* ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಎಂದಿಗೂ ಶೇಖರಣೆ ಮಾಡಬಾರದು ಇಟ್ಟರೆ ಬೇಗ ಕೆಡುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗೂ ಈರುಳ್ಳಿ ಸಿಪ್ಪೆಯನ್ನು ತೆಗೆದು ಸ್ವಲ್ಪ ಸಮಯ ಬಿಟ್ಟು ಆನಂತರ ಕತ್ತರಿಸಿದರೆ ಈರುಳ್ಳಿಯನ್ನು ಕತ್ತರಿಸಿದರೆ ಕಣ್ಣೀರು ಬರುವುದಿಲ್ಲ.
* ಶುಂಠಿಯನ್ನು ಮನೆಗೆ ತಂದಾಗ ಜಾಸ್ತಿ ಉಳಿದಿದ್ದರೆ ಅದನ್ನು ಬಿಸಿಲಿ ನಲ್ಲಿ ಒಣಗಿಸಿ ತುಂಬಾ ದಿನಗಳವರೆಗೂ ಉಪಯೋಗಿಸಬಹುದು.
* ಯಾವುದೇ ಕಾರಣಕ್ಕೂ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇಡಬಾರದು
* ಉಪ್ಪನ್ನು ಸ್ಟೀಲ್ ಪಾತ್ರೆಯಲ್ಲಿ ಇಟ್ಟರೆ ಅದು ತೂತು ಮಾಡುತ್ತದೆ
* ದವಸ ಧಾನ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ನಂತರ ಡಬ್ಬಿಯೊಳಗಿಟ್ಟರೆ ಅವು ತೇವವಾಗುವುದಿಲ್ಲ ಹಾಗೂ ಹಾಳಾಗುವುದಿಲ್ಲ.
* ಹುಣಸೆ ಹಣ್ಣನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಇಟ್ಟರೆ ಹುಳು ಬೀಳುವುದಿಲ್ಲ ಹಾಗೂ ಹುಣಸೆಹಣ್ಣು ಕೆಡುವುದಿಲ್ಲ.
* ಹುಣಸೆ ಹಣ್ಣನ್ನು ತಂದು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ನಂತರ ಅದರ ಒಳಗಿರುವ ಬೀಜವನ್ನು ತೆಗೆದು ಮತ್ತೊಮ್ಮೆ ಒಣಗಿಸಿ ಶೇಖರಣೆ ಮಾಡಿದರೆ ಮೂರು ವರ್ಷಗಳವರೆಗೆ ಇಟ್ಟರು ಹಾಳಾಗುವುದಿಲ್ಲ.
* ಈರುಳ್ಳಿಯನ್ನು ಗಾಳಿ ಆಡುವಂತಹ ಸ್ಥಳದಲ್ಲಿ ಇಡಬೇಕು ಅಂದರೆ ತಂತಿಯ ಬುಟ್ಟಿಯಲ್ಲಿ ಅಥವಾ ತಂತಿಯ ಮರದ ಬುಟ್ಟಿಯಲ್ಲಿ ಹಾಕಿ ಇಟ್ಟರೆ ಅವು ಬೇಗ ಕೊಳೆಯುವುದಿಲ್ಲ.
* ಅಕ್ಕಿ ರವೆ ಅಕ್ಕಿ ನುಚ್ಚು ಕಡಲೆಕಾಯಿ ಬೀಜ ಇದನ್ನು ಸಮಯವಿದ್ದಾಗ ಚೆನ್ನಾಗಿ ಉರಿದಿಟ್ಟರೇ ತಂದು ತಿಂಗಳಾದರೂ ಹಾಳಾಗುವುದಿಲ್ಲ ನಿಮಗೆ ಬೇಕಾದ ಸಮಯದಲ್ಲಿ ತೆಗೆದು ಉಪಯೋಗಿಸಬಹುದು.
* ಹೆಸರು ಕಾಳು ಮಡಕೆ ಕಾಳು ಇತ್ಯಾದಿಗಳನ್ನು ನೀರಿನಲ್ಲಿ ಎಂಟು ಗಂಟೆ ನೆನೆಸಿ ನೀರನ್ನು ತೂತಿನ ಬೋಸಿಯ ಸಹಾಯದಿಂದ ಬಸಿದು ಕಾಳು ಗಳನ್ನು ಉದ್ದವಾಗಿ ಮೊಳಕೆ ಬರಲು ಬಿಡಬಾರದು ಸ್ವಲ್ಪ ಮೊಳಕೆ ಬಂದರೆ ಸಾಕು ಅದನ್ನೇ ಉಪಯೋಗಿಸಬೇಕು.
