ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ

 

ಪ್ರಿಯಾ ಜೆ ಆಚಾರ್ ಹಾಗೂ ಸಿದ್ದು ಮೂಲಿ ಮನೆ ಅಂದರೆ ಹೆಚ್ಚಿನ ಜನರಿಗೆ ತಿಳಿಯುವುದಿಲ್ಲವೋ ಏನೋ ಆದರೆ ಗಟ್ಟಿಮೇಳ ಧಾರಾವಾಹಿ ಅಧಿತಿ ಮತ್ತು ಪಾರು ಧಾರವಾಹಿಯ ಆದಿ ತಮ್ಮನ ಪಾತ್ರಧಾರಿ ಪ್ರೀತು ಎಂದರೆ ಎಲ್ಲರಿಗೂ ಇವರು ಚಿರಪಂಚರಂತೆ ತೋರುತ್ತಾರೆ. ಯಾಕೆಂದರೆ ಈ ಎರಡು ಪಾತ್ರಗಳು ತಮ್ಮ ಅದ್ಭುತ ಅಭಿನಯದಿಂದ ಜನಮನ ಸೆಳೆದಿವೆ, ಅಲ್ಲದೆ ಪ್ರತಿವರ್ಷದ ಝೀ ಕುಟುಂಬ ಅವಾರ್ಡಿನ ಬೆಸ್ಟ್ ಸಹೋದರಿ ಹಾಗೂ ಸಹೋದರ ಅವಾರ್ಡ್ ಇವರಿಗೆ ಹೋಗುತ್ತಿದೆ.

ಇಬ್ಬರು ಬೇರೆ ಬೇರೆ ಧಾರಾವಾಹಿ ಕಲಾವಿದರು ಆಗಿದ್ದರು ಕೂಡ ಇವರಿಬ್ಬರ ನಡುವೆ ಪ್ರೀತಿ ಮೂಡಿದೆ, ಜೀ ಕನ್ನಡ ವಾಹಿನಿಯು ಡಿಕೆಡಿ ಎನ್ನುವ ಡ್ಯಾನ್ಸಿಂಗ್ ಕಾರ್ಯಕ್ರಮವನ್ನು ನಡೆಸುತ್ತದೆ. ಇದರಲ್ಲಿ ಒಮ್ಮೊಮ್ಮೆ ತಮ್ಮ ವಾಹಿನಿಯ ಕಲಾವಿದರನ್ನು ಸ್ಪರ್ಧಿಯಾಗಿ ಆರಿಸಿಕೊಳ್ಳಲಾಗುತ್ತದೆ. ಅದೇ ರೀತಿ ಕಳೆದ ಬಾರಿ ನಡೆದ ಡಿಕೆಡಿ ಸೀಸನ್ ಅಲ್ಲಿ ಗಟ್ಟಿಮೇಳ ತಂಡದಿಂದ ಅಧಿತಿ ಅವರು ಮತ್ತು ಪಾರು ಧಾರವಾಹಿಯಿಂದ ಸಿದ್ದು ಅವರು ಕಂಟೇಷ್ಟೆಂಟ್ ಗಳಾಗಿ ಭಾಗಿಯಾಗಿದ್ದರು.

ಆ ವೇಳೆ ಇವರಿಬ್ಬರ ನಡುವೆ ಸ್ನೇಹವಾಗಿದೆ ಆದರೆ ಈ ಸ್ನೇಹ ಪ್ರೀತಿಯಾಗಿ ತಿರುಗಿದ್ದು ಇವರಿಬ್ಬರ ಧಮಾಕ ಚಿತ್ರದಿಂದ. ಇಬ್ಬರು ಸಹ ಒಟ್ಟಿಗೆ ಧಮಾಕ ಎನ್ನುವ ಚಿತ್ರದಲ್ಲಿ ಅಭಿನಯಿಸಿದರು. ಧಮಾಕ ಚಿತ್ರದ ಹಳ್ಳಿ ಸ್ಟೈಲಿ ಹಾಡೊಂದು ಈ ವರ್ಷ ಬಹಳ ಫೇಮಸ್ ಆಗಿತ್ತು ಎಲ್ಲರ ಸ್ಟೋರಿ ಮತ್ತು ರೀಲ್ಸ್ ಗಳಲ್ಲೂ ಹರಿದಾಡಿತ್ತು. ಈ ಸಿನಿಮಾ ಶೂಟಿಂಗ್ ಮಾಡುವ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿ ಅದು ಕುಟುಂಬಕ್ಕೆ ತಿಳಿದು ಇಬ್ಬರು ಆಫೀಷಿಯಲ್ ಆಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು.

