Home Useful Information SSLC ಆಯ್ತು ಮುಂದೇನು? ಯಾವ ಕೋರ್ಸ್ ಬೆಸ್ಟ್.? ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಲ್ಲಿದೆ ಕೆಲವು ಸಲಹೆ

SSLC ಆಯ್ತು ಮುಂದೇನು? ಯಾವ ಕೋರ್ಸ್ ಬೆಸ್ಟ್.? ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಲ್ಲಿದೆ ಕೆಲವು ಸಲಹೆ

0
SSLC ಆಯ್ತು ಮುಂದೇನು? ಯಾವ ಕೋರ್ಸ್ ಬೆಸ್ಟ್.? ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಲ್ಲಿದೆ ಕೆಲವು ಸಲಹೆ

SSLCವರೆಗೂ ವಿದ್ಯಾರ್ಥಿ ಜೀವನ ಒಂದು ರೀತಿಯಾಗಿ ಇರುತ್ತದೆ. ನಂತರದ ಶೈಕ್ಷಣಿಕ ಶಿಕ್ಷಣವೇ ಬೇರೆ ರೀತಿ ಇರುತ್ತದೆ. ಯಾಕೆಂದರೆ SSLC ತನಕ ಹೆಚ್ಚಿನ ಬದಲಾವಣೆ ವಿದ್ಯಾರ್ಥಿಗಳ ಜೀವನದಲ್ಲಿ ಇರುವುದಿಲ್ಲ. ಬಹುತೇಕ ಅಭ್ಯರ್ಥಿಗಳು ಶಾಲೆಗೆ ಸೇರಿದ ದಿನದಿಂದಲೂ ಕೂಡ 10 ವರ್ಷಗಳವರೆಗೆ ಒಂದೇ ಶಾಲೆಯಲ್ಲಿ ಓದಿರುತ್ತಾರೆ. ಅದೇ ಟೀಚರ್ ಗಳು, ಜೊತೆಗಿದ್ದ ಅದೇ ಸ್ನೇಹಿತರು, ಒಂದೇ ರೀತಿಯ ಸಿಲಬಸ್ಸು, ತಮ್ಮ ಊರುಗಳಲ್ಲಿ ಇರುವ ಶಾಲೆಗಳು ಈ ರೀತಿ ಸೌಲಭ್ಯಗಳಿಂದ ಇದ್ದ ಕಾರಣ SSLC ಪರೀಕ್ಷೆ ಆದಮೇಲೆ ಬಳಿಕ ಮುಂದಿನ ಶಿಕ್ಷಣದ ಬಗ್ಗೆ ನಿರ್ಧಾರ ಬಂದಾಗ ಒಂದು ಕ್ಷಣ ಗಾಬರಿಗೊಳ್ಳುತ್ತಾರೆ.

ಫಲಿತಾಂಶ ಬಂದ ದಿನದಿಂದಲೂ ಈ ಬಗ್ಗೆ ಚರ್ಚೆ ಶುರುವಾಗಿ ಬಿಡುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲಾವಕಾಶ ಕಡಿಮೆ ಇದ್ದರಂತೂ ವಿದ್ಯಾರ್ಥಿಗಳ ಮೇಲೆ ಇದರ ಒತ್ತಡ ತುಸು ಹೆಚ್ಚೇ ಇರುತ್ತದೆ. ಈಗಷ್ಟೇ ರಾಜ್ಯದಲ್ಲಿ ಕರ್ನಾಟಕದ ಪ್ರೌಢ ಶಿಕ್ಷಣ ಮಂಡಳಿಯು 2022-23ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ರಿಸಲ್ಟ್ ಅನೌನ್ಸ್ ಮಾಡಿದೆ. ಈಗ ರಾಜ್ಯದಲ್ಲಿ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮುಂದೆ ಏನು ಎನ್ನುವ ಕನ್ಫ್ಯೂಷನ್ ಶುರು ಆಗಿದೆ.

ಹಲವರು ಅಂಕಗಳ ಆಧಾರದ ಮೇಲೆ ಮನೆಯಲ್ಲಿ ಹಿರಿಯರು ಏನು ಹೇಳಿದ್ದಾರೆ ಅದನ್ನು ಕೇಳಿ ಸೇರಿಕೊಂಡರೆ ಇನ್ನೂ ಕೆಲವರು ತಮಗಿರುವ ಅನುಕೂಲತೆ ಆಧಾರದ ಮೇಲೆ ಅಥವಾ ಆಸಕ್ತಿಗಳ ಅನುಸಾರವಾಗಿ ಬೇರೆ ವಿಭಾಗಕ್ಕೆ ಹೋಗುತ್ತಾರೆ. ಇನ್ನು ಕೆಲವರಿಗೆ ಏನೇನು ಆಯ್ಕೆಗಳಿವೆ ಎನ್ನುವುದೇ ಗೊತ್ತಿರುವುದಿಲ್ಲ. ಹತ್ತಿರದ ಕಾಲೇಜು ಅಥವಾ ಊರು ತನ್ನೂರಿನಲ್ಲೇ ಇರುವ ಯಾವುದೋ ಕೋರ್ಸ್ಗೆ ಸೇರಿಕೊಂಡು ಮುಂದೊಂದು ದಿನ ಸಮಯ ಹಾಗೂ ಭವಿಷ್ಯ ಎರಡು ಹಾಳಾಯಿತು ಎಂದು ವ್ಯಥೆ ಪಡುತ್ತಾರೆ.