* ಶುಂಠಿಯನ್ನು ಮಣ್ಣಿನೊಳಗೆ ಹೂತಿಟ್ಟು ಬೇಕಾದ ಸಮಯದಲ್ಲಿ ತೆಗೆದುಕೊಂಡರೆ ಹೆಚ್ಚು ಕಾಲದವರೆಗೂ ಅದು ಹಾಳಾಗಿರುವುದಿಲ್ಲ ಫೆಶ್ ಆಗಿ ಇರುತ್ತದೆ.
* ಖಾರದ ಪುಡಿ ಹಾಗೂ ಉಡಿ ಡಬ್ಬಿಗಳಲ್ಲಿ ಒಂದು ಹಿಡಿಯುಪ್ಪು ಮತ್ತು ಸ್ವಲ್ಪ ಇಂಗನ್ನು ಬಟ್ಟೆಗೆ ಕಟ್ಟಿ ಹಾಕಿದರೆ ವರ್ಷವಿಟ್ಟರು ಕೆಡುವುದಿಲ್ಲ.
* ಸಾಸಿವೆ, ಕಡಲೆ ಕಾಯಿ ಬೀಜ, ಜೀರಿಗೆ, ಎಳ್ಳು ಮುಂತಾದ ದಾನ್ಯ ಗಳನ್ನು ಸಮಯವಿದ್ದಾಗ ಉರಿದು ಹಾರಿಸಿ ಡಬ್ಬಿಯಲ್ಲಿ ತುಂಬಿಟ್ಟರೆ ಬಹಳ ದಿನದವರೆಗೂ ಕೆಡುವುದಿಲ್ಲ ಸಮಯವಿದ್ದಾಗ ನಾವು ಅದನ್ನು ಉಪಯೋಗಿಸಬಹುದು. ಇದರಿಂದ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.
ಇಂತಹ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ಹೇಗೆ ಎಷ್ಟು ದಿನದವರೆಗೆ ಇಡಬಹುದು ಎನ್ನುವಂತಹ ಮಾಹಿತಿ ತಿಳಿಯುತ್ತದೆ. ಹಾಗೂ ಅದು ಹಾಳಾಗದಂತೆ ಇಂತಹ ವಿಧಾನಗಳನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯ ವಾಗಿರುತ್ತದೆ.
ಹೌದು ಮನೆಯಲ್ಲಿರುವಂತಹ ಮಹಿಳೆಯರು ಅಡುಗೆ ಮನೆಯ ವಿಚಾರವಾಗಿ ಅಡುಗೆ ಮನೆಯಲ್ಲಿ ಉಪಯೋಗಿಸುವ ಸಾಮಾನುಗಳ ವಿಚಾರವಾಗಿ ಅವುಗಳನ್ನು ಹೇಗೆ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಅದು ಹಾಳಾಗದಂತೆ ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸ ಬೇಕು ಎನ್ನುವ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಇಲ್ಲವಾದರೆ ಅವೆಲ್ಲವೂ ಕೂಡ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮೇಲೆ ಹೇಳಿದ ಅಷ್ಟು ವಿಧಾನಗಳನ್ನು ಕೂಡ ನೀವು ಅನುಸರಿಸುವುದರಿಂದ ಯಾವುದೇ ಪದಾರ್ಥಗಳನ್ನು ಹಾಳು ಮಾಡುವ ಅವಶ್ಯಕತೆ ಬರುವುದಿಲ್ಲ ಹಾಗು ಅದನ್ನು ಹೆಚ್ಚು ದಿನಗಳ ವರೆಗೆ ಶೇಖರಣೆ ಮಾಡಿಕೊಳ್ಳಬಹುದು. ಈ ಮಾಹಿತಿ ಮನೆಯಲ್ಲಿರು ವಂತಹ ಪ್ರತಿಯೊಬ್ಬರಿಗೂ ಕೂಡ ತುಂಬಾ ಅನುಕೂಲವಾಗಿದ್ದು ಎಲ್ಲರೂ ಕೂಡ ಈ ವಿಧಾನ ಅನುಸರಿಸುವುದು ಕೂಡ ಅಷ್ಟೇ ಬಹಳ ಮುಖ್ಯವಾಗಿರುತ್ತದೆ.