ಆದರೆ ಇದುವರೆಗೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಕೊಂಡಿಲ್ಲವಂತೆ ಅವಕಾಶವನ್ನು ಜೀ ಕನ್ನಡ ವೇದಿಕೆ ಮಾಡಿಕೊಟ್ಟಿದೆ. ಜೀ ಕನ್ನಡ ವಾಹಿನಿ ಹೊಸ ವರ್ಷದ ಪ್ರಯುಕ್ತ ತಮ್ಮ ಕುಟುಂಬದ ಎಲ್ಲರನ್ನು ಸೇರಿಸಿ ಹೊಸ ವರ್ಷದ ಶುಭಾರಂಭ ಎನ್ನುವ ಕಾರ್ಯಕ್ರಮವನ್ನು ನಡೆಸಿತ್ತು.

ಅಲ್ಲಿ ಸಿದ್ದು ಅವರು ಪ್ರಿಯಾ ಆಚಾರ್ ಅವರನ್ನು ವೇದಿಕೆ ಮೇಲೆ ಕೂರಿಸಿ ವಿಶೇಷವಾಗಿ ಪ್ರಪೋಸ್ ಮಾಡಿದ್ದಾರೆ ಅವರಿಗೆ ಸ್ಪೆಷಲ್ ಫೀಲ್ ಮಾಡಿಸಲು ನಾಲ್ಕೈದು ಬೊಂಬೆಗಳನ್ನು ಗಿಫ್ಟ್ ಮಾಡಿ ಮತ್ತು ಬೆಳ್ಳಿ ಕಾಲುಗೆಜ್ಜೆಯನ್ನು ತಾವೇ ತೊಡಿಸುವ ಮೂಲಕ ತೊಡಿಸುವ ಮುನ್ನ ಕವನಗಳ ಸಾಲುಗಳನ್ನು ಹೇಳುವ ಮೂಲಕ ಮತ್ತೊಮ್ಮೆ ಪ್ರಿಯಾ ಅವರ ಮನೆಗೆದ್ದಿದ್ದಾರೆ. ಇವರ ಈ ಕ್ಯೂಟ್ ಪ್ರಪೋಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಸಿದ್ದು ಅವರು ಸಹ ತಮ್ಮ instagram ಪೇಜ್ ನಲ್ಲಿ ಇದನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆ ಯನ್ನು ನಾನು ಹೇಳಿದ ಪದಗಳ ರಿಫ್ಲೆಕ್ಷನ್ ಅನ್ನು ಅವಳ ಕಣ್ಣುಗಳಲ್ಲಿ ಕಂಡೆ ಎಂದು ಬರೆದುಕೊಂಡಿದ್ದಾರೆ. ಸಿದ್ದು ಅವರು ಪ್ರಪೋಸ್ ಮಾಡಿದ ನಂತರ ಪ್ರಿಯ ಅವರು ಮಾತನಾಡಿ ನನಗೆ ಯಾವ ಬೊಂಬೆಗಳ ಗಿಫ್ಟ್ ಬೇಡ ನನಗೆ ನೀನೆ ಮುದ್ದು ಬೊಂಬೆ. ಸ್ಟೇಜ್ ಫಿಯರ್ ನನಗಿಲ್ಲ ಆದರೆ ಪ್ರೀತಿ ಮತ್ತು ಮದುವೆ ವಿಷಯ ಬಂದಾಗ ಭಯ ಶುರುವಾಗುತ್ತದೆ, ನಾಚಿಕೆ ಆಗುತ್ತದೆ.

ಇದುವರೆಗೆ ನಾವಿಬ್ಬರು ಪ್ರೀತಿ ಹೇಳಿಕೊಂಡರಲಿಲ್ಲ ಆದರೆ ಇಬ್ಬರ ಮನಸಲ್ಲೂ ಮದುವೆ ಎನ್ನುವುದೇ ಇತ್ತು ಎಂದು ಹೇಳಿ ನಿನ್ನ ಜೊತೆ ಇರುವ ಪ್ರತಿಯೊಂದು ಕ್ಷಣಗಳು ಕೂಡ ಅದ್ಭುತವಾದದ್ದು ಎಂದು ಹಗ್ ಮಾಡಿಕೊಂಡಿದ್ದಾರೆ‌ ಇಡೀ ಸೆಟ್ ಇವರಿಬ್ಬರ ಜೋಡಿಗೆ ವಿಶ್ ಮಾಡಿ ಶುಭ ಕೋರಿದ್ದಾರೆ ಈ ಜೋಡಿ ಇದೇ ಜನವರಿ 24 ರಂದು ಹಸೆಮಣೆ ಏರಲು ಸಿದ್ಧವಾಗುತ್ತಿದ್ದು ಮದುವೆ ಕುರಿತ ತಯಾರಿಯಲ್ಲಿ ಬಿಝಿ ಆಗಿದ್ದಾರೆ.

Leave a Comment

WhatsApp Group Join Now
Telegram Group Join Now