ಹಾಗೆ ಈ ಅಂಕಣದಲ್ಲಿ SSLC ನಂತರ ವಿದ್ಯಾರ್ಥಿಗಳು ಯಾವೆಲ್ಲ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಯಾವ ಕೋರ್ಸ್ ಆಯ್ದುಕೊಂಡರೆ ಯಾವ ಸಬ್ಜೆಕ್ಟ್ ಇರುತ್ತದೆ ಆದ್ದರಿಂದ ಭವಿಷ್ಯದಲ್ಲಿ ಏನೆಲ್ಲಾ ಉಪಯೋಗ ಬರುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇದೆ. SSLC ಆದ ಬಳಿಕ ವಿದ್ಯಾರ್ಥಿಗಳು ಓದುವ ಸಬ್ಜೆಕ್ಟ್ ಮೇರೆಗೆ ಮುಂದಿನ ಪದವಿ ಅಥವಾ ಸ್ನಾತಕೋತ್ತರ ಪದವಿ ಶಿಕ್ಷಣಗಳು ನಿರ್ಧಾರ ಆಗುತ್ತದೆ ಮತ್ತು ಅವರು ಆಯ್ದುಕೊಳ್ಳುವ ಆಯ್ಕೆಗಳ ಮೇರೆಗೆ ಅವರ ಉದ್ಯೋಗ ಭವಿಷ್ಯವೂ ಕೂಡ ನಿರ್ಧಾರವಾಗುತ್ತದೆ.

ಹಾಗಾಗಿ ಇದು ತಮಾಷೆಯ ವಿಚಾರವೂ ಅಲ್ಲ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿರುವ ಅಡಿಗಲ್ಲುಗಳು ಎಂದೇ ಹೇಳಬಹುದು. ಆದರೆ SSLC ವರೆಗೂ ಒಂದೇ ರೀತಿ ಇದ್ದ ಶಿಕ್ಷಣ ಪದ್ಧತಿ ನಂತರ ಕವಲೊಡೆದು ಹಲವು ದಾರಿಗಳನ್ನು ತೋರಿಸುತ್ತದೆ. ಪಿಯುಸಿ ಆರಿಸಿಕೊಂಡರೆ ಅದರಲ್ಲೂ ಆರ್ಟ್ಸ್ ಕಾಮರ್ಸ್ ಸೈನ್ಸ್ ಎನ್ನುವ ವಿಭಾಗ ಇರುತ್ತದೆ. ಇದು ಬೇಡ ಎನ್ನುವವರಿಗೆ ಐಟಿಐ ಮತ್ತು ಡಿಪ್ಲೋಮೋ ಅಂತಹ ತಾಂತ್ರಿಕೇತರ ಅವಕಾಶಗಳು ಇರುತ್ತವೆ.

ಇನ್ನು ಮೆಡಿಕಲ್ ಕ್ಷೇತ್ರ ಆರಿಸಿಕೊಳ್ಳುವವರಿಗೆ ಸೀದಾ ಪಾರಮೆಡಿಕಲ್ ಕೋರ್ಸ್ಗೆ ಜಾಯಿನ್ ಆಗಬಹುದು. NTTF ಅವಕಾಶಗಳು ಇರುತ್ತದೆ. ಹೀಗಾಗಿ ಇವುಗಳಲ್ಲಿ ಯಾವುದು ಬೆಸ್ಟ್ ಎಂದು ಕನ್ಫ್ಯೂಷನ್ ಶುರು ಆಗುತ್ತದೆ. ನೀವು ಕೂಡ ಈ ವರ್ಷ ಪರೀಕ್ಷೆಗಳಾಗಿದ್ದು ಇವುಗಳಲ್ಲಿ ನಿಮಗೂ ಗೊಂದಲ ಇದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಂತರ ಒಂದು ಸರಿಯಾದ ನಿರ್ಧಾರವನ್ನು ಮಾಡಿ.

LEAVE A REPLY

Please enter your comment!
Please enter your name here