ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ
ಶ್ರೀನಗರ ಕಿಟ್ಟಿ (Shreenagara Kitti) ಅವರು ಇದೇ ಮೊದಲ ಬಾರಿಗೆ ಸಿನಿಮಾ ರಂಗದಿಂದ ಬಹಳ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಕಳೆದ ಮೂರರಿಂದ ನಾಲ್ಕು ವರ್ಷದ ಪ್ರಯತ್ನವನ್ನೆಲ್ಲಾ ಗೌಳಿ (Gowli) ಎನ್ನುವ ಸಿನಿಮಾದಲ್ಲಿ ಹಾಕಿ ಅದನ್ನು ರಿಲೀಸ್ ಹಂತಕ್ಕೆ ತಂದಿದ್ದಾರೆ. ಇದೇ ಫೆಬ್ರವರಿ 24ರಂದು ಕರ್ನಾಟಕದಾದ್ಯಂತ ಗೌಳಿ ಎನ್ನುವ ಚಂದನವನದ ಬಹುನಿರೀಕ್ಷಿತ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ತಂಡ ಇದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ, ಅದರ ಅಂಗವಾಗಿ ಸಂದರ್ಶನಕ್ಕೆ ಬಂದ ಶ್ರೀನಗರ ಕಿಟ್ಟಿ ಅವರು ಸಿನಿಮಾದ ಕಥೆ…