Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.

ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ ನೀಡಿದ ಭರ್ಜರಿ ಗಿಫ್ಟ್ ನೋಡಿ ತಾಯಿಗೆ ತಕ್ಕ ಮಗ.

ಸ್ಯಾಂಡಲ್ ವುಡ್ ನಾ ಕರ್ಣ ಅಂತಾನೆ ಹೆಸರುವಾಸಿ ಆದಂತಹ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಅವರು ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳೆ ಆಗಿದೆ. ಈಗಾಗಲೇ ಅಭಿಷೇಕ್ ಅಂಬರೀಶ್ ಅಭಿನಯಿಸಿದಂತಹ ಅಮರ್ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಕಲೆಕ್ಷನ್ ಮಾಡಲಿಲ್ಲ. ಆದರೂ ಕೂಡ ಮೊದಲ ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡರು ಅಮರ್ ಸಿನಿಮಾದ ನಂತರ ಈಗಾಗಲೇ ಎರಡು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಅವರ ಬಿದ್ದಿದೆ. ಕಾಳಿ ಎಂಬ ಸಿನಿಮಾದ ಪೋಸ್ಟರ್ ಕೂಡ ರಿವಿಲ್ ಆಗಿದ್ದು ಅಭಿಷೇಕ್ ಅಂಬರೀಶ್ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಅಭಿಷೇಕ್ ಅಂಬರೀಶ್ ಅವರು ತಂದೆ ತಾಯಿಗೆ ತಕ್ಕ ಮಗ ಅಂತಾನೇ ಹೇಳಬಹುದು ಇಲ್ಲಿಯವರೆಗೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಮಾಡಿಕೊಂಡಿಲ್ಲ. ತಂದೆ ನಡೆದು ಬಂದ ಹಾದಿಯಲ್ಲಿ ಸಾಗುತ್ತಿದ್ದರೆ ಹಲವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದು ಕಡೆ ತಮ್ಮ ಸಿನಿಮಾ ಜರ್ನಿಯಲ್ಲಿ ಮುಂದುವರಿಯುತ್ತಿದ್ದು ಮತ್ತೊಂದು ಕಡೆ ತಮ್ಮ ತಾಯಿಯ ರಾಜಕೀಯ ಕೆಲಸದಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಭಿಷೇಕ್ ಅಂಬರೀಶ್ ಅವರು ಒಂದು ಕಡೆ ರಾಜಕೀಯದಲ್ಲಿ ಮತ್ತೊಂದು ಕಡೆ ಸಿನಿಮಾರಂಗದಲ್ಲಿ ಎರಡರಲ್ಲೂ ಕೂಡ ಮುಂದುವರೆದುಕೊಂಡು ಹೋಗುತ್ತಿದ್ದರೆ ಎರಡನ್ನು ಕೂಡ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇಂದು ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬ ಹಾಗಾಗಿ ತಮ್ಮ ತಾಯಿಗೆ ಅಭಿಷೇಕ್ ಅಂಬರೀಶ್ ಅವರು ಉಡುಗೊರೆಯಾಗಿ ಸಂತಸದ ಸುದ್ದಿ ಒಂದನು ನೀಡಿದರೆ. ಹೌದು ಅಭಿಷೇಕ್ ಅಂಬರೀಶ್ ಅಭಿನಯದ ನಾಲ್ಕನೇ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.

ತಾಯಿಗೆ ಮಗನ ಯಶಸ್ಸಿಗಿಂತ ಬೇರೆ ಉಡುಗೊರೆ ಇಲ್ಲ ಎಂಬುದು ನಿಮ್ಮೆಲ್ಲರಿಗೂ ತಿಳಿಯದೆ ತನ್ನ ಮಗ ಎತ್ತರದ ಸ್ಥಾನಕ್ಕೆ ಹೋಗಬೇಕು ಸಮಾಜದಲ್ಲಿ ನಾಲ್ಕು ಜನ ಮೆಚ್ಚುವಂತಹ ಕೆಲಸವನ್ನು ಮಾಡಬೇಕು ಸಿನಿಮಾ ರಂಗದಲ್ಲಿ ಮುಂದುವರಿಯಬೇಕು ದೊಡ್ಡ ನಟನಾಗಿ ಗುರುತಿಸಿಕೊಳ್ಳಬೇಕು ಎಂಬುವುದೇ ತಾಯಿಯ ಆಶಯವಾಗಿರುತ್ತದೆ. ಹಾಗಾಗಿ ಸುಮಲತಾ ಅವರ ಹುಟ್ಟು ಹಬ್ಬಕ್ಕೆ ತಮ್ಮ ಮಗನ ನಾಲ್ಕನೇ ಸಿನಿಮಾವನ್ನು ಘೋಷಣೆ ಮಾಡುವುದಾಗಿ ಇದೀಗ ಅಭಿಷೇಕ್ ಅಂಬರೀಶ್ ಅವರು ಹೇಳಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅಭಿಷೇಕ್ ಅಂಬರೀಶ್ ಅವರು ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸ್ಮಾರಕದ ಮುಂದೆ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕರ ಹೆಸರನ್ನು ಘೋಷಿಸಲಾಗುತ್ತಿದ್ದು.

ಈ ಸಿನಿಮಾವನ್ನು ಮದಗಜ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಈಗಾಗಲೇ ಅಂಬರೀಶ್ ಅವರ ಹುಟ್ಟು ಹಬ್ಬದಂದು ಸಿನಿಮಾ ಘೋಷಣೆ ಮಾಡಲಾಗಿತ್ತು. ಅಭಿಷೇಕ್ ಅವರ ನಾಲ್ಕನೇ ಸಿನಿಮಾ ಇದಾಗಿದ್ದು ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿರ್ದೇಶಕ ಮಹೇಶ್ ಕುಮಾರ್ “ಕಳೆದ ಬಾರಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದೇವು ಈ ಬಾರಿ ಮೋಷನ್ ಪೋಸ್ಟರ್ ಮತ್ತು ನಿರ್ಮಾಪಕ ಹೆಸರು ಘೋಷಣೆ ಮಾಡುತ್ತಿದ್ದೇವೆ ಭಾರತೀಯ ಸಿನಿಮಾ ರಂಗದಲ್ಲಿ ನಾನಾ ಭಾಷೆಯ ಸಿನಿಮಾಗಳನ್ನು ಮಾಡಿರುವ ಹೆಸರಾಂತ ನಿರ್ಮಾಣ ಸಂಸ್ಥೆಯು ಈ ಚಿತ್ರವನ್ನು ತಯಾರು ಮಾಡುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಇವೆಲ್ಲವನ್ನು ನೋಡುತ್ತಿದ್ದರೆ ಅಭಿಷೇಕ್ ಅಂಬರೀಶ ಅವರ ನಾಲ್ಕನೇ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ ಎಂಬುದು ಕೆಲವು ಸಿನಿ ರಸಿಕರ ಅಭಿಪ್ರಾಯವಾಗಿದೆ. ಇಷ್ಟು ದಿನ ಕರ್ನಾಟಕದಲ್ಲಿ ರಾರಾಜಿಸುತ್ತಿದ್ದಂತಹ ಅಭಿಷೇಕ್ ಅಂಬರೀಶ್ ಅವರು ಇನ್ನು ಮುಂದೆ ಪಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ತಮ್ಮ ತಾಯಿಯ ಹುಟ್ಟು ಹಬ್ಬಕ್ಕೆ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿ ಆಕೆಗೆ ಹೆಚ್ಚಿನ ಖುಷಿಯನ್ನು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