ಈಗಿನ ಕಾಲದಲ್ಲಿ ನಮ್ಮ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ತಪ್ಪಾದ ಆಹಾರ ಪದ್ಧತಿ ಹಾಗೂ ಕಳಪೆ ಗುಣಮಟ್ಟದ ಜೀವನ ಶೈಲಿಗೆ ಕಾರಣವಾಗಿದೆ ಎಂದು ಹೇಳಬಹುದು. ಇವುಗಳನ್ನು ಸರಿಪಡಿಸಿಕೊಂಡರೆ ವಿನಾಕಾರಣ ನೋ’ವಿನಿಂದ ನರಳುವ ಹಾಗೂ ಹಣ ಖರ್ಚಾಗುವ ಸಮಸ್ಯೆ ತಪ್ಪುತ್ತದೆ. ಹಾಗಾಗಿ ಕೆಲ ಉಪಯುಕ್ತ ಹೆಲ್ತ್ ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ ತಪ್ಪದೆ ಪಾಲಿಸಿ ಆರೋಗ್ಯದಿಂದಿರಿ.
* ಎಲ್ಲರಿಗೂ ಕೂಡ ಒಂದೇ ರೀತಿಯಾದ ದೇಹ ಇರುವುದಿಲ್ಲ ದೇಹದ ಆಕಾರ, ಗಾತ್ರ, ಶಕ್ತಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಹಾಗಾಗಿ ನಮ್ಮ ಕೈಲಿ ಎಷ್ಟು ಆಗುತ್ತದೆ ಅಷ್ಟು ಕೆಲಸವನ್ನು ಮಾತ್ರ ಮಾಡಬೇಕು. ದೈಹಿಕವಾಗಿಯಾಗಲಿ ಮಾನಸಿಕವಾಗಿಯಾಗಲಿ ಅತಿ ಹೆಚ್ಚು ಒತ್ತಡ ಆಗುವಂತಹ ಕೆಲಸಗಳನ್ನು ಒಪ್ಪಿಕೊಂಡು ಆಯಾಸ ಪಟ್ಟು ಅನಾರೋಗ್ಯ ಮಾಡಿಕೊಳ್ಳಬಾರದು
* ಪ್ರತಿದಿನವೂ ಕನಿಷ್ಠ 30 ನಿಮಿಷಗಳ ಆದರೂ ವ್ಯಾಯಾಮ ಮಾಡುವುದು ಬಹಳ ಒಳ್ಳೆಯ ಅಭ್ಯಾಸ ಹಾಗೆಯೇ ತಮ್ಮ ವಯಸಿಗೆ ಅನುಗುಣವಾಗಿ ವ್ಯಾಯಾಮವನ್ನು ಮಾಡಬೇಕು.
* ರಾತ್ರಿ ಸಮಯ ಎಣ್ಣೆಯಲ್ಲಿ ಕರಿದ ಅಥವಾ ಹೆಚ್ಚು ಮಸಾಲೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು
* ಮಲಗುವ ಕೋಣೆ ಯಥೇಚ್ಛವಾಗಿ ಗಾಳಿ ಬೆಳಕು ಬರುವ ರೀತಿ ಇರಬೇಕು.
* ತಂಪಾದ ಪಾನೀಯಗಳಿಂದ ದೇಹಕ್ಕೆ ಯಾವುದೇ ರೀತಿಯ ಕ್ಯಾಲೋರಿ ಸಿಗುವುದಿಲ್ಲ ಬದಲಾಗಿ ದೇಹದ ತೂಕ ಹೆಚ್ಚಾಗುತ್ತದೆ, ಹಾಗಾಗಿ ಈ ಅಭ್ಯಾಸವನ್ನು ತ್ಯಜಿಸುವುದೇ ಒಳ್ಳೆಯದು.
* ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಲ್ಲಿರಬೇಕು.
* ಆಲ್ಕೋಹಾಲ್ ಸೇವನೆಯ ದು’ಶ್ಚ’ಟವನ್ನು ತ್ಯಜಿಸುವುದು ದೇಹಕ್ಕೆ ಬಹಳ ಒಳ್ಳೆಯದು, ಜೀರ್ಣಕ್ರಿಯೆಯ ಕ್ರಮ ತಪ್ಪುವುದಕ್ಕೆ ಧೂಮಪಾನ ಹಾಗೂ ಮಧ್ಯಪಾನದ ಅಭ್ಯಾಸವೇ ಕಾರಣ
* ಆಹಾರದಲ್ಲಿ ಮೊಳಕೆ ಕಟ್ಟಿದ ಧಾನ್ಯಗಳು, ಹಸಿರು ತರಕಾರಿಗಳು, ಸೊಪ್ಪು ಹಾಗೂ ಹಣ್ಣುಗಳ ಬಳಕೆ ಇರಬೇಕು.
* ಹುಳಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ
* ಆತಂಕ ಕಡಿಮೆ ಮಾಡುವ ಮಾತ್ರೆಗಳು ಹಾಗೂ ನಿದ್ರೆ ಮಾತ್ರೆಗಳ ಅಭ್ಯಾಸ ಮಾಡಿಕೊಳ್ಳಬಾರದು. ಮುಂದಿನ ದಿನಗಳಲ್ಲಿ ಇವುಗಳ ಅಡಿಕ್ಷನ್ ನಿಂದ ಆರೋಗ್ಯ ಹದಗೆಡುತ್ತದೆ. ಪಾರ್ಶ್ವ ವಾಯು ಪೀಡಿತರಾಗುವ ಅಥವಾ ಮ.ರಣಾಂತಿಕ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆಯೂ ಬರುತ್ತದೆ.
* ಆದಷ್ಟು ಶಾಂತಿಯಿಂದ ಇರಬೇಕು. ಕೋ’ಪ ತಾಪಗಳನ್ನು ದೂರ ಮಾಡಿ ಎಲ್ಲರೊಡನೆ ಸದಾ ನಗುನಗುತ್ತಾ ಸಂತೋಷದಿಂದ ದಿನವನ್ನು ಕಳೆಯಬೇಕು.
* ಪ್ರತಿ ನಿತ್ಯವೂ ಎರಡು ಬಾರಿ ಹಲ್ಲುಜ್ಜಬೇಕು ಮತ್ತು ಪ್ರತಿನಿತ್ಯ ಸ್ನಾನ ಮಾಡಿ ದೇಹವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.
* ಕುಳಿತುಕೊಳ್ಳುವ ಭಂಗಿ , ಓಡಾಡುವ ರೀತಿ ಎಲ್ಲವೂ ಕೂಡ ಸರಿಯಾಗಿ ಇರಬೇಕು. ಪ್ರತಿಕ್ಷಣವೂ ಕೂಡ ಆತ್ಮವಿಶ್ವಾಸದಿಂದ ಬದುಕಬೇಕು.
* ಎಷ್ಟೇ ಇಷ್ಟದ ಆಹಾರ ಆಗಿದ್ದರೂ ಕೂಡ ಮಿತಿಗಿಂತ ಹೆಚ್ಚು ಸೇವಿಸಬಾರದು.
* ಮಲ ವಿಸರ್ಜನೆ ಮಾಡಲು ಇಂಡಿಯನ್ ಟಾಯ್ಲೆಟ್ ರೀತಿಯ ವ್ಯವಸ್ಥೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ
* ಪ್ರತಿದಿನ ಬೆಳಿಗ್ಗೆ ಹಾಗೂ ಸಾಯಂಕಾಲ ಹೊರಗೆ ಶುದ್ಧವಾದ ಗಾಳಿಯಲ್ಲಿ ಓಡಾಡಬೇಕು
* ಗಂಧಕ, ಕರ್ಪೂರ, ತುಳಸಿ ಗಿಡ, ಧೂಪ, ಶ್ರೀಗಂಧ, ಬೇವಿನಕಡ್ಡಿ ಇವುಗಳಿಂದ ಹೊಗೆ ಹಾಕಿ ಮನೆಯ ವಾತಾವರಣವನ್ನು ಶುದ್ಧೀಕರಣ ಮಾಡಬೇಕು.
* ಮನೆ ಸುತ್ತ ಗೋವಿನ ಸಗಣಿಯಿಂದ ಸಾರಿಸಿ ನೈರ್ಮಲ್ಯವಾಗಿಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ಮನೆಗೆ ಅಟ್ರಾಕ್ಟ್ ಆಗುವುದಿಲ್ಲ ಹಾಗೂ ಬ್ಯಾಕ್ಟೀರಿಯಾ ವೈರಸ್ ಗಳಂತಹ ಸೂಕ್ಷ್ಮ ಜೀವಗಳಿಂದಲೂ ಮನೆಗೆ ರಕ್ಷಣೆ ಸಿಗುತ್ತದೆ.
* ಮೆದುಳು ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವ ಯಾವುದೇ ಮಾದಕ ವಸ್ತುಗಳ ಅಭ್ಯಾಸವನ್ನು ಮಾಡಿಕೊಳ್ಳಬಾರದು.
* ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬಾರದು, ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಬೆಚ್ಚಗಿರುವ ನೀರಿನಲ್ಲಿ ತೆಗೆದುಕೊಳ್ಳಬೇಕು.
* ವಾರಕ್ಕೆ ಒಂದು ದಿನ ಆದರೂ ಉಪವಾಸ ಇರುವ ರೂಢಿ ಮಾಡಿಕೊಳ್ಳಿ.
* ನಮ್ಮ ಆರೋಗ್ಯವನ್ನು ಹಾಳು ಮಾಡುವ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ದಿನದಲ್ಲಿ ಆರು ಬಾರಿ ಮೂತ್ರ ವಿಸರ್ಜನೆ ಹಾಗೂ 2 ಬಾರಿಯಾದರೂ ಮಲವಿಸರ್ಜನೆ ಮಾಡಬೇಕು ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.