ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದುವರೆಗೆ ಕನ್ನಡದಲ್ಲಿ 45 ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸೂಪರ್ ಹಿಟ್ ಆದ ಹಿಟ್ ಚಿತ್ರಗಳ ಹೆಸರೇ ಹೆಚ್ಚಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಕೂಡ ತನ್ನ ಹೆಜ್ಜೆಗುರುತು ಮೂಡಿಸಿ ಬಂದಿರುವ ಕಿಚ್ಚ ಸುದೀಪ್ ಅವರು ಕರುನಾಡಿನ ರನ್ನ ಎಂದು ಕರೆಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಕಳೆದ ವಾರವಷ್ಟೇ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಾವು ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸುವುದಾಗಿ ಮತ್ತು ಅವರಿಗಾಗಿ ಪ್ರಚಾರ ಕಾರ್ಯ ಮಾಡುವುದಾಗಿ ಅವರು ಹೇಳಿದ ವ್ಯಕ್ತಿ ಪರವಾಗಿ ಕೂಡ ಪ್ರಚಾರ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಇದೇ ಬೆನ್ನಲ್ಲೇ ಈ ವಿಷಯದ ಬಗ್ಗೆ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳು ಏರ್ಪಟ್ಟಿದ್ದು ಕೆಲವರು ಇದು ಸುದೀಪ್ ಹಣದ ಆಸೆಗಾಗಿ ಪ್ರಚಾರದಲ್ಲಿ ಭಾಗಿಯಾಗಿರಬಹುದು, ಬಿಜೆಪಿ ಪಕ್ಷ ಅವರಿಗೆ ದೊಡ್ಡ ಮೊತ್ತದ ಹಣ ಕೊಟ್ಟು ತನ್ನ ತೆಕ್ಕೆಗೆ ಬೀಳಿಸಿಕೊಂಡಿದೆ ಎನ್ನುವ ಅರೋಪವನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಆ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದರು.
ನಾನು ಹಣಕ್ಕಾಗಿ ಅಥವಾ ಮತ್ಯಾವುದೋ ಆಸೆಗಾಗಿ ಅಥವಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ, ರಾಜಕೀಯ ಭವಿಷ್ಯ ಕಂಡುಕೊಳ್ಳಲು ಈ ರೀತಿ ಪ್ರಚಾರ ಮಾಡುತ್ತಿಲ್ಲ ಬಸವರಾಜ್ ಬೊಮ್ಮಾಯಿ ಅವರು ನನಗೆ ಬಹಳ ಆತ್ಮೀಯರು ಅವರ ಮೇಲಿನ ಪ್ರೀತಿ ವಿಶ್ವಾಸ ಹಾಗೂ ಸ್ನೇಹಕ್ಕಾಗಿ ನಾನು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಸ್ಪಷ್ಟತೆ ಕೊಟ್ಟಿದ್ದರು.
ಇದಾದ ಮೇಲೆ ಅವರ ಆಸ್ತಿ ಮೌಲ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಕಿಚ್ಚ ಸುದೀಪ್ ಅವರು ಅಗರಾಭ ಶ್ರೀಮಂತ. ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು ಎಂದು ಹೇಳಬಹುದು. ಆ ರೀತಿ ಬಡತನದ ಬವಣನೆಯನ್ನೇ ಕಾಣದ ರೀತಿ ಇವರು ಬೆಳೆದಿದ್ದಾರೆ.
ಸಿನಿಮಾ ನಾಯಕ ಆಗಬೇಕು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವರು ಅವರ ಜೀವನದಲ್ಲಿ ಸಾಕಷ್ಟು ನೋವು, ಅವಮಾನ, ದುಃಖ ಪಟ್ಟಿದ್ದಾರೆ ಹೊರತುಪಡಿಸಿ ಅವರ ಜೀವನದಲ್ಲಿ ಬೇರೆ ಯಾವ ವಿಷಯಕ್ಕೂ ಕಿಂಚಿತ್ತು ಕೊರತೆ ಇರಲಿಲ್ಲ. ಸುದೀಪ್ ಅವರ ತಂದೆ ಸಂಜೀವ್ ಅವರು ಹೋಟೆಲ್ ಉದ್ಯಮಿ ಸರೋವರದಂತಹ ಫೈವ್ ಸ್ಟಾರ್ ಹೋಟೆಲ್ ಮಾಲಿಕರಾಗಿದ್ದ ಇವರು ಸಿನಿಮಾ ನಿರ್ಮಾಪಕರು ಆಗಿದ್ದರು.
ನಾಯಕ ನಟನಾಗಿ ಇಂಡಸ್ಟ್ರಿಗೆ ಕಾಲಿಟ್ಟ ಸುದೀಪ್ ಕೂಡ ಈಗ ಹಲವು ಆದಾಯದ ಮೂಲಕ ಕಂಡುಕೊಂಡಿದ್ದಾರೆ. ಕಿರುತೆರೆ ಧಾರಾವಾಹಿಗಳ ನಿರ್ಮಾಪಕನಾಗಿ ಮತ್ತು ಜಾಹೀರಾತುಗಳ ಬ್ರಾಂಡ್ ಅಂಬಾಸಿಡರ್ ಆಗಿ, ಪ್ಯಾನ್ ಇಂಡಿಯಾ ಸಿನಿಮಾಗಳ ಸ್ಟಾರ್ ಹೀರೋ ಆಗಿ, ಜನಪ್ರಿಯ ಕಾರ್ಯಕ್ರಮಗಳ ನಿರೂಪಕನಾಗಿ ಮಿಂಚುತ್ತಿರುವ ಇವರು ಒಂದು ಸಿನಿಮಾಗೆ ಎಂಟರಿಂದ ಹತ್ತು ಕೋಟಿ ಸಂಭಾವನೆ ಪಡೆಯುತ್ತಾರಂತೆ.
ಇದುವರೆಗೆ ಸುದೀಪ್ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎನ್ನುವುದರ ಬಗ್ಗೆ ಸ್ಪಷ್ಟತೆ ಇರದೇ ಇದ್ದರೂ ಅವರ ಬಳಿ ಇರುವ ದುಬಾರಿ ವಾಹನ ಗಣತಿ ಇದೆ. ಜಾಗ್ವಾರ್, ರೇಂಜ್ ರೋವರ್, ರೇಂಜ್ ರೋವರ್ ವೋಗ್ಯ 3.0, ರಾಂಗ್ಲರ್ ಜೀಪ್, ವೋಲ್ವೋ XC90 ಇನ್ನು ಮುಂತಾದ ಕೋಟಿಗಿಂತಲೂ ಬೆಲೆಬಾಳುವ ಐಷಾರಾಮಿ ಕಾರುಗಳಿವೆ ಹಾಗೂ ದುಬಾರಿ ಬೆಲೆಯ ಬೈಕಗಳು ಇವೆ. ಜೆಪಿ ನಗರದಲ್ಲಿ ಅರಮನೆಂತಹ ಭವ್ಯ ಬಂಗಳೆ ಕೂಡ ಇದೆ. ಮತ್ತು ಏಳುಕೋಟಿ ಕನ್ನಡಿಗರ ಪ್ರೀತಿ ಕಿಚ್ಚ ಸುದೀಪ್ ಅವರ ಮೇಲೆ ಇರುವುದು ಅತ್ಯಂತ ಬೆಲೆ ಬಾಳುವ ಆಸ್ತಿ ಎಂದೂ ಹೇಳಬಹುದು.