ಅಂಬೇಡ್ಕರ್, ಬಸವಣ್ಣ, ಶ್ರೀ ರಾಮನ ಕುರಿತು ಹಾಸ್ಯ ಮಾಡುವುದು ತಪ್ಪಲ್ಲ ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕ ನೀಡಿದ ನಟ ಅಹಿಂಸ ಚೇತನ್.
ಆ ದಿನಗಳು, ಬಿರುಗಾಳಿ, ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್ (Actor Chethan) ಅವರು ಸದಾ ಒಂದಲ್ಲ ಒಂದು ವಿವಾದಗಳಲ್ಲಿ (contreversy) ಸಿಲುಕಿಕೊಂಡಿರುತ್ತಾರೆ. ಇವರೇ ಕಾಂಟ್ರವರ್ಸಿಯನ್ನು ಹುಡುಕಿ ಹೋಗುತ್ತಾರೋ ಅಥವಾ ಇವರು ಮಾತನಾಡುವುದಿಲ್ಲವೂ ವಿವಾದವಾಗುತ್ತದೋ ಗೊತ್ತಿಲ್ಲ ವಿವಾದಾತ್ಮಕ ನಟ ಚೇತನ್ ಎನಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಆಗಾಗ ಸರ್ಕಾರದ ವಿರುದ್ಧ ಅಥವಾ ಕೆಲವು ಪ್ರಚಲಿತ ಘಟನೆ ಬಗ್ಗೆ ಮಾತನಾಡಿ ವಿವಾದಕ್ಕೂ ಸಿಲುಕುತ್ತಾರೆ. ಅವರು ಏನೇ ಮಾತನಾಡಿದರು ಅದನ್ನು ಸಹಿಸಿಕೊಳ್ಳಲು ನಮ್ಮವರಿಗೆ…