ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?
ಸಾಮಾಜಿಕ ಜಾಲತಾಣ ಎನ್ನುವುದು ಈಗ ಎಲ್ಲರ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಶಾಲಾ ಮಕ್ಕಳಿಂದ, ಯುವಕರು, ವೃದ್ಧರು ಹೀಗೆ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾ ದಾಸರುಗಳೇ ಎಂದೂ ಹೇಳಬಹುದು. ಸೋಶಿಯಲ್ ಮೀಡಿಯಾ ಈಗ ಜಗತ್ತಿನ ಎಲ್ಲರನ್ನೂ ಒಂದೇ ಎಳೆಯಲಿ ಬೆಸೆದಿರುವ ಒಂದು ಬೆಸುಗೆ ಎಂದು ಹೇಳಬಹುದು. ಲಕ್ಷಗಟ್ಟಲೆ ಮೈಲಿ ದೂರದಲ್ಲಿರುವವರನ್ನು ಕೂಡ ಬೆರಳ ತುದಿಯ ಮೊಬೈಲ್ ಮೂಲಕ ಸಂಪರ್ಕಿಸಿ ಸಂವಹನ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಆಪ್ ಗಳು ಬಹಳ ಅನುಕೂಲಕರ ಆಗಿವೆ. ಅದರಲ್ಲೂ ಫೇಸ್ಬುಕ್, ಯೂಟ್ಯೂಬ್…