ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ತಮ್ಮ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಹಾಗೂ ಅವರ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಅವರನ್ನು ಉತ್ತಮವಾದಂತಹ ವ್ಯಕ್ತಿ ಯನ್ನಾಗಿ ಮಾಡಬೇಕು ಎಂದು ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಿರು ತ್ತಾರೆ ಹಾಗೂ ಆ ಮಗು ಆರೋಗ್ಯವಾಗಿ ಚೆನ್ನಾಗಿರಲಿ ಎನ್ನುವ ಉದ್ದೇಶ ದಿಂದ ಉತ್ತಮವಾದಂತಹ ಆಹಾರ ಕ್ರಮವನ್ನು ಅನುಸರಿಸುತ್ತಾರೆ.
ಹೀಗೆ ಹತ್ತು ಹಲವಾರು ರೀತಿಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಈ ರೀತಿಯಾಗಿ ನೋಡಿಕೊಂಡರೆ ಅವರು ಉತ್ತಮವಾದ ಪೋಷಕರಾಗಲು ಸಾಧ್ಯವಿಲ್ಲ ಇದು ಪ್ರತಿಯೊಬ್ಬ ತಂದೆ ತಾಯಿಗಳು ಮಾಡುವಂತಹ ಕರ್ತವ್ಯ ಆಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತಮ್ಮ ಮಕ್ಕಳನ್ನು ಉತ್ತಮವಾದಂತಹ ರೀತಿಯಲ್ಲಿ ಬಳಸುವುದು ಉತ್ತಮ ಹಾಗೂ ನೀವು ಕೂಡ ಉತ್ತಮವಾದ ಪೋಷಕರಾಗಬೇಕು ಎಂದರೆ.
ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರಬೇಕು ಹಾಗೂ ಅವುಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ
ಹಾಗಾದರೆ ಉತ್ತಮವಾದಂತಹ ಪೋಷಕರಾಗಲು ಯಾವ ಕೆಲವು ಸೂತ್ರಗಳು ಇರುತ್ತದೆ. ಆ ಸೂತ್ರಗಳು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
* ಮಕ್ಕಳು ಜೊತೆಗಿದ್ದಾಗ ಫೋನನ್ನು ಬಳಸಬೇಡಿ ಅವರು ನಿಮ್ಮ ಜೊತೆ ಏನನ್ನು ಮಾತನಾಡಲು ಬಯಸುತ್ತಾರೆ ಎಂದು ಗಮನವಿಟ್ಟು ಕೇಳಿ ಅವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿ.
* ಮಕ್ಕಳ ದೃಷ್ಟಿಕೋನ ಮತ್ತು ಅವರ ಅಭಿಪ್ರಾಯಗಳನ್ನು ಗೌರವದಿಂದ ಒಪ್ಪಿಕೊಳ್ಳಿ, ಅವರ ಜೊತೆ ಸಾಧ್ಯವಾದಷ್ಟು ಮಾತುಕತೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
* ಮಕ್ಕಳನ್ನು ಸದಾ ಗೌರವದಿಂದ ಕಾಣಿ, ಅವರನ್ನು ಸಾಧ್ಯವಾದಷ್ಟು
ರಚನಾತ್ಮಕವಾಗಿ ಹುರಿದುಂಬಿಸಿ.
* ಮಕ್ಕಳೊಂದಿಗೆ ಸಂತಸದ ವಿಷಯಗಳನ್ನು ಮಾತನಾಡಿ, ಅವರ ಸ್ನೇಹಿತರ ಬಗ್ಗೆ, ಹಾಗೂ ಅವರು ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತನಾಡಿ.
* ಮಕ್ಕಳು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡು, ಅವರನ್ನು ಒಳ್ಳೆಯ ರೀತಿಯಲ್ಲಿ ಹುರಿದುಂಬಿಸಿ.
* ಮಕ್ಕಳು ಹೇಳಿದ ಮಾತನ್ನೇ ಪದೇ ಪದೇ ಹೇಳುತ್ತಿದ್ದರು ನೀವು ಮೊದ ಲನೇ ಸಲ ಕೇಳಿಸಿಕೊಳ್ಳುವಂತೆ ಕುತೂಹಲವನ್ನು ತೋರಿ.
