ದರ್ಶನ್ ಫ್ಯಾನ್ಸ್ ಗಳಿಂದ ದಚ್ಚು ಎಂದು ಕರೆಸಿಕೊಳ್ಳುತ್ತಿದ್ದರೆ ಚಂದನ ವನ ಇವರಿಗೆ ಚಾಲೆಂಜಿಂಗ್ ಸ್ಟಾರ್ ಎನ್ನುವ ಪಟ್ಟಿ ಕೊಟ್ಟಿದೆ. ಕಾರಣ ಇವರು ತಮ್ಮ ಕೆರಿಯರ್ ಅನ್ನು ಫೇಸ್ ಮಾಡಿದ ರೀತಿ. ತಂದೆ ಹೆಸರಾಂತ ಖಳನಾಯಕ ಆಗಿದ್ದರು ಕೂಡ ದರ್ಶನ್ ಅವರ ಬಣ್ಣದ ಬದುಕು ಹಾಗೂ ದರ್ಶನ್ ಅವರ ಎಂಟ್ರಿ ಅಷ್ಟು ಸುಲಭವಾಗಿ ಇರಲಿಲ್ಲ. ಹೇಗೆ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗರು ಕನಸು ಕಾಣುತ್ತಾರೋ ಅದೇ ರೀತಿ ದರ್ಶನವರು ಬಣ್ಣದ ಬದುಕಿನ ಬಗ್ಗೆ ಕನಸು ಕಂಡು ಹೀರೋ ಆಗಬೇಕು ಎನ್ನುವ ಹಠವನ್ನು ತೊಟ್ಟು ಅದೇ ದಾರಿಯಲ್ಲಿ ಸಾಹಸ ಮಾಡಿ ತಮ್ಮ ಚಾಲೆಂಜ್ ಅನ್ನು ಗೆದ್ದು ಇಂದು ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿದ್ದಾರೆ.
ಲೈಟ್ ಬಾಯ್ ಆಗಿದ್ದ ದರ್ಶನ್ ಇಂದ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ದರ್ಶನ್ ವರೆಗೆ ಅವರ ಬದುಕಿನ ಕಥೆಯೇ ರೋಚಕ. ದರ್ಶನ್ ಅವರು ಮೊದಲಿಗೆ ಲೈಟ್ ಬಾಯ್ ಆಗಿ ನಂತರ ಅಸಿಸ್ಟೆಂಟ್ ಕ್ಯಾಮರಮನ್ ಆಗಿ ಜೂನಿಯರ್ ಆರ್ಟಿಸ್ಟ್ ಆಗಿ ಮತ್ತು ಅತಿಥಿ ಪಾತ್ರದಲ್ಲಿ ಹಾಗೂ ಸಹ ಕಲಾವಿದನ ರೀತಿ ಪಾತ್ರ ಮಾಡುತ್ತಾ ಬಂದರು. ಮೆಜೆಸ್ಟಿಕ್ ನಂತರ ಕನ್ನಡದಲ್ಲಿ ಭರವಸೆಯ ನಾಯಕ ಆದರು. ಅಭಿನಯದಲ್ಲಿ ಇವರಿಗೆ ಇವರೇ ಸಾಟಿ ಇದಕ್ಕೆ ಸಾಕ್ಷಿ ಇವರು ಅಭಿನಯಿಸಿದ ನಮ್ಮ ಪ್ರೀತಿಯ ರಾಮು ಸಿನಿಮಾ.
