದು ಅವರನ್ನು ಪತ್ರಿಕಾ ರಂಗದವರು ಪ್ರಶ್ನಿಸಿದ್ದಾರೆ. ಮೊದಲಿಗೆ ರಾಜಕೀಯ ಹಾಗೂ ನೇಮಕಾತಿಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ ಮಾಧ್ಯಮದವರು ನಂತರ ಸಿದ್ದರಾಮಯ್ಯ ಅವರ ಸಿನಿಮಾ ಬರುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಮಾಧ್ಯಮದವರು ನಿಮ್ಮ ಬಯೋಪಿಕ್ ಬರುತ್ತಿದೆಯಂತೆ ಹೌದಾ.? ಅದರಲ್ಲಿ ನೀವೇ ಆಕ್ಟಿಂಗ್ ಮಾಡುತ್ತಿದ್ದೀರಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯ ಅವರು ಹೌದು ಕನಕಗಿರಿ ಕ್ಷೇತ್ರದ ಜೊತೆ ಕೆಲವರು ಸಿನಿಮಾ ಮಾಡುವುದಾಗಿ ಕೇಳಿಕೊಂಡು ಬಂದಿದ್ದರು, ಮಾತನಾಡಿ ಹೋಗಿದ್ದಾರೆ. ಆದರೆ ಸಿನಿಮಾದಲ್ಲಿ ನಾನು ಅಭಿನಯಿಸುವುದಿಲ್ಲ ಯಾಕೆಂದರೆ ನನಗೆ ನಟನೆ ಮಾಡಲು ಬರುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ಈ ರೀತಿ ಮಾತುಕತೆ ಆಗಿರುವುದನ್ನು ಸಿದ್ದರಾಮಯ್ಯ ಅವರೇ ಧೃಡಪಡಿಸಿರುವುದರಿಂದ ಸದ್ಯದಲ್ಲೇ ಸಿದ್ದು ಸಿನಿಮಾ ತೆರೆ ಮೇಲೆ ಬರುವುದರಲ್ಲಿ ಅನುಮಾನವಿಲ್ಲ ಎನಿಸುತ್ತದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕಂಡಂತೆ ಸಿದ್ದರಾಮಯ್ಯ ಅವರು ಬಾಲ್ಯದಲ್ಲಿ ಶಾಲೆಗೆ ಹೋಗಿರಲಿಲ್ಲ, ಬಳಿಕ ಶಾಲಾ ಶಿಕ್ಷಕರೊಬ್ಬರು ಅವರನ್ನು ಗುರುತಿಸಿ ನೇರವಾಗಿ ಐದನೇ ತರಗತಿಗೆ ಕೂರಿಸಿದ್ದರಂತೆ.
ಇದಾದ ಬಳಿಕ ಸಿದ್ದು ಅವರ ಬದುಕು ಬದಲಾಗಿದ್ದೆ ಒಂದು ರೋಚಕ ಕಥೆ. ಮೈಸೂರಿನಲ್ಲಿ ಬಿಎ ಮತ್ತು ಎಲ್ ಎಲ್ ಬಿ ವ್ಯಾಸಂಗವನ್ನು ಕೂಡ ಪೂರೈಸಿದ ಸಿದ್ದರಾಮಯ್ಯ ಅವರು ನಂತರ ಆಕರ್ಷಿತರಾಗಿದ್ದು ರಾಜಕೀಯದ ಕಡೆಗೆ. ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಹಲವು ವರ್ಷಗಳ ಕಾಲ ಇದ್ದ ಸಿದ್ದರಾಮಯ್ಯ ಅವರು ದೇವೇಗೌಡ ಅವರಿಗೆ ಪರಮ ಆಪ್ತರಾಗಿದ್ದರು. ನಂತರ ಪಕ್ಷಾಂತರ ಆದ ಸಿದ್ದರಾಮಯ್ಯ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡರು.
ಕುಟುಂಬದ ವಿಚಾರವಾಗಿ ಹೇಳುವುದಾದರೂ ಕೂಡ ಇನ್ನೂ ಸಹ ಅಣ್ಣ-ತಮ್ಮಂದಿರು ಒಗ್ಗಟ್ಟಿನಿಂದ ಇರುವ ಕುಟುಂಬ ಮತ್ತು ತಾವು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ತಮ್ಮ ಮೂಲ ಸಂಪ್ರದಾಯಗಳನ್ನು ಬಿಡದೆ ಹುಟ್ಟೂರಿನಲ್ಲಿ ಮಕ್ಕಳ ಮದುವೆ ಮುಂತಾದ ಕಾರ್ಯಗಳನ್ನು ಮಾಡುವ ಸಿದ್ದರಾಮಯ್ಯ ಅವರ ಸಿಂಪ್ಲಿಸಿಟಿ ಎಲ್ಲವು ಸೇರಿದರೆ ನಿಜಕ್ಕೂ ಇದೊಂದು ಸ್ಪೂರ್ತಿದಾಯಕ ಆದರ್ಶ ಕಥೆ ಆಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗಾಗಿ ಇವರ ಬಯೋಪಿಕ್ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ.
ಇನ್ನು ಸಿದ್ದರಾಮಯ್ಯ ಸಿನಿಮಾವನ್ನು ಮಾಡುತ್ತಿರುವ ನಟ ತಮಿಳುನಾಡು ವಿಜಯ್ ಸೇತುಪತಿ, ನೋಡುವುದಕ್ಕೆ ಸಿದ್ಧರಾಮಯ್ಯ ಅವರನ್ನೇ ಹೋಲಿಕೆ ಆಗುವಂತಹ ವಿಜಯ್ ಸೇತುಪತಿ ಸಿದ್ದರಾಮಯ್ಯ ರೋಲ್ ಹೇಗೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ ಕನ್ನಡದಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ತುಂಬಾನೇ ಕಡಿಮೆ ಇದೀಗ ಸಿದ್ದರಾಮಯ್ಯ ಅವರ ಬಯೋಪಿಕ್ ಮೂಡಿ ಬರುತ್ತಿರುವುದು ನಿಜಕ್ಕೂ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.