ನಟ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಈ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾಗಿದೆ ಆದರೂ ಕೂಡ ಈ ಸಿನಿಮಾಗೆ ಇರುವಂತಹ ಕ್ರೇಜ್ ಇನ್ನೂ ಕೂಡ ಕಡಿಮೆಯಾಗಿಲ್ಲ. ರಿಷಬ್ ಶೆಟ್ಟಿಯವರು ತೆರೆಯ ಮೇಲೆ ಅಬ್ಬರಿಸುತ್ತಿದ್ದಾರೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಕೂಡ ಉತ್ತಮ ಪ್ರದರ್ಶನ ಕಂಡಿದೆ.
ವಿಶೇಷ ಏನೆಂದರೆ ಕೆಜಿಎಫ್ ನಂತರ ಕನ್ನಡದಲ್ಲಿ ಎರಡನೇ ಸ್ಥಾನ ಪಡೆದ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಅದು ಕಾಂತರಾ ಸಿನಿಮಾ ಅಂತಾನೆ ಹೇಳಬಹುದು. ಇನ್ನು ಈ ಸಿನಿಮಾದಲ್ಲಿ ಬರುವಂತಹ ಸಿಂಗಾರಿ ಸೀರೆಯ ಹಾಡಂತೂ ಅದ್ಭುತವಾಗಿದೆ ನೋಡುಗರ ಮನಸ್ಸನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಈ ಹಾಡಿಗೆ ಮಾರು ಹೋಗದವರೇ ಇಲ್ಲ ಅಂತ ಹೇಳಬಹುದು ಸದ್ಯಕ್ಕೆ ರಿಶಬ್ ಶೆಟ್ಟಿ ಅಭಿನಯದ ಮತ್ತು ಸಪ್ತಮಿ ಗೌಡ ಅವರು ನಟನೆ ಮಾಡಿರುವ ಸಿಂಗಾರಿ ಸೀರಿಯಲ್ ಹಾಡಿಗೆ ಸ್ಟಾರ್ ನಟ ನಟಿಯರು ಮತ್ತು ಸಾಮಾನ್ಯ ಜನರು ರಿನ್ಸ್ ಮಾಡುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.
ಸದ್ಯಕ್ಕೆ ಮಾಸ್ಟರ್ ಆನಂದ್ ಹಾಗೂ ನಿರೂಪಕೇಶ್ ಶ್ವೇತಾ ಚಂಗಪ್ಪ ಅವರು ಕೂಡ ಕಾಂತರಾ ಸಿನಿಮಾದ ಸಿಂಗಾರಿ ಸಿರಿಯರಿಗೆ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಈ ವಿಡಿಯೋವನ್ನು ಸ್ವತಃ ಶ್ವೇತ ಚಂಗಪ್ಪ ಅವರೇ ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ ಈ ವಿಡಿಯೋ ನೋಡುತ್ತಿದ್ದರೆ ನಿಜಕ್ಕೂ ಕೂಡ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರನ್ನೇ ನೋಡಿದ ಮಾದರಿಯಲ್ಲಿ ಆಗುತ್ತದೆ. ಅಷ್ಟು ಮೋಹಕವಾಗಿ ಮಾಸ್ಟರ್ ಆನಂದ್ ಮತ್ತು ಶ್ವೇತ ಚಂಗಪ್ಪ ಅವರು ಈ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ.
ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮಾಸ್ಟರ್ ಆನಂದ ಡ್ರಾಮಾ ಜೂನಿಯರ್ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರೆ ಶ್ವೇತಾ ಚಂಗಪ್ಪ ಅವರು ಜೋಡಿ ನಂಬರ್ ಒನ್ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ. ಹಾಗಾಗಿ ಇಬ್ಬರೂ ಕೂಡ ಇದೀಗ ಬಿಡುವು ಮಾಡಿಕೊಂಡು ಜೀ ಕನ್ನಡ ವೇದಿಕೆಯಲ್ಲಿಯೇ ಕಾರ್ಯಕ್ರಮ ಒಂದರಲ್ಲಿ ಸಿಂಗಾರಿ ಸೀರೆ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಮಾಡಿದಂತಹ ನೃತ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ.
ಇನ್ನು ಹಾಡಿಗೆ ತಕ್ಕ ಹಾಗೆ ಶ್ವೇತಾ ಚಂಗಪ್ಪ ಅವರು ಹಸಿರು ಬಣ್ಣದ ಸೀರೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡು ಮೈತುಂಬ ಒಡವೆಗಳನ್ನು ಧರಿಸಿದ್ದಾರೆ. ಅತ್ತ ಕಡೆ ಮಾಸ್ಟರ್ ಆನಂದ್ ಅವರು ಕೂಡ ಸೂಟು ಬೂಟು ಧರಿಸಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಶ್ವೇತಾ ಚಂಗಪ್ಪ ಅವರು ವೇದಿಕೆಯ ಮೇಲೆ ಪ್ರಾರಂಭವಾಗುತ್ತದೆ ಸಿಂಗಾರಿ ಸೀರೆಗೆ ಎಂಬ ಹಾಡು ಬರುತ್ತಿದ್ದ ಹಾಗೆ ಮಾಸ್ಟರ್ ಆನಂದವರು ಶ್ವೇತಾ ಚಂಗಪ್ಪ ಅವರ ಸೀರೆಯನ್ನು ಎಳೆಯುತ್ತಾರೆ.
ಇಲ್ಲಿಂದ ಹಾಡು ಪ್ರಾರಂಭವಾಗುತ್ತದೆ ತದನಂತರ ನಿರೂಪಕಿ ಶ್ವೇತ ಚಂಗಪ್ಪ ಅವರು ಕೂಡ ಮಾಸ್ಟರ್ ಅವರ ಜೊತೆಗೆ ಒಳ್ಳೆಯ ಕೆಮಿಸ್ಟ್ರಿಯಲ್ಲಿ ಬೆಳೆಸುತ್ತಾರೆ ಹಾಡಿಗೆ ತಕ್ಕಂತೆ ಅಭಿನಯವನ್ನು ಮಾಡುತ್ತಾರೆ. ಒಂದು ಬಾರಿ ನೀವು ಕೂಡ ಶ್ವೇತಾ ಚಂಗಪ್ಪ ಮತ್ತು ಮಾಸ್ಟರ್ ಆನಂದ್ ಮಾಡಿದ ಈ ಮನಮೋಹಕ ನೃತ್ಯವನ್ನು ನೋಡಿ ನಿಜಕ್ಕೂ ಇದು ಅದ್ಭುತ ಅನಿಸುತ್ತದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.