ನನ್ಗೂ ಸಂಗಾತಿ ಬೇಕು ಅನ್ಸುತ್ತೆ ಆದ್ರೆ ಈ ವಯಸ್ಸಲ್ಲಿ 2ನೇ ಮದ್ವೆ ಆಗೋದು ಸ್ವಲ್ಪ ಕಷ್ಟ ಜನ ಏನ್ ಅನ್ಕೋತಾರೋ ಅನ್ನೋ ಭಯವಿದೆ ಎಂದ ನಟಿ ಪ್ರಗತಿ.
ಪ್ರಗತಿ ಅವರು ಸದ್ಯಕ್ಕೆ ತೆಲುಗು ಸಿನಿಮಾ ರಂಗದ ಬಹು ಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ, ನಾಯಕಿ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಸದ್ಯಕ್ಕೆ ಈಗ ಪೋಷಕ ನಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. 1994ರಲ್ಲಿ ಹೀರೋಯಿನ್ ಆಗಿ ಎಂಟ್ರಿ ಆಗಿದ್ದ ಇವರು ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಕೂಡ ಅಭಿನಯಿಸಿದ್ದರು ಇದಾದ ಬಳಿಕ ಮದುವೆ ಆಗಿ ವೈಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದರು. ಅನೇಕ ವರ್ಷಗಳ ನಂತರ ಮಹೇಶ್ ಬಾಬು ಅವರ ಬಾಬಿ ಸಿನಿಮಾದಲ್ಲಿ ಕಂಬ್ಯಾಕ್ ಮಾಡಿದರು….