* ಕಳೆದು ಹೋದ ಕಹಿ ನೆನಪುಗಳನ್ನು, ಮಕ್ಕಳ ಮುಂದೆ ಪದೇಪದೇ ನೆನಪಿಸಿ, ಮಕ್ಕಳ ಮನಸ್ಸಿಗೆ ಬೇಸರ ಮಾಡಬೇಡಿ.
* ಮಕ್ಕಳ ಉಪಸ್ಥಿತಿಯಲ್ಲಿ ಅವರಿಗೆ ಬೇಡವಾದ ಮಾತುಗಳನ್ನು ಮಾತ ನಾಡಬೇಡಿ.
* ಮಕ್ಕಳ ಆಲೋಚನ ಅಭಿಪ್ರಾಯಗಳಿಗೆ ಬೆಲೆ ಕೊಡಿ ಅವರ ವಯಸ್ಸಿಗೆ ಗೌರವವನ್ನು ಕೊಡಿ.
* ಮಕ್ಕಳು ಮಾತನ್ನು ಆರಂಭಿಸುವಾಗ ಬಾಯಿ ಮುಚ್ಚು ಎಂದು ಸುಮ್ಮ ನಿರಿಸಬೇಡಿ, ಅವರಿಗೆ ಮಾತನಾಡಲು ಅವಕಾಶವನ್ನು ಕಲ್ಪಿಸಿಕೊಡಿ.
* ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಿ, ಸಾಧ್ಯವಾದಷ್ಟು ಮಕ್ಕಳ ಜೊತೆ ಧ್ವನಿಯೇರಿಸಿ ಮಾತನಾಡಬೇಡಿ.
* ಮಕ್ಕಳ ಚಟುವಟಿಕೆಗಳನ್ನು ಗುರುತಿಸಿ, ಅವರನ್ನು ಹೊಗಳುತ್ತಿರಿ ಅವರ ಆಸಕ್ತಿಗಳನ್ನು ಉತ್ತಮ ರೀತಿಯಲಿ ಪೋತ್ಸಾಹಿಸಿ. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ನಿಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾ ಗುತ್ತದೆ. ಬದಲಿಗೆ ನೀವು ಇಷ್ಟ ಪಟ್ಟಂತೆ ನಿಮ್ಮ ಮಕ್ಕಳು ಇರಬೇಕು ಎಂದುಕೊಳ್ಳುವುದು ತಪ್ಪು. ಅವರ ಇಷ್ಟ ಏನಿದೆ ಎಂದು ತಿಳಿದುಕೊಂಡು ಅದನ್ನು ಮಾಡುವುದು ಒಳ್ಳೆಯದು.
* ಮಕ್ಕಳ ಬಗ್ಗೆ ದುಡುಕಿ ಕೀಳಾಗಿ ಮಾತನಾಡಬೇಡಿ, ಬೇರೆಯವರ ಮುಂದೆ ಅವರನ್ನು ದೂಷಿಸಬೇಡಿ. ಅದರಲ್ಲೂ ಬೇರೆ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಸರಿ ಇಲ್ಲ ಅವನಿಗಿಂತ ನೀನು ದಡ್ಡ ಹಾಗೆ ಹೀಗೆ ಎಂದು ಹೇಳುವುದನ್ನು ತಪ್ಪಿಸಿ, ಇದು ಮಕ್ಕಳ ಮನಸ್ಸಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ.
* ನಿಮ್ಮ ಪ್ರಾರ್ಥನೆಯಲ್ಲಿ ಸದಾ ಮಕ್ಕಳ ಒಳಿತನ್ನು ಬಯಸಿ.
* ಮಕ್ಕಳ ತಪ್ಪುಗಳನ್ನು ಹಂಗಿಸಿ ಮಾತನಾಡಬೇಡಿ. ಅವರ ಜೊತೆ ಮಾತನಾಡುವಾಗ ನಿಮ್ಮ ಶಬ್ದಗಳ ಮೇಲೆ ಗಮನವಿರಲಿ.