ಅಡುಗೆ ಮನೆ ಕೆಲಸದ ವಿಚಾರದಲ್ಲಿ ಎಷ್ಟು ಕಲಿತರು ಸಾಕಾಗುವುದಿಲ. ಲ ಯಾಕೆಂದರೆ ಅಡುಗೆಮನೆ ಎನ್ನುವುದು ಅಷ್ಟೊಂದು ಜವಾಬ್ದಾರಿಯ ಕೆಲಸವಾಗಿದೆ. ಮನೆಯವರ ಆರೋಗ್ಯದ ಗುಟ್ಟು ಹಾಗೂ ಮನೆಯ ಹಣ ಪೋಲಾಗದಂತೆ ತಡೆಯುವ ಜಾಗ ಅಡುಗೆ ಮನೆಯೇ ಆಗಿದೆ. ಹಾಗಾಗಿ ಹೆಚ್ಚಿನ ಸಮಯ ಅಡುಗೆ ಮನೆಯಲ್ಲಿ ಸಮಯ ಕಳೆಯುವ ಹೆಣ್ಣು ಮಕ್ಕಳಿಗೆ ಅಡುಗೆ ಕೆಲಸ ಕಡಿಮೆ ಮಾಡಿ ಅನುಕೂಲವಾಗುವಂತಹ ಕೆಲವು ಟಿಪ್ ಗಳನ್ನು ಈ ಅಂಕಣದಲ್ಲಿ ತಿಳಿಸಿದ್ದೇವೆ.
* ಸೇವನೆ ಕತ್ತರಿಸಿ ಇಟ್ಟರೆ ಅದು ಕಪ್ಪಾಗುತ್ತದೆ. ಹೀಗಾಗಬಾರದು ಎಂದರೆ ಕತ್ತರಿಸಿದ ಮೇಲೆ ಅದಕ್ಕೆ ನಿಂಬೆರಸ ಅಥವಾ ಉಪ್ಪು ಸವರಿ ಇಡಿ.
* ಯಾವಾಗಲೂ ತರಕಾರಿಗಳನ್ನು ಚೆನ್ನಾಗಿ ತೊಳೆದು ನಂತರ ಕತ್ತರಿಸಿ. ಕೆಲವರು ತರಕಾರಿಗಳನ್ನು ಕತ್ತರಿಸಿ ನಂತರ ತೊಳೆಯುತ್ತಾರೆ ಇದು ತಪ್ಪಾದ ಕ್ರಮ
* ನೀವು ಮಾಡುತ್ತಿರುವ ಗ್ರೇವಿ ಮಂದವಾಗಿ ಆಗಬೇಕು ಎಂದರೆ ಅಥವಾ ಯಾವುದೇ ಪಲ್ಯಗಳು ಹೆಚ್ಚಾಗಬೇಕು ಎಂದರೆ ತೆಂಗಿನಕಾಯಿಯನ್ನು ಬಳಸಿ ಇದನ್ನು ಯಾವುದೇ ತರಕಾರಿ ಜೊತೆ ಬೇಕಾದರೂ ಬಳಸಬಹುದು.
* ಪದೇಪದೇ ಕಾಯಿತುರಿಯುವುದು ಕ’ಷ್ಟ. ಹಾಗಾಗಿ ಕಾಯಿತುರಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು, ಆದರೆ ಬೇಗ ಕೆಟ್ಟು ಹೋಗುತ್ತದೆ. ಹೀಗಾಗಬಾರದು ಎಂದರೆ ಅದರ ಜೊತೆ ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಇಡಿ ಬಹಳ ದಿನದವರೆಗೆ ಫ್ರೆಶ್ ಆಗಿರುತ್ತದೆ
* ಹುರುಳಿಕಾಯಿ ಗೋರಿಕಾಯಿ ಇವುಗಳ ನಾರು ತೆಗೆದು ಇಟ್ಟರೆ ಬೇಗ ಒಣಗುವುದಿಲ್ಲ
* ಹುರುಳಿಕಾಯಿ ಅಥವಾ ಗೋರಿಕಾಯಿಯನ್ನು ಉರಿದು ಅಡುಗೆ ಮಾಡುವಾಗ ಅದರ ಬಣ್ಣ ಹಾಗೆ ಇರಬೇಕು ಎಂದರೆ ಉರಿಯುವಾಗ ಸ್ವಲ್ಪ ಉಪ್ಪು ಬೆರೆಸಿ.
* ಹಸಿಮೆಣಸಿನಕಾಯಿ ತೊಟ್ಟುಗಳನ್ನು ಬಿಡಿಸಿ ಸ್ಟೋರ್ ಮಾಡಿ ಇಟ್ಟರೆ, ಆವು ಬೇಗ ಹಣ್ಣಾಗುವುದಿಲ್ಲ.
* ಸಾಂಬಾರು ಕೂಟು ಮಾಡುವಾಗ ಮಸಾಲೆ ರುಬ್ಬಿ ಹಾಕುತ್ತಾರೆ. ರುಬ್ಬುವ ಮಸಾಲೆಗೆ ಒಂದು ಹಸಿ ಟೊಮೆಟೊ ಹಾಕಿ ರುಬ್ಬಿ, ಇದರಿಂದ ಅಡುಗೆ ಬಣ್ಣ ಚೆನ್ನಾಗಿರುತ್ತದೆ ಮತ್ತು ರುಚಿ ಹೆಚ್ಚಾಗುತ್ತದೆ.
* ಹಸಿಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜೊತೆ ಸ್ವಲ್ಪ ನಿಂಬೆರಸ ಹಾಕಿ ಫ್ರೈ ಮಾಡಿದರೆ ಬಿಸಿ ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತೆ, ಇದನ್ನು ಬಹಳ ದಿನದವರೆಗೆ ಇಟ್ಟುಕೊಳ್ಳಬಹುದು.
* ಹುರುಳಿಕಾಯಿ, ಕ್ಯಾರೆಟ್, ಗೋರಿಕಾಯಿ, ಬೆಂಡೆಕಾಯಿ ಇಂತಹ ತರಕಾರಿಗಳು ಬಾಡಿದ್ದರೆ ಅದನ್ನು ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿ ಇಡಿ ಮತ್ತೆ ಫ್ರೆಶ್ ಆಗುತ್ತದೆ.
* ಬೀಟ್ರೋಟ್ ಹಚ್ಚುವಾಗ ಕೈ ಕೆಂಪಾಗುತ್ತದೆ, ಕೆಲವರಿಗೆ ಒಡೆಯುತ್ತದೆ ಈ ರೀತಿ ಆಗಬಾರದು ಎಂದರೆ ಮೊದಲೇ ಕೈಗೆ ಎಣ್ಣೆ ಸವರಿಕೊಂಡು ನಂತರ ಬೀಟ್ರೂಟ್ ಕಟ್ ಮಾಡಬೇಕು.
* ಪರಂಗಿ ಕಾಯಿ ಹಚ್ಚುವಾಗ ಮೊದಲು ಸಿಪ್ಪೆ ತೆಗೆದು ನಂತರ ತುದಿಗಳನ್ನು ಕಟ್ ಮಾಡಬೇಕು ಹೀಗೆ ಮಾಡುವುದರಿಂದ ಅದರ ಹಾಲು ಚಿಮ್ಮುವುದಿಲ್ಲ.
* ಪುದಿನ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಗೂ ಉಪ್ಪು ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುತ್ತದೆ.
* ಅಕ್ಕಿ ರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಸ್ವಲ್ಪ ಚಿರೋಟಿ ರವೆ ಬೆರೆಸಿ ಬೇಯಿಸಿದರೆ ರೊಟ್ಟಿ ಅಂಚು ಸೀಳಾಗುವುದಿಲ್ಲ
* ಪಾಯಸ ಮಾಡುವಾಗ ಹಾಲನ್ನು ಬಳಸಿದರೆ ಅದು ಮಂದವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ಹಾಲಿನ ಪೌಡರ್ ಬಳಸಬಹುದು.
* ಜೇನುತುಪ್ಪವನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಗಟ್ಟಿಯಾಗುತ್ತದೆ. ಅದು ಬಹಳ ಬೇಗ ಕೆಡದ ವಸ್ತು ಆಗಿರುವುದರಿಂದ ಹೊರಗೆ ಶುಷ್ಕವಾದ ತಂಪಾದ ಸ್ಥಳದಲ್ಲಿಯೇ ಇಡಿ ಗಟ್ಟಿಯಾಗುವುದಿಲ್ಲ.
* ಹಾಟ್ ಬಾಕ್ಸ್ ನಲ್ಲಿ ಅಡುಗೆ ಹಾಕಿಟ್ಟಾಗ ಅದರಲ್ಲಿ ತೇವಾಂಶ ಇರುತ್ತದೆ. ಹೀಗಾಗಬಾರದು ಎಂದರೆ ಹಾಟ್ ಬಾಕ್ಸ್ ನಲ್ಲಿ ಇಟ್ಟು ಬಟ್ಟೆಯಿಂದ ಮುಚ್ಚಿ.
* ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯುವುದು ಸ್ವಲ್ಪ ಕಷ್ಟದ ಕೆಲಸ. ಬಿಸಿ ಇರುವಾಗ ಅದನ್ನು ತೆಗೆಯಲು ಹೋದರೆ ಸಿಪ್ಪೆ ಜೊತೆ ಒಳಗಡೆ ತಿರುಳು ಬರುತ್ತದೆ. ಇದನ್ನು ಸುಲಭವಾಗಿ ತೆಗೆಯಲು ಬೇಯಿಸಿದ ಮೊಟ್ಟೆಯನ್ನು ತಣ್ಣೀರಿಗೆ ಹಾಕಿ 10 ನಿಮಿಷಗಳ ಕಾಲ ಇಡಿ, ಅದು ಆರಿದ ಮೇಲೆ ಅದನ್ನು ತೆಗೆದುಕೊಂಡು ನೆಲಕ್ಕೆ ಮೆಲ್ಲಗೆ ಕುಟ್ಟಿ ನಿಧಾನವಾಗಿ ಸಿಪ್ಪೆಯನ್ನು ತೆಗೆಯಿರಿ.