ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಜೀವನವನ್ನು ಸರಾಗಗೊಳಿಸಲು ಸರ್ಕಾರಗಳು (Government) ಅನೇಕ ಕ್ರಮಗಳನ್ನು ಕೈಗೊಂಡಿವೆ. ಇವರ ಮೂಲಭೂತ ಅಗತ್ಯಗಳ ಪೂರೈಕೆಗೆ ಸದಾ ಹೊಸ ಹೊಸ ಯೋಜನೆಗಳನ್ನು ಪರಿಚಿಸುವ ಸರ್ಕಾರವು ದುಡಿಯುವ ವರ್ಗದ ಜನರ ವಿದ್ಯಾಭ್ಯಾಸದ ಜೀವನ ನಿರ್ವಹಣೆ ಬಗ್ಗೆ ಕೂಡ ಯೋಚಿಸಿದೆ.
ಅದಕ್ಕಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಹಿರಿಯ ನಾಗರಿಕದ ಪಿಂಚಣಿ ಯೋಜನೆ, ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಇನ್ನಿತರ ಅನುಕೂಲತೆಯನ್ನು ಮಾಡಿ ಕೊಟ್ಟಿದೆ. ಇದರೊಂದಿಗೆ ಮಾಸಿಕವಾಗಿ 5000 ವರೆಗೂ ಪಿಂಚಣಿ ಪಡೆಯಬಹುದಾದ ಮತ್ತೊಂದು ಯೋಜನೆಯನ್ನು ಪರಿಚಯಿಸಿದೆ.
ಅಟಲ್ ಪಿಂಚಣಿ ಯೋಜನೆ (Atal Pension Scheme) ಎನ್ನುವ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು 60 ವರ್ಷವಾದ ಬಳಿಕ ಗರಿಷ್ಠ 5000 ವರೆಗೂ ಕೂಡ ಪಿಂಚಣಿ ಪಡೆಯಬಹುದು. ಹಾಗಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏನೆಲ್ಲಾ, ನಿಯಮಗಳಿವೆ ಬೇಕಾಗುವ ದಾಖಲೆಗಳೇನು? ಯಾವ ವಯಸಿನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಪೆನ್ಷನ್ ಸಿಗುತ್ತದೆ ಎನ್ನುವುದರ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ.
* ಭಾರತೀಯ ನಾಗರಿಕರು ಮಾತ್ರ ಅಟಲ್ ಪಿಂಚಣಿ ಯೋಜನೆ ಹೂಡಿಕೆ ಮಾಡಬಹುದು
* ಇದೊಂದು ಪಿಂಚಣಿ ಯೋಜನೆಯಾಗಿತ್ತು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು 60 ವರ್ಷವಾದ ಬಳಿಕ ಪಿಂಚಣಿ ಪಡೆಯಬಹುದು. 22 ವರ್ಷಗಳ ಕಾಲ ಹೂಡಿಕೆ ಮಾಡಿರಬೇಕು,
18 ವರ್ಷ ಮೇಲ್ಪಟ್ಟ 42 ವರ್ಷದ ವಯಸ್ಸಿನ ಒಳಗಿರುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
* ಗರಿಷ್ಠ 5000 ವರೆಗೆ ಕೂಡ ಪಿಂಚಣಿ ಪಡೆಯಬಹುದು
* ಈ ಯೋಜನೆಯಡಿ ದಂಪತಿಗಳಿಬ್ಬರೂ ಕೂಡ ಪಿಂಚಣಿ ಪಡೆದುಕೊಳ್ಳುವ ಅನುಕೂಲತೆ ಮಾಡಿಕೊಡಲಾಗಿದೆ.
ಉದಾಹರಣೆಗೆ ಒಬ್ಬ ವ್ಯಕ್ತಿಯು ಅಟಲ್ ಪಿಂಚಣಿ ಯೋಜನೆಗೆ ಹೂಡಿಕೆ ಮಾಡುತ್ತಾ ಪಿಂಚಣಿ ಪಡೆಯುವ ಸಮಯದಲ್ಲಿ ಮೃ’ತಪಟ್ಟಿದ್ದರೆ ಆತನ ಮಡದಿಗೂ ಕೂಡ ಅಷ್ಟೇ ಪಿಂಚಣಿ ಬರುತ್ತದೆ.
ಆಕೆಯ ಮ’ರ’ಣ’ದ ನಂತರ ನಾಮಿನಿಗೆ ಹಣ ಹೋಗುತ್ತದೆ. ಒಂದು ವೇಳೆ ವ್ಯಕ್ತಿಯು ಈ ಯೋಚನೆಯಡಿ ಹೂಡಿಕೆ ಮಾಡಿ 60 ವರ್ಷಕ್ಕೂ ಮೊದಲೇ ಮೃ’ತಪಟ್ಟ ಸಮಯದಲ್ಲಿ ಪಕ್ಷದಲ್ಲಿ ಹೆಂಡತಿ ಅದನ್ನು ಮುಂದುವರಿಸಿಕೊಂಡು ಹೋಗಲು ಇಚ್ಚಿಸಿದರೆ 60 ವರ್ಷದವರೆಗೂ ಪೂರೈಸಿಕೊಂಡು ಹೋಗಿ 60 ವರ್ಷದ ನಂತರ ಪಿಂಚಣಿ ಪಡೆಯಬಹುದು. ಇಲ್ಲವಾದಲ್ಲಿ ಆ ಸಮಯದಲ್ಲಿ ಅದನ್ನು ರ’ದ್ದುಪಡಿಸಿ ಹೂಡಿಕೆ ಮೊತ್ತ ಹಿಂಪಡೆಯಬಹುದು.
* ಬೇರೆ ಯಾವ ಕಾರಣದಿಂದಲೂ ಕೂಡ ಒಮ್ಮೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಮುರಿಯಲು ಅವಕಾಶವಿಲ್ಲ.
* ಈ ಯೋಜನೆಯಡಿ ಹೂಡಿಕೆ ಮಾಡಲು ಅಂಚೆ ಕಚೇರಿ ಅಥವಾ ಯಾವುದಾದರೂ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಸಾಕು. * ಯೋಜನೆಗೆ ನೋಂದಾಯಿಸಿಕೊಂಡ ನಂತರ ಪ್ರತಿ ತಿಂಗಳು ಆಟೋಮೆಟಿಕ್ ಆಗಿ ನಿಮ್ಮ ಖಾತೆಯಿಂದ ಯೋಜನೆಗೆ ಹಣ ಕಡಿತಗೊಳ್ಳುತ್ತದೆ.
* ಆನ್ಲೈನ್ ಆಫ್ಲೈನ್ ಎರಡು ವಿಧಾನದ ಮೂಲಕವಾಗಿ ಕೂಡ ಯೋಜನೆಯನ್ನು ಖರೀದಿಸಲು ಅವಕಾಶವಿದೆ. ಆನ್ಲೈನಲ್ಲಿ ಬ್ಯಾಂಕ್ ಆಪ್ ಮೂಲಕ ಅಥವಾ ಆಫ್ಲೈನ್ ನಲ್ಲಿ ನೇರವಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ಕೊಡುವ ಮೂಲಕ ಯೋಜನೆ ಖರೀದಿಸಬಹುದು. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿ ಪಡೆಯಿರಿ ಅಥವಾ ನಿಮ್ಮ ಹತ್ತಿರದ ಅಂಚೆ ಕಛೇರಿ ಮತ್ತು ಬ್ಯಾಂಕ್ ಗಳಲ್ಲಿ ವಿಚಾರಿಸಿ.