ನಂತರ ಲಾಲಿ ಹಾಡು, ಸುಂಟರಗಾಳಿ, ಕಲಾಸಿಪಾಳ್ಯ, ಮಂಡ್ಯ, ಅಯ್ಯಾ, ಗಜ, ಸಾರಥಿ, ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ, ಯಜಮಾನ, ಬುಲ್ ಬುಲ್, ಅಂಬರೀಶ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಹಲವಾರು ಬ್ಲಾಕ್ ಬ್ಲಾಸ್ಟರ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಇವರು ಈಗಲೂ ಕೈತುಂಬ ಹಲವು ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡು ಬ್ಯುಸಿ ಆಗಿದ್ದಾರೆ. ದರ್ಶನ್ ಅವರಿಗೆ ಇರುವಷ್ಟು ಅಭಿಮಾನಿಗಳು ಕನ್ನಡದಲ್ಲಿ ಬೇರೆ ಯಾವ ನಟನಿಗೂ ಇಲ್ಲ ಯಾಕೆಂದರೆ ದರ್ಶನ್ ಅವರ ನೇರ ನುಡಿ, ಅವರ ವ್ಯಕ್ತಿತ್ವ, ಅವರ ಗುಣ ಸ್ವಭಾವ ಎಲ್ಲವೂ ಕೂಡ ಜನರಿಗೆ ಬಹಳ ಇಷ್ಟ ಆಗಿದೆ.
ಅಲ್ಲದೆ ಅಭಿಮಾನಿಗಳನ್ನು ಕೂಡ ತಮ್ಮ ಕುಟುಂಬದವರಷ್ಟೇ ಕಾಳಜಿ ಮಾಡುತ್ತಾರೆ ದರ್ಶನ್ ಅವರು. ಮತ್ತು ದರ್ಶನ್ ಅವರ ಬಗ್ಗೆ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕಾತುರರಾಗಿರುತ್ತಾರೆ. ದರ್ಶನ್ ಅವರಿಗೆ ಪ್ರಾಣಿಗಳನ್ನು ಕಂಡರೆ ಎಷ್ಟು ಪ್ರೀತಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ ಹಾಗೆ ಅವರಿಗೆ ದುಬಾರಿ ಕಾರುಗಳ ಬಗ್ಗೆಯೂ ಕೂಡ ಅಷ್ಟೇ ಆಸಕ್ತಿ ಇದೆ. ಈಗಾಗಲೇ ದರ್ಶನ್ ಬಳಿ ಹಲವು ಕಂಪನಿಯ ಕಾರುಗಳ ಕಲೆಕ್ಷನ್ಸ್ ಇದೆ ಇವುಗಳ ಜೊತೆ ಮತ್ತೊಂದು ಇವರ ಬಳಿ ಇರುವ ದುಬಾರಿ ವಸ್ತು ಈಗ ಸುದ್ದಿ ಆಗುತ್ತಿದೆ.
ಈ ತಿಂಗಳಲ್ಲಿ ಬೆಂಗಳೂರಿನ ಅರಮನೆಯಲ್ಲಿ ನಡೆದ ಸೈಮ ಅವಾರ್ಡ್ ಫಂಕ್ಷನ್ ಅಲ್ಲಿ ದರ್ಶನ್ ಅವರು ಸೇರಿದಂತೆ ಅಭಿಷೇಕ್ ಅಂಬರೀಶ್ ಡಾಲಿ ಧನಂಜಯ್ ಶಿವಣ್ಣ ಯಶ್ ಹೀಗೆ ಹಲವು ನಟರು ಭಾಗಿ ಆಗಿದ್ದರು. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದ್ದು ಇದನ್ನು ಅಪ್ಪು ಅವರ ಸವಿನೆನಪಿನಲ್ಲಿ ನಡೆಸಿದ್ದಾರೆ. ಈಗ ಕಾರ್ಯಕ್ರಮದಲ್ಲಿ ದರ್ಶನ್ ಅವರು ಧರಿಸಿದ್ದ ವಾಚಿನ ಬಗ್ಗೆ ಚರ್ಚೆ ಆಗುತ್ತಿದೆ ಕಾರಣ ದರ್ಶನ್ ಅವರು ಧರಿಸಿದ್ದ ವಾಚಿನ ಬೆಲೆ ಬರೋಬ್ಬರಿ ಎರಡು ಕೋಟಿ ಬೆಲೆ ಬಾಳುವ ಹೈಬ್ಲೋಟ್ ಕಂಪನಿಯ ವಾಚ್ ಆಗಿದೆ ಇದರ ಬೆಲೆ ಕೇಳಿ ಎಲ್ಲರೂ ಶಾ-ಕ್ ಆಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