ಅಯ್ಯಪ್ಪನ ಹಾಗೇ ಇನ್ಮುಂದೆ ಅಪ್ಪುಗೂ ಮಾಲೆ ಹಾಕಿ ದರ್ಶನ ಮಾಡುವುದಾಗಿ ಅಭಿಯಾನ ಆರಂಭಿಸಿದ ಅಪ್ಪು ಫ್ಯಾನ್ಸ್. ಪೋಸ್ಟರ್ ನೋಡಿ ನೆಟ್ಟಿಗರು ಹೇಳುತ್ತಿರೋದೇನು ಗೊತ್ತ.?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಬ್ಬ ನಟನಾಗಿ ಮತ್ತು ಒಬ್ಬ ಜವಾಬ್ದಾರಿಯುತ ಸೆಲೆಬ್ರಿಟಿ ಆಗಿ ವಿಶ್ವದಾದ್ಯಂತ ಎಲ್ಲರೂ ಅನುಸರಿಸುವ ರೀತಿ ಆದರ್ಶ ಬದುಕನ್ನು ಬದುಕಿ ಹೋಗಿದ್ದಾರೆ. ಅವರ ಸಮಾಜ ಸೇವೆ, ಊಹೆಗೂ ನಿಲುಕದ್ದು ಮತ್ತು ಅವರ ವೈಯುಕ್ತಿಕ ಜೀವನ ಕೂಡ ಅಷ್ಟೇ ಶ್ರೇಷ್ಠವಾಗಿತ್ತು. ಸಿನಿಮಾಗಳ ಆಯ್ಕೆ ವಿಚಾರದಲ್ಲೂ ಕೂಡ ಚ್ಯೂಸಿ ಆಗಿದ್ದ ಇವರು ಸಮಾಜ ಮುಖಿಯಾಗಿದ್ದರು. ಆದರೆ ಇವರ ಹೃದಯವಂತಿಕೆ ಅವರ ಅಂತ್ಯದ ನಂತರ ಜನರಿಗೆ…